ಸೋಮವಾರಪೇಟೆ, ಮೇ ೬: ಇಲ್ಲಿನ ಪತ್ರಿಕಾ ಭವನದಲ್ಲಿ ಭಾರತೀಯ ಭೌದ್ಧ ಮಹಾ ಸಭಾದ ಜಿಲ್ಲಾ ಶಾಖೆ ವತಿಯಿಂದ ೨೫೬೭ನೇ ಬುದ್ಧ ಪೂರ್ಣಿಮೆ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ಸಿ. ರಾಜು ಉದ್ಘಾಟಿಸಿದರು. ನಂತರ ಮಾತನಾಡಿ, ಸಮಾಜದಲ್ಲಿ ಇಂದು ಅಧ್ಯಾತ್ಮಿಕ ಮೌಲ್ಯಗಳನ್ನು ಕಡೆಗಣಿಸಿರುವುದರಿಂದ ಮನುಷ್ಯನ ಜೀವನ ಅಧೋಗತಿಗೆ ಹೋಗಲು ಕಾರಣವಾಗಿದೆ ಎಂದರು.
ಜಿಲ್ಲಾ ಸಮಿತಿಯ ಸದಸ್ಯ ಜಯಪ್ಪ ಹಾನಗಲ್ಲು ಮಾತನಾಡಿ, ವೈಜ್ಞಾನಿಕ ಚಿಂತನೆ ಮತ್ತು ಮುಕ್ತ ವಿಚಾರವಾದ ವನ್ನು ಉತ್ತೇಜಿಸಿದ ಬುದ್ಧ, ಧರ್ಮವೆಂದರೆ ಸತ್ಯ ಎಂಬ ಸರಳ ಪಾಠವನ್ನು ಪ್ರಚಾರ ಮಾಡಿದರು. ನಾವೆಲ್ಲರೂ ಬೌದ್ಧ ಧರ್ಮದ ಅನುಯಾಯಿಗಳು ಎನ್ನುವುದಕ್ಕಿಂತ, ನಾವು ಒಬ್ಬೊಬ್ಬರು ಬುದ್ಧರಾಗಬೇಕಿದೆ ಎಂದು ಕರೆ ನೀಡಿದರು.
ತಾನು ಹೇಳಿದಂತೆ ನಡೆಯಬೇಕೆಂದು ಬುದ್ಧ ಎಲ್ಲೂ ಪ್ರತಿಪಾದಿಸಲಿಲ್ಲ. ಆಲೋಚಿಸಿ, ಸಂದೇಹಗಳುAಟಾದರೆ ಪÀ್ರಶ್ನಿಸಿ ಎಂದು ಹೇಳಿದ್ದಾರೆ. ಬುದ್ಧನ ಸಮಕಾಲೀನರು ಅವನು ಸರ್ವದಾ ಹಸನ್ಮುಖಿ ಎಂದು ಬಣ್ಣಿಸಿದ್ದಾರೆ. ಬುದ್ಧನ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಎಲ್ಲರೂ ತಮ್ಮ ಜೀವನದಲ್ಲಿ ಅವರ ಸಂದೇಶಗಳನ್ನು ಅಳವಡಿಸಿಕೊಂಡು ಸುಖಿ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆAದರು.
ಅಧ್ಯಕ್ಷತೆಯನ್ನು ನಿವೃತ್ತ ಅಂಚೆ ಇಲಾಖಾಧಿಕಾರಿ ಎನ್.ಪಿ. ಕೃಷ್ಣಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಗಡಿ ಭದ್ರತಾ ಪಡೆಯ ಸೈನಿಕ ಎಚ್.ಬಿ. ಮಂಜುನಾಥ್, ಹಾನಗಲ್ಲು ಗ್ರಾಮ ಪಂಚಾಯಿತಿ ಸದಸ್ಯೆ ಸುಶೀಲ ಮತ್ತಿತರರು ಪಾಲ್ಗೊಂಡಿದ್ದರು.