ಮಡಿಕೇರಿ, ಮೇ ೭: ವೀರಾಜಪೇಟೆ ಕ್ಷೇತ್ರದಲ್ಲಿ ಜನರು ಆಗಿರುವ ಅಭಿವೃದ್ಧಿ ಕೆಲಸ-ಕಾರ್ಯಗಳ ಬಗ್ಗೆ ಸ್ವಯಂ ಅರಿವು ಹೊಂದಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರದ ಸಾಧನೆಯ ಬಗ್ಗೆಯೂ ಕ್ಷೇತ್ರದರಲ್ಲಿ ಸದಭಿಪ್ರಾಯವಿದ್ದು, ಇದು ಈ ಬಾರಿಯೂ ತಮ್ಮ ಗೆಲುವಿಗೆ ಪೂರಕವಾಗಲಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಕೆ.ಜಿ. ಬೋಪಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಶಕ್ತಿ’ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡ ಅವರು ಈ ಬಾರಿಯೂ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಕೊಡಗಿನಲ್ಲೂ ಜನರು ಬಿಜೆಪಿಯನ್ನೇ ಬೆಂಬಲಿಸಲಿದ್ದಾರೆ ಎಂದರು.

೨೦೦೮ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ತಾವು ವೀರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಆ ಸಂದರ್ಭದಲ್ಲೂ ಬೆಂಬಲ ದೊರೆತಿದೆ. ಮೊದಲ ಚುನಾವಣೆಯ ಸಂದರ್ಭದಲ್ಲಿ ಈಗಿನ ರಾಷ್ಟç ನಾಯಕರಾಗಿರುವ ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ಇದೀಗ ಅವರು ಪ್ರಧಾನಿಯಾಗಿ ತೋರಿರುವ ಅದ್ಭುತ ಸಾಧನೆಯ ಬಗ್ಗೆ ಜನರು ಮತ್ತಷ್ಟು ಜಾಗೃತರಾಗಿದ್ದಾರೆ. ಇದೂ ತಮ್ಮ ಗೆಲುವಿಗೆ ಇನ್ನಷ್ಟು ಪೂರಕವಾಗಲಿದೆ ಎಂದು ಬೋಪಯ್ಯ ಹೇಳಿದರು.

ಕಾಂಗ್ರೆಸ್ ಪಕ್ಷದವರು ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಎಂಬ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆಗಿರುವ ಅಭಿವೃದ್ಧಿ ಕೆಲಸಗಳೇನು ಸುಳ್ಳೇ ಎಂದು ಪ್ರಶ್ನಿಸಿದ ಅವರು, ರಸ್ತೆ, ವೈದ್ಯಕೀಯ ಕಾಲೇಜು, ಇಂಜಿನಿಯರಿAಗ್ ಕಾಲೇಜು, ಸ್ಪೆಷಾಲಿಟಿ ಆಸ್ಪತ್ರೆ, ಹಲವು ಕ್ರೀಡಾಂಗಣಗಳು, ಟರ್ಫ್ ಮೈದಾನ, ಒಳಾಂಗಣ ಕ್ರೀಡಾಂಗಣ, ಕ್ರೀಡೆಗೆ ಉತ್ತೇಜನ, ಶೈಕ್ಷಣಿಕ ಪ್ರಗತಿ ಇವೆಲ್ಲವೂ ಆಗಿರುವುದು ತಮ್ಮ ಅವಧಿಯಲ್ಲೇ... ಇವುಗಳೇನು ಅಭಿವೃದ್ಧಿ ಅಲ್ಲವೇ? ಎಂದ ಅವರು, ಮತದಾರರಿಗೆ ಇದರ ಅರಿವು ಇರುವುದಾಗಿ ಅನಿಸಿಕೆ ವ್ಯಕ್ತಪಡಿಸಿದರು.

ಜಮ್ಮಾಬಾಣೆ ವಿಚಾರವೂ ಇತ್ಯರ್ಥವಾಗಿದೆ. ಆದರೆ, ಅಭಿವೃದ್ಧಿಯೇ ಆಗಿಲ್ಲ ಎಂಬAತೆ ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ಕಸ್ತೂರಿ ರಂಗನ್ ವರದಿ, ಮಾದವ್ ಗಾಡ್ಗೀಳ್ ವರದಿಗಳು ಕಾಂಗ್ರೆಸ್‌ನ ಪಾಪದ ಕೂಸು ಎಂದು ಆಪಾದಿಸಿದ ಬೋಪಯ್ಯ ಅವರು, ಈ ಬಗ್ಗೆ ಬಿಜೆಪಿಯ ವಿರೋಧದಿಂದಾಗಿ ಕೇಂದ್ರ ಸರಕಾರ ಇನ್ನೂ ತೀರ್ಮಾನ ಕೈಗೊಳ್ಳದೆ ತಡೆ ಹಿಡಿದಿದೆ. ಆದರೆ ಕಾಂಗ್ರೆಸ್ ಇದು ವೈಜ್ಞಾನಿಕವಾಗಿ ಜಾರಿಯಾಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗಾದರೆ ಈ ಪಕ್ಷದ ಸ್ಪಷ್ಟ ನಿಲುವು ಏನು ಎಂಬುದಾಗಿ ಪ್ರಶ್ನಿಸಿದರು.

ಕಾಡಾನೆ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಬಜೆಟ್‌ನಲ್ಲೇ ರೂ. ೫೦೦ ಕೋಟಿ ನೀಡಲಾಗಿದೆ. ರಸ್ತೆ ಅಭಿವೃದ್ಧಿಗೆ ಎಂದಿನ ಅನುದಾನದೊಂದಿಗೆ ರೂ. ೧೦೦ ಕೋಟಿ ವಿಶೇಷ ಯೋಜನೆ ರೂಪಿಸಲಾಗಿದೆ. ಹುಲಿ ದಾಳಿಗೆ ಪರಿಹಾರ ಹೆಚ್ಚಿಸಲಾಗಿದ್ದು, ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮಕ್ಕೆ ಅಧ್ಯಯನ ನಡೆಸಲಾಗುತ್ತಿದೆ.

ಕೇವಲ ಸುಳ್ಳು ಆರೋಪಗಳಿಗೆ ಜನರು ಮನ್ನಣೆ ನೀಡುವುದಿಲ್ಲ. ಎಲ್ಲದಕ್ಕೂ ತಾ. ೧೦ರ ಚುನಾವಣೆಯಲ್ಲಿ ಮತದಾರರು ಉತ್ತರ ನೀಡಲಿದ್ದಾರೆ ಎಂದರು. ಜಾತಿ ರಾಜಕೀಯ ಎಂಬುದು ಕೊಡಗಿನಲ್ಲಿ ನಡೆಯದು. ಹತಾಶೆಯಿಂದಿರುವ ಕಾಂಗ್ರೆಸ್‌ಗೆ ಇದೊಂದು ‘ಹಿಡನ್ ಅಜೆಂಡಾ’ ಅಷ್ಟೆ ಎಂದು ಬೋಪಯ್ಯ ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆ ಕೇವಲ ಒಂದು ವರ್ಗವನ್ನು ಓಲೈಸುವ ತಂತ್ರವಾಗಿದ್ದು, ಸಂವಿಧಾನಕ್ಕೆ ಇದು ವಿರೋಧವಾಗಿದೆ. ಇದಲ್ಲದೆ ಗ್ಯಾರಂಟಿ ಕಾರ್ಡ್ ಸೇರಿದಂತೆ ಎಲ್ಲವೂ ಬೋಗಸ್. ಇದು ಮನೆ ಒಡೆಯುವ ಕೆಲಸವಾಗಿದೆ ಎಂದ ಅವರು, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಾಂಡ್ ನೀಡುವ ಬದಲು ಸಹಿ ಮಾಡಿದ ಬ್ಲಾö್ಯಂಕ್ ಚೆಕ್ ನೀಡಬೇಕಿತ್ತು ಎಂದು ಸವಾಲೆಸೆದರು.