ಮಡಿಕೇರಿ, ಮೇ ೬: ವೀರಾಜಪೇಟೆ ಗ್ರಾಮದ ಮೈತಾಡಿ ಐಯ್ಯಮಂಡ ಸುಗುಣ ಅವರ ಮನೆಯ ಅಂಗಳದಲ್ಲಿ ಹಾವು ಇರುವುದು ಕಂಡು ಮನೆಯವರು ಒಂಟಿ ಅಂಗಡಿಯ ಬೊಪ್ಪಂಡ ರೋಷನ್ ಅವರಿಗೆ ಮಾಹಿತಿ ನೀಡಿದರು. ರೋಷನ್ ಸ್ಥಳಕ್ಕೆ ಆಗಮಿಸಿ ಹಾವನ್ನು ರಕ್ಷಿಸುವುದರಲ್ಲಿ ಯಶಸ್ವಿಯಾದರು. ರಕ್ಷಣೆ ಮಾಡಿದ ಹಾವನ್ನು ಮಾಲ್ದಾರೆ ಅರಣ್ಯಕ್ಕೆ ಬಿಡಲಾಯಿತು ಎಂದು ರೋಷನ್ ಮಾಹಿತಿ ನೀಡಿದ್ದಾರೆ.

ಹಾವು ಕಂಡುಬAದರೆ ರೋಷನ್ ಅವರ ಮೊಬೈಲ್ ಸಂಖ್ಯೆ ೭೦೨೨೩೭೩೯೨೧ ಕರೆ ಮಾಡುವಂತೆ ಕೋರಿದ್ದಾರೆ.