ಮಡಿಕೇರಿ, ಮೇ ೬ : ಭಾಗಮಂಡಲ ಸಮೀಪದ ಕಡೋಡಿ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಗೆಲುವಿಗಾಗಿ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಪೊನ್ನಣ್ಣ ಅವರ ಸಹೋದರ ನರೇನ್ ಕಾರ್ಯಪ್ಪ ಮತ್ತು ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳು ವಿಶೇಷ ಪ್ರಾರ್ಥನೆ ನೆರವೇರಿಸಿದರು. ದೇವಾಲಯದ ಮುಖ್ಯಸ್ಥರಾದ ಗಣೇಶ್ ಶ್ರೀನಿವಾಸ್, ಚರಣ್ ಕುಮಾರ್, ಸುಜಯ್ ನೇತೃತ್ವದಲ್ಲಿ ಪೂಜೆ ನಡೆಯಿತು.