ನಾಪೋಕ್ಲು, ಮೇ ೭: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಭಾನುವಾರದ ಪಂದ್ಯಗಳಲ್ಲಿ ನೆರವಂಡ, ಚಂಗುಲAಡ, ಪಾಡಿಯಂಡ, ಕರೋಟಿರ, ಮುಕ್ಕಾಟಿರ, ಮಾಚೇಟಿರ ಸೇರಿದಂತೆ ವಿವಿಧ ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು.
ದಿನದ ಮೊದಲ ಪಂದ್ಯದಲ್ಲಿ ಮುಕ್ಕಾಟಿರ ತಂಡದ ವಿರುದ್ಧ ನೆರವಂಡ ಗೆಲುವು ಸಾಧಿಸಿತು. ಮುಕ್ಕಾಟಿರ ಐದು ವಿಕೆಟ್ ನಷ್ಟಕ್ಕೆ ೨೬ ರನ್ ಗಳಿಸಿದರೆ ನೆರವಂಡ ತಂಡ ಒಂದು ವಿಕೆಟ್ ನಷ್ಟಕ್ಕೆ ೨೭ ರನ್ ಗಳಿಸಿ ಮುನ್ನಡೆ ಸಾಧಿಸಿತು. ಮೂಕಳೆರ ವಿರುದ್ಧ ಚಂಗುಲAಡ ತಂಡ ಗೆಲುವು ಸಾಧಿಸಿತು. ಚಂಗುಲAಡ ತಂಡ ಒಂದು ವಿಕೆಟ್ ನಷ್ಟಕ್ಕೆ ೪೭ ರನ್ ಗಳಿಸಿತು. ಉತ್ತರವಾಗಿ ಆಡಿದ ಮೂಕಳೆರ ತಂಡ ಐದು ವಿಕೆಟ್ ನಷ್ಟಕ್ಕೆ ೪೩ ರನ್ ಗಳಿಸಿ ಸೋಲನ್ನು ಅನುಭವಿಸಿತು. ಮಾಚಮಾಡ ವಿರುದ್ಧ ಪಾಡಿಯಂಡ ಜಯಗಳಿಸಿತು. ಮಾಚಮಾಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೪೬ ರನ್ ಗಳಿಸಿದರೆ ಪಾಡಿಯಂಡ ೨ ವಿಕೆಟ್ ನಷ್ಟಕ್ಕೆ ೫೦ ರನ್ ಗಳಿಸಿ ಜಯ ಸಾಧಿಸಿತು. ಮಿದೇರಿರ ತಂಡ ಐದು ವಿಕೆಟ್ ನಷ್ಟಕ್ಕೆ ೨೧ ರಂದು ಗಳಿಸಿದ್ದು, ದೇಯಂಡ ತಂಡ ಒಂದು ವಿಕೆಟ್ ನಷ್ಟಕ್ಕೆ ೨೨ ರನ್ ಗಳಿಸಿ ೯ ವಿಕೆಟ್‌ಗಳ ಜಯ ಸಾಧಿಸಿತು. ಕೊಕ್ಕೆಂಗಡ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ ೩೧ ರಂದು ಗಳಿಸಿದ್ದು ಉತ್ತರವಾಗಿ ಆಡಿದ ಕರೋಟಿರ ತಂಡ ಮೂರು ವಿಕೆಟ್ ನಷ್ಟಕ್ಕೆ ೩೭ ರನ್ ಗಳಿಸಿ ಏಳು ವಿಕೆಟ್‌ಗಳ ಜಯಸಾಧಿಸಿತು. ಮುಕ್ಕಾಟಿರ ತಂಡ ಪೊನ್ನಿಮಾಡ ವಿರುದ್ದ ಜಯ ಸಾಧಿಸಿತು. ಮುಕ್ಕಾಟಿರ ತಂಡ ೭ ವಿಕೆಟ್ ನಷ್ಟಕ್ಕೆ ೪೪ ರನ್ ಗಳಿಸಿದರೆ ಪೊನ್ನಿಮಾಡ ೬ ವಿಕೆಟ್ ನಷ್ಟಕ್ಕೆ ೩೨ ರನ್ ಗಳಿಸಲು ಶಕ್ತವಾಯಿತು. ಅಳಮೇಂಗಡ ತಂಡದ ವಿರುದ್ಧ ಮಾಚೆಟ್ಟಿರ ತಂಡ ಗೆಲುವು ಸಾಧಿಸಿತು. ಅಳಮೇಂಗಡ ಮೂರು ವಿಕೆಟ್ ನಷ್ಟಕ್ಕೆ ೩೮ ರನ್ ಗಳಿಸಿತು. ಮಾಚೆಟ್ಟಿರ ನಾಲ್ಕು ವಿಕೆಟ್ ನಷ್ಟಕ್ಕೆ ೫೩ ರನ್ ಗಳಿಸಿ ಗೆಲುವು ಸಾಧಿಸಿತು. ಚೊಟ್ಟಂಗಡ ತಂಡದ ವಿರುದ್ಧ ಬೊಟ್ಟಂಗಡ ತಂಡ ಜಯ ಸಾಧಿಸಿತು. ಚೊಟ್ಟಂಗಡ ಒಂದು ವಿಕೆಟ್ ನಷ್ಟಕ್ಕೆ ೩೩ ರನ್ ಗಳಿಸಿದರೆ ಬೊಟ್ಟಂಗಡ ಏಳು ವಿಕೆಟ್ ನಷ್ಟಕ್ಕೆ ೩೬ ರನ್ ಗಳಿಸಿತು. ಮುಂದಿನ ಪಂದ್ಯದಲ್ಲಿ ನಾಯಕಂಡ ವಿರುದ್ಧ ಮಂಡೀರ ತಂಡ ಸೋಲನ್ನು ಅನುಭವಿಸಿತು, ನಾಯಕಂಡ ಐದು ವಿಕೆಟ್ ನಷ್ಟಕ್ಕೆ ೪೩ ರನ್ ಗಳಿಸಿದರೆ ಮಂಡೀರ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೩೯ ರನ್ ಗಳಿಸಿತು. ಕಾಣತಂಡ ತಂಡ ಬಾಳೆಯಡ ವಿರುದ್ಧ ಯಾವುದೇ ವಿಕೆಟ್ ನಷ್ಟವಿಲ್ಲದೆ ೧೦೮ ರನ್ ಗಳಿಸಿತು ಬಾಳೆಯಡ ತಂಡ ೫ ವಿಕೆಟ್ ನಷ್ಟಕ್ಕೆ ಕೇವಲ ೩೨ ರನ್ ಗಳಿಸಲು ಶಕ್ತವಾಯಿತು. -ದುಗ್ಗಳ ಸದಾನಂದ.