ಮಡಿಕೇರಿ, ಮೇ ೭ : ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥÀರ್ ಗೌಡ ಅವರು ಅತ್ಯಧಿಕ ಮತಗಳ ಅಂತರದಿAದ ಗೆಲವು ಸಾಧಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಥÀರ್ ಗೌಡ ಪರ ನಗರದ ಪ್ರಮುಖ ಬಡಾವಣೆಗಳಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಮತಯಾಚನೆ ಸಂದರ್ಭ ಮಾತನಾಡಿದ ಅವರು ಕ್ಷೇತ್ರದ ಮತದಾರರು ಬದಲಾವಣೆಯನ್ನು ಬಯಸಿದ್ದಾರೆ ಎಂದರು.
ಅಭಿವೃದ್ಧಿಯ ಚಿಂತನೆಯೊAದಿಗೆ ಕಣಕ್ಕಿಳಿದಿರುವ ಉತ್ಸಾಹಿ ಯುವ ರಾಜಕಾರಣಿ ಮಂಥÀರ್ ಅವರ ಪರ ಯುವ ಸಮೂಹ ಒಲವು ತೋರಿದೆ. ಈ ಹಿಂದೆ ಕಂಡರಿಯದಷ್ಟು ಜನಬೆಂಬಲ ಕಾಂಗ್ರೆಸ್ ಅಭ್ಯರ್ಥಿಗೆ ದೊರೆಯುತ್ತಿದೆ. ಆದ್ದರಿಂದ ಮಂಥÀರ್ ಗೆಲವು ಖಚಿತವೆಂದರು.
ನಗರ ಉಸ್ತುವಾರಿ ಹಾಗೂ ಮಡಿಕೇರಿ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ಉಪಾಧ್ಯಕ್ಷ ಮಹಮ್ಮದ್ ಯಾಕುಬ್, ಡಿಸಿಸಿ ಸದಸ್ಯ ಜಫ್ರುಲ್ಲಾ ಸೇರಿದಂತೆ ಅನೇಕರು ಮತಯಾಚನೆ ಸಂದರ್ಭ ಹಾಜರಿದ್ದರು.