ಪಾಲಿಬೆಟ್ಟ, ಮೇ ೧೬: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ತೆರಳಿದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಘಟನೆ ಪಾಲಿಬೆಟ್ಟ ಸಮೀಪ ಮಸ್ಕಲ್ ಕಾಫಿ ತೋಟದಲ್ಲಿ ನಡೆದಿದೆ.

ಪಾಲಿಬೆಟ್ಟದ ನಿವಾಸಿ ಬಾಬಿ (೫೮) ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ಕಾರ್ಮಿಕನಾಗಿದ್ದು, ಐದು ವರ್ಷಗಳ ಹಿಂದೆಯೂ ದಾಳಿ ಮಾಡಿ ಗಾಯಗೊಳಿಸಿತ್ತು. ಪಾಲಿಬೆಟ್ಟ ಸಮೀಪದ ಮಸ್ಕಲ್ ಕಾಪಿ üತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ತೋಟದಲ್ಲಿದ್ದ ಕಾಡಾನೆ ದಿಢೀರ್ ದಾಳಿ ಮಾಡಿ ಎದೆ ಹಾಗೂ ಕೈಗೆ ಗಂಭೀರ ಗಾಯಗೊಳಿಸಿದೆ. ಗಂಭೀರ ಗಾಯಗೊಂಡಿದ್ದ ಬಾಬಿಯನ್ನ ಅಮ್ಮತ್ತಿ ಆರ್ ಐ ಹೆಚ್ ಪಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಮೈಸೂರಿಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಡಿಎಫ್‌ಓ ಶರಣಬಸಪ್ಪ, ಎಸಿಎಫ್ ನೆಹರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.