ಚೆಟ್ಟಳ್ಳಿ, ಮೇ ೧೩: ಕೊಡಗು ಜಿಲ್ಲೆಯ ವಿವಿಧ ಕಾಲೇಜುಗಳ ರಾಷ್ಟಿçÃಯ ಸೇವಾ ಯೋಜನೆ (ಎನ್.ಎಸ್.ಎಸ್.) ವಿದ್ಯಾರ್ಥಿಗಳು ಮತದಾನ ಕೇಂದ್ರದಲ್ಲಿ ಸೇವಾ ಕಾರ್ಯದಲ್ಲಿ ಭಾಗವಹಿಸಿ ಕರ್ತವ್ಯ ನಿರ್ವಹಿಸಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳನ್ನು ಚುನಾವಣಾ ಕಾರ್ಯದಲ್ಲಿ ಭಾಗವಹಿಸಿ ಕರ್ತವ್ಯ ನಿರ್ವಹಿಸಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳನ್ನು ಚುನಾವಣಾ ಆಯೋಗದ ಟಿ-ಶರ್ಟ್ ಹಾಗೂ ಗುರುತಿನ ಚೀಟಿ ಧರಿಸಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಸ್ವಯಂ ಸೇವಕ-ಸೇವಕಿಯರು ಮತಗಟ್ಟೆಗಳಲ್ಲಿನ ವಯೋವೃದ್ಧರಿಗೆ, ವಿಶೇಷಚೇತನರಿಗೆ ಸಹಾಯಹಸ್ತ ನೀಡಿದರು.

ಸ್ವಯಂ ಸೇವೆಯ ಬಗ್ಗೆ ಹಾಗೂ ಮತದಾನ ಪ್ರಕ್ರಿಯೆ ಬಗ್ಗೆ ತಿಳಿದಿದ್ದ ವಿದ್ಯಾರ್ಥಿಗಳು ಇದೇ ಮೊದಲ ಬಾರಿ ಮತದಾನ ಇದ್ದರೂ ತಮ್ಮ ತಮ್ಮ ಊರುಗಳಲ್ಲಿ ಮತ ಚಲಾಯಿಸಿ ದೂರದ ಊರಿಗೆ ಹೋಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಕೊಡಗು ಜಿಲ್ಲಾ ರಾಷ್ಟಿçÃಯ ಸೇವಾ ಯೋಜನಾ ಘಟಕದ ಅಧಿಕಾರಿ ವನಿತ್ ಕುಮಾರ್ ಎಂ.ಎನ್. ತಿಳಿಸಿದ್ದಾರೆ.