*ಗೋಣಿಕೊಪ್ಪ, ಮೇ ೭: ಕೊಡಗಿನ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನವನ್ನು ಒದಗಿಸುವುದರೊಂದಿಗೆ ಜಮ್ಮಾ ಬಾಣೆ ಇತ್ಯರ್ಥ, ಹಕ್ಕುಪತ್ರ ವಿತರಣೆ, ಶಾಲೆಗಳು, ವಸತಿ ಶಾಲೆ ನಿರ್ಮಾಣ, ಕಿಂಡಿ ಅಣೆಕಟ್ಟುಗಳು ಕುಡಿಯುವ ನೀರು ವ್ಯವಸ್ಥೆ, ಕಾಲೋನಿಗಳಲ್ಲಿ ಕಾಂಕ್ರಿಟ್ ರಸ್ತೆ, ಶೌಚಾಲಯಗಳು, ವಸತಿಗಳು ಸೇರಿದಂತೆ ಹಲವಾರು ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಶಕ್ತಿಮೀರಿ ಪ್ರಯತ್ನಿಸಲಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಸಮರ್ಥಿಸಿಕೊಂಡರು.

ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕೊಡಗಿಗೆ ಬೇಕಾದ ಅಭಿವೃದ್ಧಿಯ ಬಗ್ಗೆ ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಪಡಿಸದೇ ಕಾಂಗ್ರೆಸ್ಸಿಗರು ವಿನಾಕಾರಣ ಅಭಿವೃದ್ಧಿ ನಡೆದಿಲ್ಲ ಎಂಬ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ. ಕಳೆದ ೨೦ ವರ್ಷಗಳ ಅವಧಿಯಲ್ಲಿ ಕೊಡಗಿನಲ್ಲಿದ್ದ ಪರಿಸ್ಥಿತಿ ಬದಲಾಗಿದೆ. ಪ್ರತಿ ಸಮುದಾಯವನ್ನು ಗಣನೆಗೆ ಪಡೆದು ಮೂಲಸೌಕರ್ಯಗಳನ್ನು ನೀಡುವಲ್ಲಿ ಸಫಲತೆಯನ್ನು ಕಾಣಲಾಗಿದೆ ಎಂದರು.

ವಿಧಾಸಭಾ ಅಧ್ಯಕ್ಷ ಸ್ಥಾನ ಜವಾಬ್ದಾರಿಯಲ್ಲಿದ್ದಾಗ ರೂ. ೧೮೦೦ ಕೋಟಿ ಅನುದಾನವನ್ನು ಕೊಡಗಿಗೆ ತಂದು ರಸ್ತೆ ಸೇರಿದಂತೆ ಅವಶ್ಯಕವಿರುವ ಮತ್ತು ಬೇಡಿಕೆೆ ಇರುವ ವ್ಯವಸ್ಥೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಆಡಳಿತದಲ್ಲಿ ಬುಡಕಟ್ಟು ಸಮುದಾಯಕ್ಕೆ ನೀಡದ ಪ್ರಾಧಾನ್ಯತೆಯನ್ನು ಹಕ್ಕುಪತ್ರ ವಿತರಣೆ ಮತ್ತು ವಸತಿ ನಿರ್ಮಾಣಗಳ ಮೂಲಕ ಮಾಡಲಾಗಿದೆ. *ಗೋಣಿಕೊಪ್ಪ, ಮೇ ೭: ಕೊಡಗಿನ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನವನ್ನು ಒದಗಿಸುವುದರೊಂದಿಗೆ ಜಮ್ಮಾ ಬಾಣೆ ಇತ್ಯರ್ಥ, ಹಕ್ಕುಪತ್ರ ವಿತರಣೆ, ಶಾಲೆಗಳು, ವಸತಿ ಶಾಲೆ ನಿರ್ಮಾಣ, ಕಿಂಡಿ ಅಣೆಕಟ್ಟುಗಳು ಕುಡಿಯುವ ನೀರು ವ್ಯವಸ್ಥೆ, ಕಾಲೋನಿಗಳಲ್ಲಿ ಕಾಂಕ್ರಿಟ್ ರಸ್ತೆ, ಶೌಚಾಲಯಗಳು, ವಸತಿಗಳು ಸೇರಿದಂತೆ ಹಲವಾರು ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಶಕ್ತಿಮೀರಿ ಪ್ರಯತ್ನಿಸಲಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಸಮರ್ಥಿಸಿಕೊಂಡರು.

ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕೊಡಗಿಗೆ ಬೇಕಾದ ಅಭಿವೃದ್ಧಿಯ ಬಗ್ಗೆ ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಪಡಿಸದೇ ಕಾಂಗ್ರೆಸ್ಸಿಗರು ವಿನಾಕಾರಣ ಅಭಿವೃದ್ಧಿ ನಡೆದಿಲ್ಲ ಎಂಬ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ. ಕಳೆದ ೨೦ ವರ್ಷಗಳ ಅವಧಿಯಲ್ಲಿ ಕೊಡಗಿನಲ್ಲಿದ್ದ ಪರಿಸ್ಥಿತಿ ಬದಲಾಗಿದೆ. ಪ್ರತಿ ಸಮುದಾಯವನ್ನು ಗಣನೆಗೆ ಪಡೆದು ಮೂಲಸೌಕರ್ಯಗಳನ್ನು ನೀಡುವಲ್ಲಿ ಸಫಲತೆಯನ್ನು ಕಾಣಲಾಗಿದೆ ಎಂದರು.

ವಿಧಾಸಭಾ ಅಧ್ಯಕ್ಷ ಸ್ಥಾನ ಜವಾಬ್ದಾರಿಯಲ್ಲಿದ್ದಾಗ ರೂ. ೧೮೦೦ ಕೋಟಿ ಅನುದಾನವನ್ನು ಕೊಡಗಿಗೆ ತಂದು ರಸ್ತೆ ಸೇರಿದಂತೆ ಅವಶ್ಯಕವಿರುವ ಮತ್ತು ಬೇಡಿಕೆÉ ಇರುವ ವ್ಯವಸ್ಥೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಆಡಳಿತದಲ್ಲಿ ಬುಡಕಟ್ಟು ಸಮುದಾಯಕ್ಕೆ ನೀಡದ ಪ್ರಾಧಾನ್ಯತೆಯನ್ನು ಹಕ್ಕುಪತ್ರ ವಿತರಣೆ ಮತ್ತು ವಸತಿ ನಿರ್ಮಾಣಗಳ ಮೂಲಕ ಮಾಡಲಾಗಿದೆ.