ವೀರಾಜಪೇಟೆ, ಮೇ ೧೧: ವಾಹನಗಳ ನಡುವೆ ಅಪಘಾತ ಸಂಭವಿಸಿದ ಘಟನೆ ವೀರಾಜಪೇಟೆ ಹೊರವಲಯ ಕೊಮ್ಮೆತೋಡು ಗ್ರಾಮದಲ್ಲಿ ನಡೆದಿದೆ.

ವೀರಾಜಪೇಟೆ ಸಿದ್ದಾಪುರ ಮುಖ್ಯ ರಸ್ತೆಯ ಕೊಮ್ಮೆತೋಡು ಬಳಿಯ ಸಂತ ಮರಿಯ ಚರ್ಚ್ ಮುಂಭಾಗದ ತಿರುವಿನಲ್ಲಿ ವೀರಾಜಪೇಟೆ ನಗರದಿಂದ ಸಿದ್ದಾಪುರಕ್ಕೆ ತೆರಳುತಿದ್ದ ಗೂಡ್ಸ್ ವಾಹನ ಮತ್ತು ಸಿದ್ದಾಪುರದಿಂದ ವೀರಾಜಪೇಟೆ ನಗರಕ್ಕೆ ಆಗಮಿಸುತಿದ್ದ ಟೊಯೋಟಾ ಇನ್ನೋವ ಕಾರು ನಡುವೆ ಡಿಕ್ಕಿಯಾಗಿದೆ. ಇನ್ನೋವÀ ವಾಹನದಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಳುಗಳನ್ನು ಅಮ್ಮತ್ತಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.