ಚೆಯ್ಯಂಡಾಣೆ, ಮೇ ೭: ಗೌಡ ಫುಟ್ಬಾಲ್ ಆಕಾಡೆಮಿ ವತಿಯಿಂದ ೬ನೇ ವರ್ಷದ ಫುಟ್ಬಾಲ್ ಟ್ರೋಫಿ ಪಂದ್ಯಾಟ ಮರಗೋಡು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿದೆ.

ದಿನದ ಮೊದಲ ಪಂದ್ಯಾಟದಲ್ಲಿ ಪೊನ್ನಚ್ಚನ ಕುಟುಂಬ ತಡಿಯಪ್ಪನ ತಂಡವನ್ನು ೩-೧ ಗೋಲಿನಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ತೋಟಂಬೈಲು ಎಡಿಕೇರಿ ತಂಡವನ್ನು ೨-೦ ಗೋಲಿನಿಂz ಸೋಲಿಸಿ ಮುಂದಿನ ಹಂತಕ್ಕೆ ತಲುಪಿತು. ಕೊಂಪುಳೀರ ಮುಕ್ಕಾಟಿ ಬಿ ತಂಡವನ್ನು ೪-೦ ಗೋಲಿನಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ಪೊಡನೋಳನ ಮುಕ್ಕಾಟಿ (ಕಡಿಯತ್ತೂರ್) ತಂಡವನ್ನು ಭರ್ಜರಿ ೫-೦ ಗೋಲಿನಿಂದ, ಪಾಂಡನ ಕೋಡಿ ತಂಡವನ್ನು ೪-೩ ಗೋಲಿನಿಂದ, ಕೋಳಿಬೈಲು ತಂಡ ಇಟ್ಟಣಿಕೆ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ೩-೨, ಕಲ್ಲುಮುಟ್ಲು ತಂಡ ಕಟ್ರತನ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ೧೦-೯ ಗೋಲಿನಿಂದ ಚೊಂಡೀರ ಬಿದ್ರುಪಣೆ ತಂಡವನ್ನು ೨-೧ ಗೋಲಿನಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.