ಮಡಿಕೇರಿ, ಮೇ ೧೭: ಮಂಗಳಾದೇವಿ ನಗರದ ಶ್ರೀ ಆದಿಪರಾಶಕ್ತಿ ದೇವಿಯ ೫೮ನೇ ವಾರ್ಷಿಕ ಆರಾಧನೋತ್ಸವ ತಾ. ೨೫ ರಿಂದ ತಾ. ೩೧ ರವರೆಗೆ ನಡೆಯಲಿದೆ.

ತಾ. ೨೫ ರಂದು ಸಂಜೆ ೭ ಗಂಟೆಯಿAದ ವಿಶೇಷ ಪೂಜಾ ವಿಧಿವಿಧಾನಗಳೊಂದಿಗೆ ಹೂವರ ಕೇಳುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವುದು. ರಾತ್ರಿ ೧೦ ಗಂಟೆಯ ನಂತರ ಶ್ರೀ ಮುನೀಶ್ವರ ದೇವರ ಪೂಜೆ, ದೈವಗಣಗಳಿಗೆ ಆಹಾರ ತರ್ಪಣೆ ಸಲ್ಲಿಕೆ, ಅಗ್ನಿಕುಂಡದಲ್ಲಿ ಅಗ್ನಿದೇವರ ಪ್ರತಿಷ್ಠಾಪನೆ ನಡೆಯಲಿದೆ.

ತಾ. ೨೬ ರಂದು ಬೆಳಿಗ್ಗೆ ೯ ಗಂಟೆಗೆ ಶ್ರೀ ಗಣಪತಿ ಹೋಮ, ಉತ್ಸವ ಧ್ವಜಾರೋಹಣದೊಂದಿಗೆ ವಿಶೇಷ ಪೂಜೆ, ಅಗ್ನಿ ಕರಗದ ಪೂಜೆ ನಡೆಯಲಿದೆ. ತಾ. ೨೭ ರಂದು ಶ್ರೀ ಆದಿಪರಾಶಕ್ತಿ ದೇವಿಗೆ ಅಲಂಕೃತ ಪೂಜೆ, ಅಗ್ನಿ ಕರಗದ ನಗರ ಪ್ರದಕ್ಷಿಣೆಗೆ ವಿದ್ಯುಕ್ತ ಚಾಲನೆ ದೊರಕಲಿದೆ.

ತಾ. ೨೮ ರಂದು ಶ್ರೀ ದೇವಿಗೆ ವಿಶೇಷ ಪೂಜೆ, ಅಗ್ನಿ ಕರಗದ ನಗರ ಪ್ರದಕ್ಷಿಣೆ ನಡೆಯಲಿದೆ. ತಾ. ೨೯ ರಂದು ಸಂಜೆ ೭ ಗಂಟೆಗೆ ಪಂಪು ಕೆರೆಯಿಂದ ನಗರದ ರಾಜ ಬೀದಿಗಾಗಿ ಶ್ರೀ ಆದಿಪರಾಶಕ್ತಿ ದೇವಾಲಯದವರೆಗೆ ವಿದ್ಯುತ್ ಅಲಂಕೃತ ಮಂಟಪದೊAದಿಗೆ ಶ್ರೀ ಆದಿಪರಾಶಕ್ತಿ ದೇವಿಯ ಕಲಶ ತೀರ್ಥ, ಪಡಕಲಂ, ಹೂವಿನ ಕರಗ, ಅಗ್ನಿ ಕರಗಗಳ ಮೆರವಣಿಗೆ ಜರುಗಲಿದೆ.

ತಾ. ೩೦ ರಂದು ದೇವಾಲಯದ ಆವರಣದಲ್ಲಿ ಪೊಂಗಲ್ ಮತ್ತು ತಂಬಿಟ್ಟು ಕಲಶಗಳ ಉತ್ಸವ, ಮಧ್ಯಾಹ್ನ ೧೨ ಗಂಟೆಯಿAದ ಶ್ರೀ ದೇವಿಗೆ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ತಾ. ೩೧ ರಂದು ಅಪರಾಹ್ನ ೩ ಗಂಟೆಗೆ ಓಕುಳಿ, ಸಂಜೆ ೭ ಗಂಟೆಗೆ ಶ್ರೀ ಆದಿಪರಾಶಕ್ತಿ ದೇವಿಯ ಶಾಂತಿಪೂಜೆ, ಧ್ವಜ ಅವರೋಹಣದೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.