ಕೂಡಿಗೆ, ಮೇ ೮: ಕೂಡಿಗೆ ವ್ಯಾಪ್ತಿಯ ಕೂಡುಮಂಗಳೂರು, ಹೆಬ್ಬಾಲೆ ಹಾರಂಗಿ, ಸೀಗೆಹೊಸೂರು, ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಕಳೆದ ಎರಡು ದಿನಗಳಿಂದಲೂ ಈ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣವು ಕಂಡುಬರುತಿತ್ತು. ಸೋಮವಾರ ಮಧ್ಯಾಹ್ನ ೨ ಗಂಟೆಯಿAದ ೪ ಗಂಟೆಗಳವರೆಗೆ ಗುಡುಗು ಮಿಂಚು ಸೇರಿದಂತೆ ಬಾರಿ ಮಳೆ ಸುರಿದಿದೆ.

ಹೆಬ್ಬಾಲೆ, ತೊರೆನೂರು ಗ್ರಾಮ ವ್ಯಾಪ್ತಿಯಲ್ಲಿಯು ಉತ್ತಮ ಮಳೆಯಾಗಿದೆ. ಮಳೆ ಇಲ್ಲದೆ ಸಂಕಷ್ಟದಲ್ಲಿದ್ದ ಬೆಳೆಗಾರರಲ್ಲಿ ವರ್ಷಧಾರೆಯ ಸಿಂಚನದಿAದ ಹರ್ಷ ಮನೆ ಮಾಡಿದೆ.