ಮಡಿಕೇರಿ, ಮೇ ೭ : ರೆಗ್ಯೂಲರ್ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್‌ನಲ್ಲಿ ಸಹಕಾರ ತರಬೇತಿಗೆ ಕೊಡಗು ಮತ್ತು ಹಾಸನ ಜಿಲ್ಲೆಗಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರವೇಶ ಪಡೆದ ಎಲ್ಲಾ ಸಾಮಾನ್ಯ ಅಭ್ಯರ್ಥಿಗಳಿಗೆ ಪ್ರತಿ ಮಾಹೆಯಾನ ರೂ. ೫೦೦ ಶಿಷ್ಯವೇತನ ನೀಡಲಾಗುವುದು. ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಪ್ರತಿ ಮಾಹೆಯಾನ ರೂ. ೬೦೦ ಶಿಷ್ಯವೇತನ ನೀಡಲಾಗುವುದು. ಪ್ರತ್ಯೇಕ ತರಗತಿ ಹಾಗೂ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ, ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಉಚಿತ ವಸತಿ ಗೃಹದ ವ್ಯವಸ್ಥೆ ಇದೆ.

ಹೆಚ್ಚಿನ ಮಾಹಿತಿಗೆ ದೂ.ಸಂ. ೯೮೪೫೩೧೮೩೬೪, ೯೬೬೩೧೫೩೯೨೨, ೭೨೫೯೭೨೯೧೦೪, ೮೭೬೨೧೧೦೯೫೨, ೮೭೯೨೬೨೮೪೩೭ ಮತ್ತು ೮೭೬೨೯೨೫೮೬೨ನ್ನು ಸಂಪರ್ಕಿಸಬಹುದು.