ಚೆಯ್ಯಂಡಾಣೆ, ಮೇ ೭: ಸುನ್ನಿ ಸಂಘಟನೆಗಳು ರಾಜಕೀಯವಾಗಿ ಯಾವುದೇ ಪಕ್ಷದೊಂದಿಗೆ ಪ್ರತ್ಯೇಕವಾದ ಒಲವಾಗಲಿ ವಿರೋಧವಾಗಲಿ ಹೊಂದಿರುವುದಿಲ್ಲ ಎಂದು ಕೊಡಗು ಜಿಲ್ಲಾ ಸುನ್ನಿ ಕೋರ್ಡಿನೇಷನ್ ಸಮಿತಿ ತಿಳಿಸಿದೆ. ಸಂಘಟನೆಯು ರಾಷ್ಟçದ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಹೊಂದಿದ್ದು ರಾಷ್ಟçದ ಅಭಿವೃದ್ಧಿಯಲ್ಲಿ ಸದಾ ಕೈ ಜೋಡಿಸುತ್ತಾ ಬಂದಿದೆ.

ಚುನಾವಣಾ ರಾಜಕೀಯದಲ್ಲಿ ಸಂಘಟನೆಗೆ ತನ್ನದೇ ಆದ ನಿಲುವಿದ್ದು ಸಂದರ್ಭಾನುಸಾರ ತನ್ನ ಘಟಕಗಳ ಮೂಲಕ ಕಾರ್ಯಕರ್ತರಿಗೆ ಅದನ್ನು ತಲುಪಿಸಿದೆ, ಮುಂದಕ್ಕೂ ಅದೇ ರೀತಿಯಲ್ಲಿ ಮುಂದುವರಿಯಲಿದ್ದು. ಮುಂಬರುವ ಚುನಾವಣೆಯಲ್ಲಿ ಜಾತ್ಯತೀತ ನಿಲುವಿಗೆ ಪ್ರಾಮುಖ್ಯತೆ ನೀಡುವ, ರಾಷ್ಟ್ರ ಸಂವಿಧಾನವನ್ನು ಗೌರವಿಸುವ ಪಕ್ಷ ಅಧಿಕಾರಕ್ಕೆ ಬಂದು ರಾಜ್ಯದಲ್ಲಿ ಎಲ್ಲಾ ಧರ್ಮಗಳಲ್ಲಿ ಶಾಂತಿ ಸೌಹಾರ್ದತೆಯಿಂದ ರಾಜ್ಯದ ಆರ್ಥಿಕ ಸಾಮಾಜಿಕ ಉನ್ನತಿ ಕಾಣಬೇಕೆಂಬುದು ಕೊಡಗು ಜಿಲ್ಲಾ ಸಂಘ ಕುಟುಂಬದ ಅಭಿಲಾಷೆಯಾಗಿದೆ ಎಂದಿದೆ.

ಈ ಕುರಿತು ಕೋರ್ಡಿನೇಷನ್ ನಾಯಕರಾದ ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದರೂಸಿ (ಕೂರ್ಗ್ ಜಂಇಯ್ಯತ್ತುಲ್ ಉಲಮಾ ಅದ್ಯಕ್ಷರು) ಶಾದುಲಿ ಫೈಝಿ (ಸಹಾಯಕ ಖಾಝಿಗಳು ಕೊಡಗು) ಅಶ್ರಫ್ ಅಹ್ಸನಿ (ಕೂರ್ಗ್ ಜಂಇಯ್ಯತ್ತುಲ್ ಉಲಮಾ ಕಾರ್ಯದರ್ಶಿ) ಎಂ.ವೈ. ಅಬ್ದುಲ್ ಹಫೀಳ್ ಸಅದಿ (ಎಸ್ ವೈ ಎಸ್ ರಾಜ್ಯಾಧ್ಯಕ್ಷರು) ಹುಸೇನ್ ಸಖಾಫಿ ಎಮ್ಮೆಮಾಡು (ಕೋಶಾಧಿಕಾರಿ ಕೂರ್ಗ್ ಜಂಇಯ್ಯತ್ತುಲ್ ಉಲಮಾ) ಎ.ಎ. ಮುಹಮ್ಮದ್ ಹಾಜಿ (ಕಾರ್ಯದರ್ಶಿ ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು) ಇಸ್ಮಾಯಿಲ್ ಸಖಾಫಿ (ಮರ್ಕಝುಲ್ ಹಿದಾಯ ಕೊಟ್ಟಮುಡಿ) ಝುಬೈರ್ ಸಅದಿ (ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರು) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -ಅಶ್ರಫ್