ಮಡಿಕೇರಿ, ಮೇ ೧೬: ಆಲೂರು-ಸಿದ್ದಾಪುರ ೬೬ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿದ್ದು, ಈ ಹಿನ್ನೆಲೆ ತಾ. ೧೭ ರಂದು (ಇಂದು) ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆವರೆಗೆ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಆಲೂರು-ಸಿದ್ದಾಪುರ, ಮಾಲಂಬಿ, ಹೊಸಗುತ್ತಿ, ಬಾಣಾವಾರ, ಗೋಣಿಮೂರೂರು, ಗಣಗೂರು ಹಾಗೂ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಅನಿತಾ ಬಾಯಿ ಕೋರಿದ್ದಾರೆ.