ಸೋಮವಾರಪೇಟೆ, ಮೇ ೮ : ಬೇಳೂರು ಬಸವನಹಳ್ಳಿಯ ಕಾರೇಕೊಪ್ಪ ಗ್ರಾಮದ ರೂಪ ಎಂಬವರ ಮಗ ೩ನೇ ತರಗತಿ ವಿದ್ಯಾರ್ಥಿ ಕೆ.ಎಸ್.ಚೇತನ್ ನಾಪತ್ತೆಯಾಗಿರುವ ಬಗ್ಗೆ ತಾಯಿ ಪಟ್ಟಣದ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಾಲಕ ಮೂಕ ಮತ್ತು ಕಿವುಡನಾಗಿದ್ದು, ಏ.೨೧ರಿಂದ ಮನೆಯಿಂದ ಹೋದವನು, ನಂತರ ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಬಾಲಕನ ಬಗ್ಗೆ ಮಾಹಿತಿ ಸಿಕ್ಕವರು ಸೋಮವಾರಪೇಟೆ ಪೊಲೀಸ್ ಠಾಣೆಯ ದೂ. ೦೮೨೭೬-೨೮೨೦೪೦ ಸಂಖ್ಯೆಗೆ ಮಾಹಿತಿ ನೀಡಬೇಕೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ.