ವೀರಾಜಪೇಟೆ, ಮೇ ೮ : ಭಜರಂಗದಳ ಸಂಘಟನೆ ರಾಷ್ಟçವನ್ನು ಶಸಕ್ತ ಮಾಡಲು ಅಖಂಡ ಹಿಂದೂ ರಾಷ್ಟçದ ಪರಿಕಲ್ಪನೆಯಲ್ಲಿ ಉದಯವಾದ ಸಂಘಟನೆ, ಧರ್ಮಪಾಲನೆ ಸಂಘಟನೆಯ ಧ್ಯೇಯವಾಗಿದೆ, ನಿಷೇಧ ಮಾಡಲು ಯಾವುದೇ ಸನ್ನಿವೇಶದಲ್ಲಿ ಅವಕಾಶ ನೀಡುವುದಿಲ್ಲ ಎಂದು ಸಂಘಟನೆಯ ಪ್ರಮುಖರು ಹೇಳಿದರು.
ವೀರಾಜಪೇಟೆ ತಾಲೂಕು ಭಜರಂಗದಳ ಘಟಕದಿಂದ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಭಜರಂಗದಳ ಜಿಲ್ಲಾ ಸಹ ಸಂಚಾಲಕ ವಿವೇಕ್ ರೈ, ಧರ್ಮ, ಜಾತಿ, ಮತ್ತು ಇತರ ವಿಷಯಗಳಿಗೆ ಸಂಬAಧಿಸಿದAತೆ ಸ್ವತಂತ್ರ ಪೂರ್ವದಿಂದ ಒಡೆದು ಆಳುವ ನೀತಿಯನ್ನು ಬಳುವಳಿಯಾಗಿ ಪಡೆದುಕೊಂಡು ಬಂದವರು ಕಾಂಗ್ರೆಸಿಗರು. ಭಾರತದ ಚರಿತ್ರೆ ತಿಳಿಯದ ಅವಿವೇಕದ ಪರಮಾವಧಿ ಪ್ರದರ್ಶನ ಮಾಡಿದ್ದಾರೆ ಕಾಂಗ್ರೆಸಿಗರು. ಚುನಾವಣೆಗಾಗಿ ಮತ ಪಡೆಯುವ ಉದ್ದೇಶದಿಂದ ಇಂದು ಬಲಿಷ್ಠ ಸಂಘಟನೆಯನ್ನು ನಿಷೇಧ ಮಾಡುವ ಹೇಳಿಕೆ ನೀಡಿದ್ದಾರೆ. ಹೇಳಿಕೆಯನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದರು.
ಭಜರಂಗದಳದ ತಾಲೂಕು ಸಂಚಾಲಕ ಐನಂಡ ಕುಶಾಲಪ್ಪ ಮಾತನಾಡಿ ಇಂದು ಧರ್ಮಗಳ ಮಧ್ಯೆ ವಿಷ ಬೀಜ ಭಿತ್ತಿ ಕಂದಕ ನಿರ್ಮಾಣ ಮಾಡಲು ಹೊರಟಿದ್ದಾರೆ .ಕಾಂಗ್ರೆಸ್ ಒಲೈಕೆಯ ರಾಜಕಾರಣದತ್ತ ಸಾಗಿದೆ. ಪ್ರಣಾಳಿಕೆ ಎಂಬುದು ಜನರ ಹಿತಕ್ಕಾಗಿ ಬಿಡುಗಡೆಗೊಳಿಸಬೇಕು ವಿನಹ ಧರ್ಮ ವಿಭಜನೆಗೆ ಅಲ್ಲ. ಸಂಘಟನೆಯು ಎಂದಿಗೂ ಅಹಿತಕರ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಿಲ್ಲ. ಸಂಘಟನೆಯ ನಿಷೇಧ ಮಾಡುವ ಹುನ್ನಾರಕ್ಕೆ ಮಣೆ ಹಾಕಿದಲ್ಲಿ ಜಿಲ್ಲಾದ್ಯಂತ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.