ಮಡಿಕೇರಿ, ಮೇ ೮: ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಇಂದು ಪ್ರಕಟಿಸಿದೆ. ರಾಜ್ಯದಲ್ಲಿ ಈ ಬಾರಿ ಕೊಡಗು ಜಿಲ್ಲೆ ಶೇ.೯೩.೧೪ರಷ್ಟು ಫಲಿತಾಂಶದೊAದಿಗೆ ಒಂಭತ್ತನೆಯ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷ ಜಿಲ್ಲೆ ಶೇ.೯೧ರಷ್ಟು ಫಲಿತಾಂಶದೊAದಿಗೆ ರಾಜ್ಯದಲ್ಲಿ ೧೧ನೆಯ ಸ್ಥಾನ ಗಳಿಸಿತ್ತು. ಇದೀಗ ಫಲಿತಾಂಶದಲ್ಲಿ ಸುಧಾರಣೆ ಕಂಡುಬAದಿದ್ದು, ಎರಡು ಸ್ಥಾನ ಏರಿಕೆಯಾಗಿರುವುದು ವಿಶೇಷವಾಗಿದೆ.
ಕೊಡಗು ಜಿಲ್ಲೆಯ ಮಡಿಕೇರಿಯ ಸಂತ ಮೈಕಲರ ಅನುದಾನಿತ ಪ್ರೌಢಶಾಲೆಯ ಮರ್ಲಿನ್ ಲಸ್ರಾಡೋ ಹಾಗೂ ವೀರಾಜಪೇಟೆ ಸೈಂಟ್ ಆನ್ಸ್ ಪ್ರೌಢಶಾಲೆಯ ವೈಷ್ಣವಿ ಟಿ.ವಿ ಅವರುಗಳು ೬೨೫ಕ್ಕೆ ೬೨೦ ಅಂಕಗಳನ್ನು ಪಡೆದು ಶೇ.೯೯.೨ ಗಳಿಸುವುದರ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಮರ್ಲಿನ್ ಅವರು ವಿನ್ಸಿ ಲಸ್ರಾಡೊ ಹಾಗೂ ಮರಿಯಾ ಪ್ರಿಯಾ ಲೋಬೋ ದಂಪತಿ ಪುತ್ರಿಯಾಗಿದ್ದು, ವೈಷ್ಣವಿ ಅವರು ವೀರಾಜಪೇಟೆ ತೆಲುಗರ ಬಡಾವಣೆಯ ವೆಂಕಟೇಶ್ ಟಿ.ಎನ್ ಹಾಗೂ ಶೈಲಾ ಟಿ.ವಿ ದಂಪತಿ ಪುತ್ರಿ.
ಕುಶಾಲನಗರ ಫಾತಿಮಾ ಕಾನ್ವೆಂಟ್ ವಿದ್ಯಾರ್ಥಿನಿ ಶ್ರೀವಿದ್ಯಾ ಡಿ ಅವರು ೬೧೯ ಅಂಕ (ಶೇ.೯೯.೦೪) ಗಳಿಸಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.
(ಮೊದಲ ಪುಟದಿಂದ) ಇವರು, ಕುಶಾಲನಗರ ದಲ್ಲಿ ವಾಸವಿದ್ದು, ಗುಡ್ಡೆಹೊಸೂರಿನಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ದಿನೇಶ್ ಹಾಗೂ ಜ್ಯೋತಿ ದಂಪತಿ ಪುತ್ರಿ.
ಕೂಡಿಗೆ ಏಂಜೆಲಾ ವಿದ್ಯಾನಿಕೇತನ ಶಾಲೆಯ ಚೇತನ್ ಎಸ್.ಎನ್ ಹಾಗೂ ಗೋಣಿಕೊಪ್ಪ ಲಯನ್ಸ್ ಪ್ರೌಢಶಾಲೆಯ ದೀತ್ಯಾ ದೇಚಮ್ಮ ಎಂ.ವಿ ಅವರುಗಳು ೬೧೮ (ಶೇ.೯೮.೮೮) ಗಳಿಸುವ ಮೂಲಕ ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ಚೇತನ್ ಅವರು, ನಾಗೇಂದ್ರ ಹಾಗೂ ಜ್ಯೋತಿಲಕ್ಷಿö್ಮ ದಂಪತಿಯ ಪುತ್ರರಾಗಿದ್ದು, ದೀತ್ಯಾ ದೇಚಮ್ಮ ಅವರು ರುದ್ರಬೀಡು ಗ್ರಾಮದ ವಿವೇಕ್ ಎಮ್.ಎ ಹಾಗೂ ರಮ್ಯಾ ಎಮ್.ವಿ ದಂಪತಿಯ ಪುತ್ರಿ.
ಮಡಿಕೇರಿ ತಾಲೂಕಿನ ೧,೭೬೯, ಸೋಮವಾರಪೇಟೆಯ ೨,೩೮೩ ಹಾಗೂ ವೀರಾಜಪೇಟೆಯ ೧,೮೭೪ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಆಗಿದ್ದು, ಒಟ್ಟು ೬,೦೨೬ ಮಂದಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ ಮಡಿಕೇರಿಯಲ್ಲಿ ೧,೬೦೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.೯೦.೯೦ ಫಲಿತಾಂಶ ದೊರಕಿದೆ. ಸೋಮವಾರಪೇಟೆಯಲ್ಲಿ ೨,೨೭೦ ವಿದ್ಯಾರ್ಥಿಗಳು ಉತ್ತೀರ್ಣರಾಗಿ ೯೫.೨೬ ಶೇ ದೊರಕಿದೆ ಹಾಗೂ ವೀರಾಜಪೇಟೆಯಲ್ಲಿ ೧,೭೧೯ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.೯೧.೭೩ ಲಭಿಸಿದೆ. ಒಟ್ಟು ಜಿಲ್ಲಾವಾರು ಶೇ.೯೩.೧೯ ಆಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಂಗದಾಮಯ್ಯ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಒಟ್ಟು ೬೧ ಶಾಲೆಗಳು ಶೇ.೧೦೦ ರಷ್ಟು ಫಲಿತಾಂಶ ಪಡೆದಿರುವುದಾಗಿಯು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಒಟ್ಟು ೮೩೫೧೦೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೭೦೦೬೧೯ ಮಂದಿ ತೇರ್ಗಡೆಯಾಗುವ ಮೂಲಕ ಶೇ.೮೩.೮೯ರಷ್ಟು ಫಲಿತಾಂಶ ಬಂದಿದೆ. ೨೦೧೯-೨೦ರಲ್ಲಿ ರಾಜ್ಯದಲ್ಲಿ ಒಟ್ಟಾರೆಯಾಗಿ ಶೇ.೭೧.೮೦ರಷ್ಟು ಮಾತ್ರ ಫಲಿತಾಂಶ ಬಂದಿದ್ದು, ಇದು ಕಳೆದ ಐದು ವರ್ಷಗಳ ಅವಧಿಯಲ್ಲಿನ ಕಡಿಮೆ ಫಲಿತಾಂಶವಾಗಿತ್ತು. ೨೦೨೧-೨೨ರಲ್ಲಿ ಶೇ.೮೫.೧೩ರಷ್ಟು ಫಲಿತಾಂಶ ಬಂದಿತ್ತು.
೨೦೧೯-೨೦ ಮತ್ತು ೨೦೨೧-೨೨ನೇ ಸಾಲಿನಲ್ಲಿ ಪ್ರಶ್ನೆಪತ್ರಿಕೆಯ ಕಠಿಣತೆಯ ಮಟ್ಟವು ಕ್ರಮವಾಗಿ ಶೇ.೨೦ ಮತ್ತು ಶೇ.೧೦ ಆಗಿತ್ತು. ೨೦೨೨-೨೩ನೇ ಸಾಲಿನಲ್ಲಿ ಕಠಿಣತೆಯ ಮಟ್ಟ ಮತ್ತೆ ಶೇ.೨೦ರಷ್ಟಾಗಿದ್ದು, ಇವುಗಳನ್ನು ಅವಲೋಕಿಸಿದಾಗ ಈ ವರ್ಷದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆಯು ೨೦೧೯-೨೦ನೇ ವರ್ಷಕ್ಕಿಂತ ಶೇ.೧೨.೦೯ರಷ್ಟು ಉತ್ತಮವಾಗಿರುವುದು ಕಂಡುಬAದಿರುವುದಾಗಿ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ತಿಳಿಸಿದೆ.
ಬಾಲಕಿಯರೇ ಮೇಲುಗೈ
ಈ ಹಿಂದಿನ ವರ್ಷಗಳಂತೆ ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ೪,೦೯,೧೩೪ ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, ೩,೫೯,೫೧೧ ಮಂದಿ ಉತ್ತೀರ್ಣರಾಗಿ ಶೇ.೮೭.೮೭ರಷ್ಟು ಸಾಧನೆ ಕಂಡುಬAದಿದೆ.
೪,೨೫,೯೬೮ ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ೩,೪೧,೧೦೮ ಮಂದಿ ಉತ್ತೀರ್ಣರಾಗಿ ಶೇ.೮೦.೦೮ ರಷ್ಟು ಫಲಿತಾಂಶ ಬಂದಿದೆ.
ನಗರ ಪ್ರದೇಶದಲ್ಲಿ ಶೇ.೭೯.೬೨ ರಷ್ಟು ಹಾಗೂ ಗ್ರಾಮೀಣ ಭಾಗದಲ್ಲಿ ಶೇ.೮೭ರಷ್ಟು ಫಲಿತಾಂಶ ಬಂದಿರುವುದು ವಿಶೇಷವಾಗಿದೆ.
ಚಿತ್ರದುರ್ಗ ಪ್ರಥಮ
ಈ ಬಾರಿ ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯು ೯೬.೮ ಉತ್ತೀರ್ಣ ಶೇಕಡ ಪಡೆದು ಮೊದಲನೆ ಸ್ಥಾನ ಗಳಿಸಿದೆ. ಮಂಡ್ಯ ಜಿಲ್ಲೆಯು ೯೬.೭೪ ಶೇಕಡದೊಂದಿಗೆ ೨ನೆ ಸ್ಥಾನ, ಹಾಸನ ೯೬.೬೮ ಶೇಕಡದೊಂದಿಗೆ ೩ನೆ ಸ್ಥಾನ ಗಳಿಸಿವೆ. ಪ್ರತಿ ವರ್ಷ ಅತ್ಯುತ್ತಮ ಸ್ಥಾನ ಗಳಿಸುತ್ತಿದ್ದ ಉಡುಪಿ ಹಾಗೂ ದ.ಕನ್ನಡ ಕ್ರಮವಾಗಿ ೧೮ ಹಾಗೂ ೧೯ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ. ಯಾದಗಿರಿ ಕೊನೆಯ ಸ್ಥಾನ ಪಡೆದಿದೆ.