ಶ್ರೀ ದುರ್ಗಿ ದೇವಿ ಉತ್ಸವ
ಮಡಿಕೇರಿ, ಮೇ ೧೨: ಚೆಟ್ಟಿಮಾನಿ ಕುದುಪಜೆ ಕುಟುಂಬಸ್ಥರ ನೇತೃತ್ವದಲ್ಲಿ ಶ್ರೀ ದುರ್ಗಿ ದೇವರ ವಾರ್ಷಿಕ ಉತ್ಸವ ತಾ. ೧೦ ರಂದು ನಡೆಯಬೇಕಿದ್ದು, ಚುನಾವಣಾ ನಿಮಿತ್ತ ಬದಲಾವಣೆ ಆಗಿ ತಾ. ೧೪ ರಂದು ನಡೆಯಲಿದೆ. ಅಂದು ಬೆಳಿಗ್ಗೆ ೮ ಗಂಟೆಯಿAದ ಸಂಜೆ ೪ ಗಂಟೆವರೆಗೆ ಪೂಜಾ ಕೈಂಕರ್ಯ ಜರುಗಲಿದೆ. ಮಧ್ಯಾಹ್ನ ಅನ್ನದಾನ ವ್ಯವಸ್ಥೆ ಇರಲಿದೆ ಎಂದು ಕುಟುಂಬದ ಬೋಜಪ್ಪ ಅವರು ಮಾಹಿತಿ ನೀಡಿದ್ದಾರೆ.