ಪೊನ್ನಂಪೇಟೆ, ಮೇ ೭: ವೀರಾಜಪೇಟೆ ಸಮೀಪದ ಕೆ.ಬೋಯಿಕೇರಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಕೆಂಕೇರಮ್ಮ ದೇವಿಯ ವಾರ್ಷಿಕೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಪ್ರತಿವರ್ಷದಂತೆ ದೇವಿಯ ಉತ್ಸವಕ್ಕೆ ಸಕಲ ಪೂಜಾ ಕೈಂಕರ್ಯದೊAದಿಗೆ ಚಾಲನೆ ನೀಡಲಾಯಿತು. ಗ್ರಾಮದ ಹೆಬ್ಬಾಗಿಲ ಬಳಿ ದೇವಿಗೆ ಹೂವಿನ ಅಲಂಕಾರ ಮಾಡಿ, ವಾದ್ಯಮೇಳದೊಂದಿಗೆ ಪಲಕ್ಕಿಯಲ್ಲಿ ದೇವಿಯನ್ನು ಹೊತ್ತು ಗುಡಿಗೆ ಕೊಂಡೊಯ್ಯಲಾಯಿತು. ಈ ಸಂದರ್ಭ ಹೆಣ್ಣು ಮಕ್ಕಳು ತಂಬಿಟ್ಟಿನ ನೈವೇದ್ಯವನ್ನು ದೇವಿಗೆ ಅರ್ಪಿಸಿ ಪೂಜೆ ಸಲ್ಲಿಸಿ, ಹರಕೆ ಒಪ್ಪಿಸಿದರು.
ನಂತರ ದೇವಿಯ ಮೆರವಣಿಗೆ ಯನ್ನು ವಿಜೃಂಭಣೆಯಿAದ ನಡೆಸಲಾಯಿತು. ವಾದ್ಯಮೇಳಕ್ಕೆ ಗ್ರಾಮದ ಯುವಕ, ಯುವತಿಯರು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದರು. ಶನಿವಾರ ಬೆಳಗಿನ ಜಾವ ಹಬ್ಬವು ಸಂಪನ್ನವಾಯಿತು. ಮಧ್ಯಾಹ್ನ ಮಹಾಪೂಜೆ ನೆರವೇರಿಸಿ, ಅನ್ನಸಂತರ್ಪಣೆ ಮಾಡಲಾಯಿತು. ಗ್ರಾಮದ ಮುಖ್ಯಸ್ಥರು ಮತ್ತು ಕೆಂಕೇರಮ್ಮ ಸೇವಾ ಸಮಿತಿಯ ಸದಸ್ಯರು, ಗ್ರಾಮಸ್ಥರು ಹಾಗೂ ಸಾವಿರಾರು ಮಂದಿ ಭಕ್ತಾದಿಗಳು ಈ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಗ್ರಾಮದ ಅಧಿದೇವತೆ ಕೃಪೆಗೆ ಪಾತ್ರರಾದರು.