(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಮೇ ೭: ವಿಶೇಷವಾದ ಚಾರಿತ್ರಿಕ ಹಿನ್ನೆಲೆ, ಸಾಂಸ್ಕೃತಿಕ ಐಸಿರಿ, ಭೌಗೋಳಿಕತೆ, ಧಾರ್ಮಿಕ ಪರಂಪರೆಯAತಹ ವಿಶೇಷತೆಗಳನ್ನು ಹೊಂದಿರುವ ಕೊಡಗು ಹಾಗೂ ಈ ಮಣ್ಣಿನ ಜನಾಂಗವಾದ ಕೊಡವರನ್ನು ಭವಿಷ್ಯದಲ್ಲೂ ಪರಸ್ಪರ ಬೆಸೆಯುವ ಹಿತ ಚಿಂತನೆಯೊAದಿಗೆ ಇದೇ ಪ್ರಥಮ ಬಾರಿಗೆ ಕೊಡವ ಯುವಮೇಳ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಜಬ್ಭೂಮಿ ಚಾರಿಟೇಬಲ್ ಟ್ರಸ್ಟ್ನ ಅಧೀನದಲ್ಲಿ ವಿವಿಧ ಕೊಡವ ಸಮಾಜಗಳು, ಸಂಘ-ಸAಸ್ಥೆಗಳ ಸಹಭಾಗಿತ್ವದಲ್ಲಿ ಮೇ ೨೦ ರಂದು ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕೊಡಗು-ಕೊಡವರಿಗೆ ಅವಿನಾಭಾವ ಸಂಬAಧವಿದ್ದು ಇದು ಹಲವು ಮಹತ್ವದೊಂದಿಗೆ ಬೆರೆತಿದೆ. ಆದರೆ, ಪ್ರಸ್ತುತ ಜನಾಂಗದ ಯುವ ಪೀಳಿಗೆ ಚದುರಿದಂತಾಗಿದ್ದು, ಇವರೆಲ್ಲರೂ ಪರಸ್ಪರ ಬೆಸೆಯುವಂತಾಗಬೇಕು. ಸಾಮರಸ್ಯದೊಂದಿಗೆ ಭವಿಷ್ಯದಲ್ಲೂ ಹಿಂದಿನ ವಿಶೇಷತೆಗಳು ಮುಂದುವರಿಯುವAತಾಗಬೇಕು ಎಂಬ ಉದ್ದೇಶದೊಂದಿಗೆ ಜಿಲ್ಲೆ ಸೇರಿದಂತೆ ರಾಜ್ಯದ ಇತರೆಡೆ, ದೇಶದ ಇತರೆಡೆ ಹಾಗೂ ಹೊರದೇಶಗಳಲ್ಲೂ ನೆಲೆಸಿರುವ ಯುವಕ-ಯುವತಿಯರನ್ನು ಒಂದೇ ಚಪ್ಪರದಡಿ ಸೇರಿಸುವಂತಹ ಪ್ರಯತ್ನ ಇದಾಗಿದೆ ಎಂದು ಇದರ ಹಿಂದೆ ಕಾರ್ಯನಿರ್ವಹಿಸುತ್ತಿರುವ ಪ್ರಮುಖರು ತಿಳಿಸಿದ್ದಾರೆ.
ಈ ಪ್ರಯತ್ನಕ್ಕೆ ಎಲ್ಲಾ ಕೊಡವ ಸಮಾಜಗಳು, ಸಂಘ-ಸAಸ್ಥೆಗಳು, ಯುವ ಸಂಘಟನೆಗಳ ಸಹಕಾರವನ್ನು ಪಡೆದುಕೊಳ್ಳಲಾಗುತ್ತಿದೆ. ೧೫ ರಿಂದ ೪೦ರ ವಯೋಮಿತಿಯ ಯುವಕ-ಯುವತಿಯರಿಗಾಗಿ ಈ ಕಾರ್ಯಕ್ರಮ ಆಯೋಜಿ ಸಲಾಗುತ್ತಿದ್ದು, ಹಿರಿಯರು ಇವರ ಹಿಂದಿರುತ್ತಾರೆ.
ಕಳೆದ ಹಲವು ಸಮಯದಿಂದ ಇದರ ಪೂರ್ವತಯಾರಿ ನಡೆದಿದೆ ಎಂದು ಅವರುಗಳು ತಿಳಿಸಿದ್ದಾರೆ. ಪರಸ್ಪರ ಪರಿಚಯದ ಮೂಲಕ ಭವಿಷ್ಯದಲ್ಲಿ ಎಲ್ಲರಿಗೂ ಇದು ಪೂರಕವಾಗುವಂತೆ ಯತ್ನಿಸಲಾಗುತ್ತಿದೆ. ಮೇ ೨೦ ರಂದು ಮಡಿಕೇರಿಯಲ್ಲಿ ಆಕರ್ಷಕವಾದ ಸಾಂಸ್ಕೃತಿಕ ಮೆರವಣಿಗೆಯನ್ನು ನಡೆಸಲಾಗುವುದು. ಬಳಿಕ ಕ್ರಿಸ್ಟಲ್ ಹಾಲ್ನಲ್ಲಿ ಕಾರ್ಯಕ್ರಮ ಜರುಗಲಿದೆ. ಆದರೆ ಯಾವುದೇ ವೇದಿಕೆ ಕಾರ್ಯಕ್ರಮವಾಗಲಿ, ಪ್ರಮುಖರಿಂದ ಭಾಷಣ ಇತ್ಯಾದಿ ವಿಚಾರಗಳು ಇರುವುದಿಲ್ಲ. ಬದಲಿಗೆ ವಿವಿಧ ಸ್ತರಗಳಲ್ಲಿ ಸಾಧನೆ ತೋರಿರುವ ಹಲವು ಮಂದಿ ಯುವ ಸಾಧಕರನ್ನು ಕರೆಸಿ ಅವರ ಮೂಲಕ ಯುವ ಜನಾಂಗವನ್ನು ಉತ್ತೇಜಿಸಲಾಗುವುದು. ಇದರೊಂದಿಗೆ ಹಾಡುಗಾರಿಕೆ, ಜಾಗೃತಿ ಮೂಡಿಸುವಂತಹ ನಾಟಕ ಪ್ರದರ್ಶನ, ಕೊಡವ ಪರಂಪರೆ, ಪದ್ಧತಿಯ ಮಹತ್ವವನ್ನು ಪ್ರತಿಬಿಂಬಿಸುವAತಹ ರೀತಿಯ ಸಂಸ್ಕೃತಿಗೆ ಪೂರಕವಾದ ಫ್ಯಾಷನ್ ಶೋ, ರ್ಯಾಂಪ್ ವಾಕ್ನಂತಹ ಕಾರ್ಯಕ್ರಮಗಳು ಜರುಗಲಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವಂತಹ ಯುವ ಸಾಧಕರು ಮುಖ್ಯ ಪ್ರೇರಣೆಯಾಗಲಿದ್ದಾರೆ ಎಂಬದಾಗಿ ಆಯೋಜಕರು ವಿವರಿಸಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಕೇವಲ ಹಿರಿಯರು ಮಾತ್ರ ಕಂಡುಬರುತ್ತಿದ್ದಾರೆ. ಯುವ ಜನಾಂಗದವರು ಉದ್ಯೋಗ ಮತ್ತಿತರ ಕಾರಣಗಳಿಂದ ಹಲವೆಡೆ ನೆಲೆ ಕಂಡುಕೊAಡಿದ್ದು, ಅವರುಗಳು ಕೊಡಗು-ಕೊಡವ ಸಂಸ್ಕೃತಿಯ ಬಗ್ಗೆ ಆಚಾರ-ವಿಚಾರಗಳ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಿಲ್ಲ. ಈ ಗಂಭೀರತೆಯನ್ನು ಅರಿತು ಅವರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಪ್ರತಿ ವರ್ಷ ಇಂತಹ ಯುವ ಮೇಳ ಆಯೋಜಿಸಿ ಎಲ್ಲರನ್ನು ಬೆಸೆಯುವಂತೆ ಮಾಡುವುದಷ್ಟೆ ಸಂಘಟಕರ ಉದ್ದೇಶವಾಗಿದೆ. ಇಲ್ಲಿ ಯಾವುದೇ ರೀತಿಯ ಬಲಪ್ರದರ್ಶನದ ಉದ್ದೇಶವಾಗಲಿ, ಇತರ ಸ್ವಾರ್ಥತೆಯಂತಹ ವಿಚಾರಗಳಲ್ಲಿ ಕೇವಲ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸುವುದು ಹಾಗೂ ಕೊಡಗಿನಲ್ಲೂ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ಅರ್ಥೈಸುವುದಷ್ಟೇ ಚಿಂತನೆಯಾಗಿದೆ. ಈ ಕುರಿತ ರೂಪು-ರೇಷೆಗಳು ಅಂತಿಮ ಹಂತದಲ್ಲಿರುವುದಾಗಿ ಆಯೋಜಕರು ವಿವರಿಸಿದ್ದಾರೆ.