ಮರಗೋಡು, ಮೇ ೧೭ : ಗ್ರಾಮದ ಜನತಾ ಕಾಲೋನಿಯ ವಾಸುಕಿ ಸನ್ನಿಧಿಯಲ್ಲಿ ವಾಸುಕಿ ಕಲಶೋತ್ಸವ ಸಮಿತಿ ವತಿಯಿಂದ ನಾಗದೇವರ ವಾರ್ಷಿಕೋತ್ಸವ ಹಾಗೂ ಆಶ್ಲೇಷ ಬಲಿ ಪೂಜೆ ತಾ.೨೧ ರ ಭಾನುವಾರ ನಡೆಯಲಿದೆ. ವಾರ್ಷಿಕೋತ್ಸವ ಪ್ರಯುಕ್ತ ಬೆಳಿಗ್ಗೆ ೮.೩೦ ಕ್ಕೆ ಪುಣ್ಯಾಹ , ಗಣಪತಿ ಹೋಮ, ೧೦.೩೦ ಕ್ಕೆ ಆಶ್ಲೇಷ ಬಲಿ ಪೂಜೆ, ಮಧ್ಯಾಹ್ನ ೧೨.೩೦ ಕ್ಕೆ ನಾಗತಂಬಿಲ, ಮಹಾಪೂಜೆ ಬಳಿಕ ೧.೩೦ಕ್ಕೆ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ನಂತರ ಉಡುಪಿಯ ಶ್ರೀ ಪುತ್ತಿಗೆ ಮಠದ ಕೋಟಿ ಗೀತಾಲೇಖನ ಯಜ್ಞ ಸಮಿತಿಯ ಭಗವದ್ಗೀತಾ ಪ್ರಚಾರಕರಾದ ವಿದ್ವಾನ್ ಕೆ.ವಿ.ರಮಣ್ ಆಚಾರ್ ಅವರಿಂದ ಭಗವದ್ಗೀತೆಯ ಮಹತ್ವ ಮತ್ತು ಕೋಟಿ ಗೀತಾ ಲೇಖನ ಯಜ್ಞದ ಕುರಿತಾಗಿ ವಿಶೇಷ ಉಪನ್ಯಾಸ ನಡೆಯಲಿದೆ ಎಂದು ಸಮಿತಿ ತಿಳಿಸಿದೆ.