ಮಡಿಕೇರಿ, ಮೇ ೭: ಅತಿಹೆಚ್ಚು ಆದಿವಾಸಿಗಳು, ಗಿರಿಜನರು ಇರುವ ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ಆಗಿಲ್ಲವೆಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ಘಟಕ ಹಾಗೂ ರಾಜ್ಯ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರೂ ಆಗಿರುವ ಸಿ.ಎಸ್. ದ್ವಾರಕನಾಥ್ ಆರೋಪ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿವಾಸಿಗಳು ಹಾಗೂ ಅಲೆಮಾರಿಗಳ ಕಷ್ಟ ಕಾರ್ಪಣ್ಯಗಳ ಬಗ್ಗೆ ಪರೀಶಿಲನೆ ಮಾಡುತ್ತಾ ರಾಜ್ಯಾದ್ಯಂತ ಪ್ರವಾಸ ಮಾಡಲಾಗುತ್ತಿದೆ. ಕೊಡಗು ಜಿಲ್ಲೆ ಹೆಚ್ಚಿಗೆ ಆದಿವಾಸಿಗಳು ಹಾಗೂ ಗಿರಿಜನರನ್ನು ಹೊಂದಿರುವ ಪ್ರದೇಶವಾಗಿದೆ. ಗಿರಿಜನರÀ ಅಭಿವೃದ್ಧಿಗೆ ಕಳೆದ ರಾಜ್ಯ ಬಜೆಟ್‌ನಲ್ಲಿ ರೂ. ೨೮ ಕೋಟಿ ಹಾಗೂ ಈ ಬಾರಿಯ ಬಜೆಟ್‌ನಲ್ಲಿ ೩೦ ಕೋಟಿ ಅನುದಾನ ಮೀಸಲಿರಿಸಲಾಗಿದೆ. ಆದರೆ ಕೊಡಗು ಜಿಲ್ಲೆಗೆ ಒಂದು ಕೋಟಿ ಕೂಡ ತಲುಪಿಲ್ಲ. ಮಳೆಹಾನಿ ಪರಿಹಾರ ಕೇವಲ ರೂ. ೩.೭೦ ಕೋಟಿ ಹಣವನ್ನು ಕೂಡ ನೀಡಲಾಗಿಲ್ಲ. ಯಾವದೇ ಅಭಿವೃದ್ಧಿ ಕಾಣದ ಕಳೆದ ೩೦ ವರ್ಷಗಳ ಹಿಂದಿನAತೆಯೇ ಕೊಡಗು ಜಿಲ್ಲೆ ಇದೆ ಎಂದು ಹೇಳಿದರು. ಕಳೆದ ೩೦ ವರ್ಷಗಳಿಂದ ಈರ್ವರು ಬಿಜೆಪಿ ಶಾಸಕರಿದ್ದರೂ ಈ ಕುರಿತು ಗಮನ ಹರಿಸಿಲ್ಲ.

ಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ಸಂಹವನ ವಕ್ತಾರ ಟಿ.ಪಿ. ರಮೇಶ್, ನ್ಯಾಯ ಸಮಿತಿ ರಾಜ್ಯ ಉಪಾಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ, ರಾಷ್ಟಿçÃಯ ಕಾಂಗ್ರೆಸ್ ಮಹಿಳಾ ಸಂಘಟಕಿ ಚಮನ್ ಫರ್ಜಾನ, ಜಿ.ಪಂ. ಮಾಜಿ ಅಧ್ಯಕ್ಷೆ ಡಾ. ಕಾವೇರಿ, ಕುಡಿಯರ ಮುತ್ತಪ್ಪ ಇದ್ದರು.