ಚೆಯ್ಯಂಡಾಣೆ, ಮೇ ೧೨. ಮರಗೋಡು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ೬ನೇ ವರ್ಷದ ಗೌಡ ಕುಟುಂಬಗಳ ನಡುವಿನ ಫುಟ್ಬಾಲ್ ಟ್ರೋಫಿ ಪಂದ್ಯಾಟದಲ್ಲಿ ಬಡುವಂಡ್ರ, ಪೊನ್ನಚನ, ಪೊಕ್ಕುಳಂಡ್ರ, ಕಟ್ಟೆಮನೆ ತಂಡಗಳು ಸೆಮಿಫೈನಲ್ಗೆ ಅರ್ಹತೆ ಗಳಿಸಿಕೊಂಡಿವೆ.
ಶನಿವಾರ ನಡೆದ ಪ್ರಿ ಕ್ವಾರ್ಟರ್ನ ಮೊದಲ ಪಂದ್ಯಾಟದಲ್ಲಿ ಮುಕ್ಕಾಟಿ (ಎ) ಕುಟುಂಬ ತಂಡ ಯಾಲದಾಳು ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ ೪-೩ ಗೋಲಿನಿಂದ, ಬಡುವಂಡ್ರ ತಂಡ ಬೆಳಿಯಂಡ್ರ ತಂಡವನ್ನು ೨-೦ ಗೋಲಿನಿಂದ, ಚೆಟ್ಟಿಮಾಡ ತಂಡ ಕೊಳಂಬೆ ತಂಡವನ್ನು ೨-೧ ಗೋಲಿನಿಂದ, ಪೊಕ್ಕುಳಂಡ್ರ ಕುಯ್ಯಮುಡಿ ತಂಡವನ್ನು ೧-೦ ಗೋಲಿನಿಂದ, ದೇವಜನ ಪಡಿಕ್ಕಲ್ ತಂಡವನ್ನು ೩-೦ ಗೋಲಿನಿಂದ, ಪೊನ್ನಚನ ಪೊಡನೊಳನ ತಂಡವನ್ನು ೩-೧ ಗೋಲಿನಿಂದ, ಕಲ್ಲುಮುಟ್ಲು ಕೋಳಿಬೈಲು ತಂಡವನ್ನು ೪-೦ ಗೋಲಿನಿಂದ, ಕಟ್ಟೆಮನೆ ತಂಡ ಪೆನಾಲ್ಟಿ ಶೂಟೌಟ್ನಲ್ಲಿ ಕಾಂಗಿರ ತಂಡವನ್ನು ೫-೩ ಗೋಲಿನಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿತು.
ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಡುವಂಡ್ರ ತಂಡ ಮುಕ್ಕಾಟಿ (ಎ) ತಂಡವನ್ನು ೨-೧ ಗೋಲಿನಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು. ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೊಕ್ಕುಳಂಡ್ರ ತಂಡ ಪೆನಾಲ್ಟಿ ಶೂಟೌಟ್ನಲ್ಲಿ ೪-೩ ಗೋಲಿನಿಂದ ಚೆಟ್ಟಿಮಾಡ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು.
ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದೇವಜನ ತಂಡ ಪೆನಾಲ್ಟಿ ಶೂಟೌಟ್ನಲ್ಲಿ ೩-೨ ಗೋಲಿನಿಂದ ಪೊನ್ನಚನ ತಂಡವನ್ನು ಸೋಲಿಸಿ ಸೆಮಿಫೈನಲ್ ತಲುಪಿತು. ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಟ್ಟೆಮನೆ ತಂಡ ಕಲ್ಲುಮುಟ್ಲು ತಂಡವನ್ನು ೨-೧ ಗೋಲಿನಿಂದ ಸೋಲಿಸಿ ಸೆಮಿಫೈನಲ್ ತಲುಪಿತು. ತಾ. ೧೪ ರ ಭಾನುವಾರ ಬೆಳಿಗ್ಗೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ೨ ಗಂಟೆಗೆ ನಡೆಯಲಿದೆ. ಫೈನಲ್ ಪಂದ್ಯಾಟವನ್ನು ಏರ್ ಇಂಡಿಯಾ ಹಾಕಿ ತಂಡದ ಮಾಜಿ ಆಟಗಾರ್ತಿ ಬಾಕಿಲನ ವನಿತಾ ವಿಜಯ್ ಉದ್ಘಾಟಿಸಲಿದ್ದಾರೆ.
ಸಮಾರೋಪ ಸಮಾರಂಭ ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ದುಷ್ಯಂತ್ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ಗೌಡ ಸಮಾಜದ ಅಧ್ಯಕ್ಷ ಕೇಕಡ ನಾಣಯ್ಯ ಪ್ರಮುಖರಾದ ಅಂಬೇಕಲ್ ನವೀನ್, ಕಟ್ಟೆಮನೆ ಪ್ರೇಮ ಗಣೇಶ್, ಕೋಚನ ಅನುಪ್, ಕಟ್ಟೆಮನೆ ಜನಾರ್ದನ, ಬಾಡನ ಚಿತ್ರ, ಕೆದಂಬಾಡಿ ಚಂದ್ರಕಲಾ ಮತ್ತಿತರರು ಭಾಗವಹಿಸಲಿದ್ದಾರೆ. ತಾ.೧೪ ರಂದು ಸೆಮಿಫೈನಲ್ ನಲ್ಲಿ ಗೆಲುವು ಸಾಧಿಸುವ ತಂಡಗಳು ಫೈನಲ್ ಪ್ರವೇಶಿಸಲಿವೆ.