ಕೂಡಿಗೆ, ಮೇ ೧೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡೆಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೈಶ್ಚರ ದೇವಾಲಯದ ವಾರ್ಷಿಕ ಪೂಜ್ಯೋತ್ಸವದ ಅಂಗವಾಗಿ ತಾ. ೧೯ ರಂದು ಶನೈಶ್ಚರ ಜಯಂತಿಯ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಲಿದೆ. ಉತ್ಸವದ ಅಂಗವಾಗಿ ರಥೋತ್ಸವ, ವಿಗ್ರಹಕ್ಕೆ ಹಾರಂಗಿ ನದಿಯಲ್ಲಿ ಜಳಕ, ವೈಭವದ ಮೆರವಣಿಗೆ, ರಂಗ ಪೂಜೆ, ಪ್ರಸಾದ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯ ಧರ್ಮದರ್ಶಿ ಎಲ್ಲೂಬಾಯಿ ತಿಳಿಸಿದ್ದಾರೆ.