ಮಡಿಕೇರಿ, ಮೇ ೧೧: ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆ ಇದೀಗ ಮುಕ್ತಾಯಗೊಂಡಿದೆ. ಕೊಡಗು ಜಿಲ್ಲೆಯಲ್ಲಿ ತಾ. ೧೦ರಂದು ನಡೆದ ಚುನಾವಣೆಯಲ್ಲಿ ಶೇ.೭೪.೭೪ ರಷ್ಟು ಮತದಾನವಾಗಿದ್ದು, ಜಿದ್ದಾಜಿದ್ದಿನ ಮತ ಸಮರಕ್ಕೆ ತೆರೆ ಬಿದ್ದಂತಾಗಿದೆ. ಇದೀಗ ಏನಿದ್ದರೂ ಲೆಕ್ಕಾಚಾರ... ವಿಶ್ಲೇಷಣೆ... ಬೆಟ್ಟಿಂಗ್- ಕಾತರ-ಕುತೂಹಲ- ಊಹಾಪೋಹ - ಏಳು - ಬೀಳುಗಳ ಚರ್ಚೆಯದ್ದೇ ಮಾತು. ಚುನಾವಣಾ ಅಖಾಡದಲ್ಲಿ ರುವ ಅಭ್ಯರ್ಥಿಗಳ ಕುರಿತಾಗಿ ಈಗಾಗಲೇ ಮತದಾರ ತನ್ನ ತೀರ್ಪನ್ನು ಗುಪ್ತವಾಗಿ ನೀಡಿಯಾಗಿದೆ. ಈ ತೀರ್ಪು ಇದೀಗ ಮತಯಂತ್ರ ದಲ್ಲಿದ್ದು, ತಾ. ೧೩ರಂದು (ನಾಳೆ) ನಡೆಯಲಿರುವ ಮತ ಎಣಿಕೆಗಾಗಿ ಜನರು ಕಾತರರಾಗಿದ್ದಾರೆ. ಜನತೆಯ ಕುತೂಹಲ ಒಂದೆಡೆ ಯಾದರೆ, ರಾಜಕೀಯ ಪಕ್ಷಗಳು ಅರ್ಭ್ಯರ್ಥಿಗಳು ತಳಮಳದಿಂದಿದ್ದು, ಮತದಾರರು ನೀಡಿರುವ ತೀರ್ಪು ಏನಿರಬಹುದು ಎಂಬ ಯಕ್ಷ ಪ್ರಶ್ನೆಯಾಗಿದೆ. ಎರಡು ದಿನಗಳ ಕಾಲದ ಈ ಕೌತುಕದ ಸನ್ನಿವೇಶ ಅಭ್ಯರ್ಥಿಗಳ ನಿದ್ದೆಗೆಡಿಸಿದ್ದರೆ, ಕಾರ್ಯಕರ್ತರು ಬೆಂಬಲಿಗರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಇದೀಗ ಲೆಕ್ಕಾಚಾರಗಳು - ವಿಮರ್ಶೆಗಳು ರಂಗೇರುತ್ತಿವೆ. ಮುಂದಿನ ಎಂ.ಎಲ್.ಎ. ಯಾರಾಗಬಹುದು ಎಂಬ ಬಗ್ಗೆ ತಮ್ಮದೇ ಆದ ಚರ್ಚೆಗಳ ಮೂಲಕ ಮತದಾರರು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಫಲಿತಾಂಶದೊAದಿಗೆ ಈ ಬಾರಿಯ ಪರಿಸ್ಥಿತಿಯನ್ನು ತಾಳೆಹಾಕಿ ಯಾರು ವಿಜಯಶಾಲಿ ಗಳಾಗಬಹುದು ಎಂಬ ಅವಲೋಕನ ಪ್ರಸ್ತುತದ ಚರ್ಚೆಯಾಗಿದೆ.
ಕಳೆದ ಬಾರಿಯ ನೋಟ
೨೦೧೮ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಹಾಲಿ ಶಾಸಕ ಬಿಜೆಪಿಯ ಅಪ್ಪಚ್ಚು ರಂಜನ್ ಅವರು ೧೬೦೧೫ ಮತಗಳ ಅಂತರದಿAದ ಗೆಲುವು ಸಾಧಿಸಿದ್ದರು. ಇವರು ೭೦,೬೩೧ ಮತಗಳನ್ನು ಪಡೆದರೆ, ಸಮೀಪದ ಪ್ರತಿಸ್ಪರ್ಧಿ ಜೆ.ಡಿ.ಎಸ್.ನ ಬಿ.ಎ. ಜೀವಿಜಯ ೫೪,೬೧೬ ಮತ ಹಾಗೂ ಕಾಂಗ್ರೆಸ್ನ ಕೆ.ಪಿ. ಚಂದ್ರಕಲಾ ೩೮,೨೧೯ ಮತ ಪಡೆದಿದ್ದರು.
ವೀರಾಜಪೇಟೆ ಕ್ಷೇತ್ರದಲ್ಲಿ ಕಳೆದ ಬಾರಿ ಹಾಲಿ ಶಾಸಕ ಬಿಜೆಪಿಯ ಕೆ.ಜಿ. ಬೋಪಯ್ಯ ಅವರು ೧೩,೩೫೩ ಮತಗಳ ಅಂತರದಿAದ ಗೆಲುವು ಸಾಧಿಸಿದ್ದರು. ಇವರು ೭೭,೯೪೪ ಮತ ಗಳಿಸಿದರೆ ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ನ ಅರುಣ್ ಮಾಚಯ್ಯ ೬೪,೫೯೧ ಮತ ಹಾಗೂ ಜೆ.ಡಿ.ಎಸ್.ನ ಸಂಕೇತ್ ಪೂವಯ್ಯ ೧೧,೨೨೪ ಮತ ಪಡೆದಿದ್ದರು.
ಇದೀಗ ನಗರದ ಸಂತ ಜೋಸೆಫರ ಶಾಲೆಯ ಡಿ. ಮಸ್ಟರಿಂಗ್ ಕೇಂದ್ರದಲ್ಲಿ ಬಿಗಿ ಭದ್ರತೆಯಲ್ಲಿ ಎರಡೂ ಕ್ಷೇತ್ರಗಳ ಮತಯಂತ್ರಗಳನ್ನು ಇರಿಸಲಾಗಿದ್ದು, ತಾ.೧೩ರಂದು (ನಾಳೆ) ಮತ ಎಣಿಕೆ ನಡೆಯಲಿದ್ದು, ಕೌತುಕಕ್ಕೆ ತೆರೆ ಬೀಳಲಿದೆ.
ಕೊಡಗಿನಲ್ಲಿ ಈ ಬಾರಿಯ ಮತ ಚಲಾವಣೆ
ಕೊಡಗು ಜಿಲ್ಲೆಯಲ್ಲಿ ಈ ಬಾರಿ ಶೇ.೭೪.೭೪ರಷ್ಟು ಮತ ಚಲಾವಣೆ ಯಾಗಿದೆ. ಒಟ್ಟು ೪,೫೬,೩೧೩ ಮತದಾರರ ಪೈಕಿ ೩,೪೧,೦೪೬ ಮಂದಿ ಮತ ಚಲಾಯಿಸಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ೨,೩೨,೧೪೮ ಮತದಾರರ ಪೈಕಿ ೧,೭೫,೦೦೯ ಮಂದಿ ಮತ ಹಾಕಿದ್ದು, ಶೇ.೭೫.೩೯ರಷ್ಟು ಮತದಾನವಾಗಿದೆ.
ವೀರಾಜಪೇಟೆ ಕ್ಷೇತ್ರದಲ್ಲಿ ಒಟ್ಟು ೨,೨೪,೧೬೫ ಮತದಾರರ ಪೈಕಿ, ೧,೬೬,೦೩೭ ಮಂದಿ ಮತ ಚಲಾಯಿ ಸಿದ್ದು, ಈ ಕ್ಷೇತ್ರದಲ್ಲಿ ಶೇ.೭೪.೦೭ರಷ್ಟು ಮತ ಚಲಾವಣೆಯಾಗಿದೆ.