ಕೂಡಿಗೆ, ಮೇ ೧೧: ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ಜಿಲ್ಲೆಯ ಮೂರನೆ ಸಾಕಾನೆ ಶಿಬಿರ ಆರಂಭಗೊAಡು ೯ ತಿಂಗಳು ಕಳೆಯುತ್ತಾ ಬರುತ್ತಿದೆ.

ಇದೀಗ ಈ ಸಾಕಾನೆ ಶಿಬಿರಕ್ಕೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಈಗಿರುವ ೭ ಸಾಕಾನೆಗಳ ಜೊತೆಗೆ ದುಬಾರೆಯ ಎರಡು ಸಾಕಾನೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಅಲ್ಲದೆ ಕೇಂದ್ರದಲ್ಲಿರುವ ಕಲ್ಲು ಮತ್ತು ಮರದ ಬೇರುಗಳನ್ನು ಬಳಕೆ ಮಾಡಿಕೊಂಡು ವಿವಿಧ ಭಂಗಿಯ ಪ್ರಾಣಿಗಳ ಚಿತ್ರಗಳು, ಮರವನ್ನು ಬಳಕೆ ಮಾಡಿಕೊಂಡು ಆಕರ್ಷಕ ರೀತಿಯಲ್ಲಿ ಕುಟೀರಗಳ ನಿರ್ಮಾಣದೊಂದಿಗೆ ಸಂಜೆ ಸೂರ್ಯಾಸ್ತಮ ವೀಕ್ಷಣೆ ಮಾಡಲು ಅನುಕೂಲವಾಗುವಂತೆ ಒಂದು ಬೃಹತ್ ಮರವನ್ನು ಬಳಸಿಕೊಂಡು ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯಲ್ಲಿ ದುಬಾರೆ ಮತ್ತು ಮತ್ತಿಗೋಡು ಸಾಕಾನೆ ಶಿಬಿರದೊಂದಿಗೆ ಇದೀಗ ಹೊಸದಾಗಿ ಹಾರಂಗಿಯ ಸಾಕಾನೆ ಶಿಬಿರ ಜಿಲ್ಲೆಯ ಮೂರನೆ ಶಿಬಿರವಾಗಿ ಆರಂಭಗೊAಡಿದ್ದು, ಈ ಶಿಬಿರಕ್ಕೆ ದುಬಾರೆಯ ಸಾಕಾನೆ ಶಿಬಿರದಲ್ಲಿದ್ದ ಹರ್ಷ (೫೩) ಮತ್ತು ಕರ್ಣ (೩೩) ಸಾಕಾನೆಗಳು ಸೇರ್ಪಡೆಗೊಂಡಿವೆ.

ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಾರಂಗಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಆನೆ ಸಫಾರಿಯನ್ನು ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ತಿಳಿಸಿದ್ದಾರೆ.

ಹಾರಂಗಿ ಸಾಕಾನೆ ಶಿಬಿರದಲ್ಲಿ ಈಗಾಗಲೇ ದುಬಾರೆಯಿಂದ ಸ್ಥಳಾಂತರಿಸಲ್ಪಟ್ಟ ಏಕದಂತ, ವಿಜಯ, ರಾಮ, ಮಾರುತಿ, ಸುಬ್ರಮಣ್ಯ, ವಿಕ್ರಮ, ಲಕ್ಷö್ಮಣ್ ಸೇರಿದಂತೆ ಏಳು ಸಾಕಾನೆಗಳು ಇದ್ದು, ಇದೀಗ ಹೆಚ್ಚುವರಿಯಾಗಿ ಹರ್ಷ ಮತ್ತು ಕರ್ಣ ಸೇರ್ಪಡೆಯಾಗಿವೆ.

- ಕೆ.ಕೆ. ನಾಗರಾಜಶೆಟ್ಟಿ