ಚೆಯ್ಯಂಡಾಣೆ, ಮೇ ೧೧: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ವಿವಿಧ ಜನಾಂಗಗಳ ನಡುವಿನ ಫುಟ್ಬಾಲ್ ಪಂದ್ಯಾಟ ‘ಯೂನಿಟಿ ಕಪ್’ ೨೦೨೩ಕ್ಕೆ ಮರಗೋಡು ಪ್ರಾಥಮಿಕ ಶಾಲಾ ಮೈದಾನದಲ್ಲಿ ಚಾಲನೆ ನೀಡಲಾಯಿತು.
ಕಟ್ಟೆಮಾಡು, ಮರಗೋಡು, ಹೊಸ್ಕೇರಿ, ಅರೆಕಾಡು ಗ್ರಾಮಗಳ ಕ್ರೀಡಾಪಟುಗಳಿಗೆ ಪಂದ್ಯಾಟ ನಡೆಯುತ್ತಿದೆ. ಗುರುವಾರ ನಡೆದ ಪಂದ್ಯದಲ್ಲಿ ಅರೆಕಾಡು ಫ್ರೆಂಡ್ಸ್ ಮೊಗೇರ ಬ್ರದರ್ಸ್ ತಂಡವನ್ನು ೫-೦ ಗೋಲಿನಿಂದ, ವಾರಿಯರ್ ಎಫ್ ಸಿ ಪೂಜಾರಿ ಬ್ರದರ್ಸ್ ತಂಡವನ್ನು ೨-೧ ಗೋಲಿನಿಂದ, ಗೌಡ ಫುಟ್ಬಾಲ್ ಅಕಾಡೆಮಿ ಜೈ ಭೀಮ್ ತಂಡವನ್ನು ೪-೧ ಗೋಲಿನಿಂದ, ಮಲ್ಲುಬಾಯ್ಸ್ ಐಮಂಡ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ೫-೪ ಗೋಲಿನಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.
ನಂತರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅರೆಕಾಡು ಫ್ರೆಂಡ್ಸ್ ವಾರಿಯರ್ ಎಫ್.ಸಿ. ತಂಡವನ್ನು ಪೆನಾಲ್ಟಿ ಶೂಟೌಟ್ ೪-೩ ಗೋಲಿನಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಮಲ್ಲುಬಾಯ್ಸ್ ತಂಡ ಗೌಡ ಅಕಾಡೆಮಿ ತಂಡವನ್ನು ೧-೦ ಗೋಲಿನಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯಾಟ ತಾ. ೧೪ ರಂದು ನಡೆಯಲಿದೆ.