ಕುಶಾಲನಗರ, ಮೇ ೭ : ಕಾಂಗ್ರೆಸ್ ಪಕ್ಷ ಹಿಂದುಗಳ ಮೇಲೆ ಸವಾರಿ ಮಾಡುವುದನ್ನು ತಕ್ಷಣ ಕೈಬಿಡಬೇಕಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷರಾದ ಬಿ ಎಸ್ ದಿನೇಶ್ ತಿಳಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ, ದೇಶಭಕ್ತ ಧಾರ್ಮಿಕ ಸಂಘಟನೆ ಆಗಿರುವ ಬಜರಂಗದಳವನ್ನು ಕಾಂಗ್ರೆಸ್ ಪ್ರಮುಖರು ದೇಶದ್ರೋಹಿ ಸಂಘಟನೆಯಾದ ಪಿಎಫ್ಐ ಜೊತೆ ಹೋಲಿಕೆ ಮಾಡಿರುವುದು ಹಾಸ್ಯಾಸ್ಪದ, ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರಸ್ತೆಗಿಳಿಯುವ ಪರಿಸ್ಥಿತಿ ಬಂದಿದೆ. ಮುಸ್ಲಿಮರನ್ನು ಓಲೈಸುವ ತಂತ್ರಗಾರಿಕೆಯಲ್ಲಿ ಹಿಂದುಗಳನ್ನು ವಿಭಜಿಸಿ ಹಿಂದೂ ಮೇಲೆ ಸವಾರಿ ಮಾಡುವ ಕಾಂಗ್ರೆಸ್ ಬಗ್ಗೆ ಪ್ರತಿಯೊಬ್ಬ ಹಿಂದುಗಳು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ಧರ್ಮ ವ್ಯವಸ್ಥೆ ಸರಿ ಇದ್ದಲ್ಲಿ ಜಾತಿ ವ್ಯವಸ್ಥೆ ಸರಿಯಾಗಿರುತ್ತದೆ. ಒಂದು ವೇಳೆ ಧರ್ಮ ದಾರಿ ತಪ್ಪಿದಲ್ಲಿ ಜಾತಿ ನಾಶವಾಗುತ್ತದೆ ಎಂದು ದಿನೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಎಚ್ಪಿ ಉಪಾಧ್ಯಕ್ಷ ಎನ್.ಇ. ಬಾಲಕೃಷ್ಣ, ಕೊರೋನಾ ಮತ್ತು ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬಜರಂಗದಳ ಸೇರಿದಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಮಾಡಿದ ಸೇವಾ ಕಾರ್ಯ ಕೊಡಗಿನ ಜನತೆಯ ಮನಸ್ಸಿನಿಂದ ಇನ್ನೂ ಮಾಸಿಲ್ಲ.
ಈ ಸಂದರ್ಭ ಕಾಂಗ್ರೆಸ್ ಯಾವುದೇ ರೀತಿಯಲ್ಲಿ ಸಂತ್ರಸ್ತರ ಸಹಕಾರಕ್ಕೆ ಬಂದಿಲ್ಲ ಎಂದು ಹೇಳಿದರು. ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಕೆ.ಕೆ. ವಿನು, ಬಜರಂಗದಳ ನಗರ ಸಂಚಾಲಕ ಎಂ.ಸಿ. ಮಹೇಂದ್ರ ಸಹ ಸಂಚಾಲಕ ಕಾರ್ತಿಕ್ಗೌಡ ಇದ್ದರು.