ನಾಪೋಕ್ಲು, ಮೇ ೬: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಮಾಳೇಟಿರ, ಮಾಳೆಯಂಡ, ಪಟ್ರಪಂಡ, ಬಲ್ಲಚಂಡ, ಚೋನಿರ ಸೇರಿದಂತೆ ಹಲವು ತಂಡಗಳು ಮುನ್ನಡೆ ಸಾಧಿಸಿದವು.

ಮೈದಾನ ಒಂದರಲ್ಲಿ ಮಾಳೇಟಿರ ವಿರುದ್ಧ ನಂದೇಟಿರ ತಂಡವು ೭ ವಿಕೆಟ್ ನಷ್ಟಕ್ಕೆ ೩೦ ರನ್ ಗಳಿಸಿತು, ಮಾಳೇಟಿರ ತಂಡ ಒಂದು ವಿಕೆಟ್ ನಷ್ಟಕ್ಕೆ ೩೧ ರನ್ ಗಳಿಸಿ ೯ ವಿಕೆಟ್‌ಗಳ ಗೆಲುವು ಸಾಧಿಸಿತು. ಮಾಳೆಯಂಡ ಮತ್ತು ತಾತಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದವು. ಸೂಪರ್ ಓವರ್‌ನಲ್ಲಿ ತಾತಪಂಡ ತಂಡ ನಾಲ್ಕು ರನ್ ಗಳಿಸಿದರೆ ಮಾಳೆಯಂಡ ಐದು ರನ್ ಗಳಿಸಿ ೧೦ ವಿಕೆಟ್‌ಗಳ ಜಯ ಸಾಧಿಸಿತು. ಮುಂದಿನ ಪಂದ್ಯದಲ್ಲಿ ಪಟ್ರಪಂಡ ತಂಡ ಮುಕ್ಕಾಟಿರ ತಂಡದ ವಿರುದ್ಧ ಎರಡು ವಿಕೆಟ್ ನಷ್ಟಕ್ಕೆ ೫೩ ರನ್ ಗಳಿಸಿತು. ಮುಕ್ಕಾಟಿರ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ ೪೪ ರನ್ ಗಳಿಸಿ ಸೋಲು ಅನುಭವಿಸಿತು. ಈ ಪಂದ್ಯದಲ್ಲಿ ಪಟ್ರಪಂಡ ಜಯ ಸಾಧಿಸಿತು. ಮುಕ್ಕಾಟಿರ (ಮಾದಾಪುರ) ತಂಡವು ಬಲ್ಲಚಂಡ ವಿರುದ್ಧ ನಾಲ್ಕು ವಿಕೆಟ್ ನಷ್ಟಕ್ಕೆ ೫೫ ರನ್ ಗಳಿಸಿತು. ಉತ್ತರವಾಗಿ ಆಡಿದ ಬಲ್ಲಚಂಡ ತಂಡ ಮೂರು ವಿಕೆಟ್ ನಷ್ಟಕ್ಕೆ ೫೬ ರನ್ ಗಳಿಸಿ ಜಯ ಸಾಧಿಸಿತು. ಪಳಂಗAಡ ತಂಡವು ಮೂರು ವಿಕೆಟ್ ನಷ್ಟಕ್ಕೆ ೩೭ ರನ್ ಗಳಿಸಿತು. ಉತ್ತರವಾಗಿ ಆಡಿದ ಚೋನಿರ ತಂಡ ಎರಡು ವಿಕೆಟ್ ನಷ್ಟಕ್ಕೆ ೩೮ ರನ್‌ಗಳಿಸಿ ಗೆಲುವು ಸಾಧಿಸಿತು.

ಮೈದಾನ ಎರಡರಲ್ಲಿ ಕೊಣಿಯಂಡ ತಂಡವು ಪಾರುವಂಗಡ ತಂಡದ ವಿರುದ್ಧ ಮೂರು ವಿಕೆಟ್ ನಷ್ಟಕ್ಕೆ ೮೦ ರನ್ ಗಳಿಸಿತು. ಪಾರುವಂಗಡ ನಾಲ್ಕು ವಿಕೆಟ್ ನಷ್ಟಕ್ಕೆ ಕೇವಲ ೩೯ ರನ್ ಗಳಿಸಲು ಶಕ್ತವಾಯಿತು. ಈ ಪಂದ್ಯದಲ್ಲಿ ಕೊಣಿಯಂಡ ೪೨ ರನ್‌ಗಳ ಜಯ ಸಾಧಿಸಿತು. ಮಂಡುವAಡ ತಂಡ ಮಡ್ಲಂಡ ವಿರುದ್ಧ ಎರಡು ವಿಕೆಟ್ ನಷ್ಟಕ್ಕೆ ೮೫ ರನ್ ಗಳಿಸಿತು. ಮಡ್ಲಂಡ ಮೂರು ವಿಕೆಟ್ ನಷ್ಟಕ್ಕೆ ೩೦ ರನ್ ಗಳಿಸಿ ಸೋತಿತು. ಮಂಡುವAಡ ತಂಡ ೫೬ ರನ್‌ಗಳ ಜಯ ಸಾಧಿಸಿತು. ಮುಕ್ಕಾಟಿರ ವಿರುದ್ಧ ಚಿರಿಯಪಂಡ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ ೪೧ ರನ್ ಗಳಿಸಿತು. ಉತ್ತರವಾಗಿ ಆಡಿದ ಮುಕ್ಕಾಟಿರ ತಂಡ ಒಂದು ವಿಕೆಟ್ ನಷ್ಟಕ್ಕೆ ೪೨ ರನ್ ಗಳಿಸಿ ಜಯಸಾಧಿಸಿತು.

ಮಾಳೆಟಿರ ವಿರುದ್ಧ ಅಮ್ಮಾಟಂಡ ತಂಡವು ಸ್ಪರ್ಧಿಸಿತು. ಅಮ್ಮಾಟಂಡ ನಾಲ್ಕು ವಿಕೆಟ್ ನಷ್ಟಕ್ಕೆ ೪೭ ರನ್ ಗಳಿಸಿದರೆ, ಮಾಳೇಟಿರ ೫ ವಿಕೆಟ್ ನಷ್ಟಕ್ಕೆ ೪೧ ರನ್ ಗಳಿಸಿ ಸೋಲನ್ನು ಅನುಭವಿಸಿತು. ಪಾರುವಂಡ ಮತ್ತು ಮೂಕಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೂಕಂಡ ನಾಲ್ಕು ವಿಕೆಟ್ ನಷ್ಟಕ್ಕೆ ೫೦ ರನ್ ಗಳಿಸಿತು. ಪಾರುವಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೫೪ ರನ್ ಗಳಿಸಿ ಗೆಲುವು ಸಾಧಿಸಿತು. ಮುಂಡಚಾಡಿರ ಐದು ವಿಕೆಟ್ ನಷ್ಟಕ್ಕೆ ೫೮ ರನ್ ಗಳಿಸಿತು. ಮಲ್ಲೇಂಗಡ ಕೇವಲ ೨೮ ರನ್ ಗಳಿಸಿ ಸೋಲನ್ನು ಅನುಭವಿಸಿತು. ಪಟ್ಟಡ ವಿರುದ್ಧ ಕರಿನೆರವಂಡ ೫ ವಿಕೆಟ್ ನಷ್ಟಕ್ಕೆ ೪೦ ರನ್ ಗಳಿಸಿತು. ಪಟ್ಟಡ ತಂಡ ಐದು ವಿಕೆಟ್ ನಷ್ಟಕ್ಕೆ ಕೇವಲ ೨೭ ರನ್ ಗಳಿಸಿತು. ಕರಿನೆರವಂಡ ತಂಡಕ್ಕೆ ೧೩ ರನ್‌ಗಳ ಜಯ ಲಭಿಸಿತು.

-ದುಗ್ಗಳ ಸದಾನಂದ