ನಾಪೋಕ್ಲು, ಮೇ ೭: ಗ್ರಾಮದ ಎಲ್ಲಾ ಪ್ರಮುಖ ಕಾರ್ಯಕ್ರಮಗಳಲ್ಲಿ ಊರಿನ ಯುವಕರು ಎಲ್ಲಿದ್ದರೂ ಬಂದು ಸಹಕರಿಸಬೇಕು ಎಂದು ಪುಚ್ಚಿಮಾಡ ಡಾ. ಸಂತೋಷ್ ಹೇಳಿದರು.

ಸಮೀಪದ ನೆಲಜಿ ಗ್ರಾಮದ ಶ್ರೀ ಇಗುತ್ತಪ್ಪ ದೇವರ ಭಕ್ತ ಜನ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಭಕ್ತ ಜನಸಂಘದ ವಾರ್ಷಿಕ ಭಕ್ತ ಸಮಾರಾಧನೆ ಉತ್ಸವದ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮದ ಕ್ರೀಡಾಕೂಟಗಳು, ದೇವಾಲಯದ ಆಚರಣೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಯುವಕರ ಪಾಲ್ಗೊಳ್ಳುವಿಕೆ ಇಳಿಮುಖ ಗೊಳ್ಳುತ್ತಿದೆ. ಕೇವಲ ಹಿರಿಯರೇ ಸಾಮುದಾಯಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳು ವಂತಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.

ಸAಘದ ಅಧ್ಯಕ್ಷ ಮುಕ್ಕಾಟಿರ ಎಂ. ವಿನಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಊರಿನ ಎಲ್ಲಾ ಭಕ್ತಾದಿ ಬಂಧುಗಳ ಸಹಕಾರ, ಸಮಿತಿ ಸದಸ್ಯರ ಸಕ್ರಿಯತೆ, ತಕ್ಕಮುಖ್ಯಸ್ಥರು ಹಾಗೂ ಹಿರಿಯರ ಸಹಕಾರದಿಂದ ಮಾತ್ರ ಭಕ್ತ ಜನ ಸಂಘದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯ. ಊರಿನ ಯುವಕರು ದೇವರ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಮಣವಟ್ಟಿರ ಎಂ. ಚಂಗಪ್ಪ, ತಕ್ಕಮುಖ್ಯಸ್ಥರಾದ ಬದ್ದಂಜೆಟ್ಟಿರ ಬಿ. ನಾಣಯ್ಯ, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮುಂಡAಡ ಸಿ. ನಾಣಯ್ಯ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು,

ವೇದಿಕೆಯಲ್ಲಿ ತಕ್ಕಮುಖ್ಯಸ್ಥರಾದ ನಾಪನೆರವಂಡ ಸಿ. ಪೊನ್ನಪ್ಪ, ಬಾಳೆಯಡ ಕುಂಞಪ್ಪ, ಕಾರ್ಯದರ್ಶಿ ಮಾಳೆಯಂಡ ಸಿ. ಈರಪ್ಪ, ಸದಸ್ಯರಾದ ಅಪ್ಪುಮಣಿಯಂಡ ಎಂ. ನವೀನ್, ಬಾಳೆಯಡ ಬೆಳ್ಳಿಯಪ್ಪ, ಚೀಯಕಪೂವಂಡ ಸುಜಾ ಪೆಮ್ಮಯ್ಯ, ಮಂಡಿರ ಧನು ದೇವಯ್ಯ ಇದ್ದರು. ಅಪ್ಪುಮಣಿಯಂಡ ಶೈಲಾ ಭೀಮಯ್ಯ ಪ್ರಾರ್ಥಿಸಿದರೆ, ಖಜಾಂಚಿ ಎ. ತಿಮ್ಮಯ್ಯ ಸಂಘದ ವರದಿ ವಾಚಿಸಿದರು, ಭಕ್ತ ಸಮಾರಾಧನೆ ಉತ್ಸವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿ ೩೫ ತುಲಾಭಾರ ಸೇವೆ ನಡೆಯಿತು. ಹರಕೆಯ ರೂಪದಲ್ಲಿ ಕಾಫಿ, ಕರಿಮೆಣಸು, ದೀಪದ ಎಣ್ಣೆಯನ್ನು ಭಕ್ತರು ಸಮರ್ಪಿಸಿದರು. ಮಧ್ಯಾಹ್ನದ ವಿಶೇಷ ಮಹಾಪೂಜೆ ಜರುಗಿತು. ತೀರ್ಥ ಪ್ರಸಾದ ವಿತರಣೆಯ ನಂತರ ದೇವರ ನೃತ್ಯ ಬಲಿ ನೆರವೇರಿ, ಸಮಾರಾಧನೆ ಉತ್ಸವ ಸಂಪನ್ನಗೊAಡಿತು.