ವೀರಾಜಪೇಟೆ, ಮೇ ೧೭: ವೀರಾಜಪೇಟೆ ನಗರದ ಮೀನುಪೇಟೆ ಮಲಬಾರ್ ರಸ್ತೆಯ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದ ವಾರ್ಷಿಕ ಕರಗ ಮಹೋತ್ಸವ ವಿಜೃಂಭಣೆ ಯಿಂದ ನಡೆಯಿತು. ಮಹೋತ್ಸವ ಅಂಗವಾಗಿ ರಾಜ ಬೀದಿಗಳಲ್ಲಿ ಕರಗ ಆರಾಧನೆ ನಡೆಯಿತು.

ತೆಲುಗರ ಬೀದಿ, ಶ್ರೀ ಮಾರಿಯಮ್ಮ ದೇವಾಲಯದಲ್ಲಿ ಕರಗವನ್ನು ಕಟ್ಟಿ ಕರಗ ಪ್ರದರ್ಶನ ನಡೆಯಿತು. ತೆಲುಗರ ಬೀದಿ ಸೇರಿದಂತೆ ಮುಖ್ಯ ಬೀದಿಗಳಲ್ಲಿ ಕರಗಕ್ಕೆ ಭಕ್ತರು ಭಕ್ತಿಪೂರ್ವಕ ಪೂಜೆಯನ್ನು ಸಲ್ಲಿಸಿದರು. ಬಳಿಕ ಮೀನುಪೇಟೆ ದೇಗುಲದಲ್ಲಿ ಮಾಹಾಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ತಾ. ೧೮ ರಂದು (ಇಂದು) ಮಧ್ಯಾಹ್ನ ೧೨ ಗಂಟೆಗೆ ಮಾಹಾಪೂಜೆ ಮತ್ತು ಅನ್ನಸಂತರ್ಪಣೆ, ಮಾರಿಯಮ್ಮ ದೇವಿಯ ಕರಗ ವಿಸರ್ಜನೆ ನಡೆಯಲಿದೆ. ಉತ್ಸವದಲ್ಲಿ ದೇಗುಲದ ಆಡಳಿತ ಮಂಡಳಿ ಸದಸ್ಯರು, ಜನಾಂಗ ಬಾಂಧವರು ಹಾಗೂ ಅರ್ಚಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ದೇವಿಯ ಕೃಪೆಗೆ ಪಾತ್ರರಾದರು. ಅಂಗಾಳ ಪರಮೇಶ್ವರಿ ದೇವಾಲಯದಲ್ಲಿ ದ್ವಿಕರಗಗಳಿಗೂ ಪೂಜೆ ಸಲ್ಲಿಕೆಗೊಂಡವು. ನಂತರ ದೇಗುಲದ ಆಡಳಿತದ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು.