ಮಡಿಕೇರಿ ವಿಧಾನಸಭಾ ಕ್ಷೇತ್ರ

ಅಭ್ಯರ್ಥಿ ಹೆಸರು : ದಿವಿಲ್ ಕುಮಾರ್ ಎ.ಎ.

ವಿದ್ಯಾಭ್ಯಾಸ : ಹತ್ತನೇ ತರಗತಿ

ವೃತ್ತಿ : ಕೃಷಿಕ

ಕಂಡAಗಾಲ

ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಅಭ್ಯರ್ಥಿ ಅಟ್ರಂಗಡ ದಿವಿಲ್‌ಕುಮಾರ್ ್ಲ ಕಂಡಗಾಲ ಒಂದನೇ ರುದ್ರಗುಪ್ಪೆ ನಿವಾಸಿಯಾಗಿದ್ದು, ರೈತ ಕುಟುಂಬದವರಾಗಿದ್ದಾರೆ. ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡಿ ಜನಸೇವೆ ಮಾಡುತ್ತಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ದಿವಿಲ್ ಅವರು ಮೂಲತಃ ಬಹುಜನ ಚಳವಳಿಯಲ್ಲಿ ಹಲವು ವರ್ಷಗಳಿಂದ ಸತತವಾಗಿ ಶೋಷಿತ ಸಮುದಾಯದ ಪರ ಹೋರಾಟ ಮಾಡಿಕೊಂಡು ಬರುತ್ತಿದ್ದು, ಅಪ್ಪಟ ಡಾ.ಬಿ ಅರ್. ಅಂಬೇಡ್ಕರ್ ಅವರ ಅನುಯಾಯಿಯಾಗಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಮಸ್ತ ನಾಗರಿಕರಿಗೆ ಸಂವಿಧಾನದ ಆಶಯಗಳನ್ವಯ ಸ್ವಾತಂತ್ರö್ಯ, ಸಹೋದರತ್ವ, ಸಮಾನತೆಯ ಸಮಾಜದ ನಿರ್ಮಾಣ, ಸಾಮಾಜಿಕ ನ್ಯಾಯ ಜಾರಿ, ಮೂಲಭೂತ ಸೌಕರ್ಯಗಳನ್ನು ಒದಗಿಸಿ ಶÀಶಕ್ತ ಸಮಾಜ ನಿರ್ಮಾಣ ಮಾಡುವುದು ಇವರ ಉದ್ದೇಶವಾಗಿದೆ. ಭೀಮಪುತ್ರಿ ಬ್ರಿಗೇಡ್ ಸಾಮಾಜಿಕ ಸಂಘಟನೆಯ ಪ್ರಧಾನ ಕಾರ್ಯದಶಿಯಾಗಿರುವ ಇವರು ಮಡಿಕೇರಿ ಕ್ಷೇತ್ರದಿಂದ ಪ್ರಥಮ ಬಾರಿಗೆ ಸ್ಪರ್ಧೆ ಮಾಡುತ್ತಿದ್ದಾರೆ.

ಅಭ್ಯರ್ಥಿ ಹೆಸರು: ಸೋಮಪ್ಪ ಹೆಚ್.ಎಂ.

ವಿದ್ಯಾಭ್ಯಾಸ: ಹತ್ತನೇ ತರಗತಿ

ವೃತ್ತಿ: ಕಾರ್ಮಿಕ

ಕುಂಬೂರು

ಸೋಮವಾರಪೇಟೆ ತಾಲೂಕು ಕುಂಬೂರು ಗ್ರಾಮ ನಿವಾಸಿಯಾಗಿರುವ ಸೋಮಪ್ಪ ಅವರು ಕಳೆದ ೨೦ ವರ್ಷಗಳಿಂದ ಕಾರ್ಮಿಕರ ಪರವಾಗಿ ಹಾಗೂ ಎಲ್ಲ ವರ್ಗದ ಅಶಕ್ತರ ಪರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಎಐಟಿಯುಸಿ ಪಕ್ಷ ಹಾಗೂ ಆದಿದ್ರಾವಿಡ ಸಂಘಟನೆಯ ಜಿಲ್ಲಾಧ್ಯಕ್ಷರಾಗಿರುವ ಇವರು, ಮೂರು ಬಾರಿ ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಎರಡು ಬಾರಿ ಗೆಲುವು ಸಾಧಿಸಿ ಜನಸೇವೆ ಮಾಡಿದ್ದಾರೆ. ೨೦ವರ್ಷಗಳಿಂದ ಹೋರಾಟ ಮಾಡಿ ಫಲವಾಗಿ ೯೪ಸಿ ಅಡಿಯಲ್ಲಿ ಕೆಲವರಿಗೆ ಹಕ್ಕುಪತ್ರ ಹಾಗೂ ಆನೆ ಮಾನವ ಸಂಘರ್ಷ ತಡೆಗೆ ರೈಲ್ವೇ ಬ್ಯಾರಿಕೇಡ್ ಅಳವಡಿಕೆಯ ಯೋಜನೆಗಳು ಕಾರ್ಯಗತಗೊಂಡಿವೆ. ಆದರೆ, ಕಾರ್ಮಿಕರ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಸಿಗದ ಕಾರಣ ಇದೀಗ ವಿಧಾಸಭಾ ಚುನಾವಣೆಗೆ ಸ್ಪರ್ಧೆಗಿಳಿದಿದ್ದಾರೆ. ನಿವೇಶನ, ಹಕ್ಕುಪತ್ರ ಸೇರಿದಂತೆ ಎಲ್ಲರಿಗೂ ಸರಕಾರದ ಸೌಲಭ್ಯ ದೊರಕಬೇಕೆಂಬದು ಇವರ ಉದ್ದೇಶವಾಗಿದೆ. ಎಐಟಿಯುಸಿ ಅಂಗಪಕ್ಷವಾದ ಸಿಪಿಐನ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಅಭ್ಯರ್ಥಿ ಹೆಸರು: ರಶೀದಾ ಬೇಗಂ

ವಿದ್ಯಾಭ್ಯಾಸ: ಏಳನೆ ತರಗತಿ

ವೃತ್ತಿ: ವ್ಯಾಪಾರೋದ್ಯಮಿ

ಕುಶಾಲನಗರ

ಕೊಡಗಿನ ಗಡಿಭಾಗ ಕುಶಾಲನಗರ ನಿವಾಸಿಯಾಗಿರುವ ರಶೀದಾ ಬೇಗಂ ಕಳೆದ ೨೫ ವರ್ಷಗಳಿಂದ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಜನರ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಡಿಐಸಿ ಸಂಘಟನೆಯ ರಾಜ್ಯ ಉಪಾಧÀ್ಯಕ್ಷರಾಗಿ, ರಕ್ಷಣಾ ವೇದಿಕೆಯ ಸ್ವಾಭಿಮಾನ ಬಣದ ಕೊಡಗು ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು, ರೈತ ಸಂಘದ ಜನಜಾಗೃತಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗಷ್ಟೇ ಸಂಘದ ಮೂಲಕ ಗದಗ್‌ನಲ್ಲಿ ೭೫ ಜೋಡಿಗೆ ಉಚಿತ ವಿವಾಹ ಮಾಡಿಸಿದ್ದಾರೆ. ಯಾವದೇ ರಾಷ್ಟಿçÃಯ ಪಕ್ಷಗಳು ಸೇವೆಯನ್ನು ಗುರುತಿಸದೇ ಇದ್ದಾಗ ಇಂಡಿಯನ್ ಮೂವ್‌ಮೆಂಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ಟಿ. ಲಲಿತಾ ನಾಯಕ್ ಪಕ್ಷದಿಂದ ಬಿ ಫಾರಂ ನೀಡಿದ್ದಾರೆ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಅವಕಾಶಗಳು ಸಿಗಬೇಕು, ನಿರುದ್ಯೊಗಿಗಳಿಗೆ ಉದ್ಯೋಗ, ಸ್ವ ಉದ್ಯಮ ನಡೆಸಲು ಅನುಕೂಲತೆ ಕಲ್ಪಿಸಿಕೊಡಬೇಕು ಎಂಬದು ಇವರ ಉದ್ದೇಶವಾಗಿದೆ. ಪ್ರಕೃತಿ ವಿಕೋಪ, ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಸೇವೆ ಹಾಗೂ ವೃದ್ಧಾಶ್ರಮಗಳಿಗೆ, ವಿಶೇಷ ಚೇತನರ ಪರವಾಗಿ ಹಲವಷ್ಟು ಸೇವಾ ಕಾರ್ಯಗಳನ್ನು ಮಾಡಿರುವ ಇವರು ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಇಂಡಿಯನ್ ಮೂವ್‌ಮೆಂಟ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ.

ಚುನಾವಣೆ: ಅಭ್ಯರ್ಥಿ ಪರಿಚಯ

ವೀರಾಜಪೇಟೆ ವಿಧಾನಸಭಾ ಕ್ಷೇತ್ರ

ಅಭ್ಯರ್ಥಿ ಹೆಸರು: ಎಂ.ಎ.ನಾಸಿರ್

ವಿದ್ಯಾರ್ಹತೆ: ಐದನೇ ತರಗತಿ

ವೃತ್ತಿ: ಜನಸೇವೆ

ಕುಂಜಿಲ-ಮಕ್ಕಿ

ಕುAಜಿಲ ಕಕ್ಕಬೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಕ್ಕಿ ಗಾಮದ ನಿವಾಸಿ, ನಾಸಿರ್ ಮಕ್ಕಿ ಎಂದೇ ಕರೆಯಲ್ಪಡುವ ನಾಸಿರ್ ಕಳೆದ ೧೫ ವರ್ಷಗಳಿಂದ ಎಲ್ಲ ವರ್ಗದವರಿಗಾಗಿ ಜನಸೇವೆ ಮಾಡಿಕೊಂಡು ಬರುತ್ತಿದ್ದಾರೆ. ನಾಲ್ಕು ನಾಡು ಜಮಾ ಅತ್ ಅಧ್ಯಕ್ಷರಾಗಿ, ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷರಾಗಿ ಸೇವೆ ಮಾಡಿಕೊಂಡಿದ್ದು, ಕಕ್ಕಬೆ ಗ್ರಾಮ ಪಂಚಾಯ್ತಿ ಸದಸ್ಯರಾಗಿಯೂ ಆಯ್ಕೆಗೊಂಡು ಜನ ಸೇವೆ ಮಾಡಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಇದೀಗ ಜನರ ಹಾಗೂ ಯುವಕರ ಬೆಂಬಲದೊAದಿಗೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಜನಸೇವೆ ಮಾಡುವದನ್ನೇ ಉದ್ದೇಶವಾಗಿಟ್ಟುಕೊಂಡು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಅಭ್ಯರ್ಥಿ ಹೆಸರು: ದರ್ಶನ್ ಶೌರಿ ಪಿ.ಕೆ.

ವಿದ್ಯಾರ್ಹತೆ: ಪಿಯುಸಿ

ವೃತ್ತಿ: ಕೃಷಿಕ

ಕುಂದಚೇರಿ

ಮಡಿಕೇರಿ ತಾಲೂಕು ಕುಂಜಿಲಗೇರಿ ಗ್ರಾಮದ ನಿವಾಸಿಯಾಗಿರುವ ಪೊನ್ನೇಟಿ ದರ್ಶನ್ ಶೌರಿ ಪಿಯುಸಿ ಮುಗಿಸಿದ ಬಳಿಕ ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮದಲ್ಲಿ ಕೆಲಸಕ್ಕೆ ಸೇರಿಕೊಂಡರು. ಸಮಾಜಸೇವೆ ಮಾಡಬೇಕೆಂಬ ತುಡಿತ ಇರುವ ಇವರು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಂದ ಪ್ರೇರಿತಗೊಂಡು ಆಮ್ ಆದ್ಮಿ ಮಾದರಿ ಪಕ್ಷ ಕಟ್ಟಬೇಕೆಂಬ ಉದ್ದೇಶ ಹೊಂದಿದ್ದರು. ನಂತರ ಹೊಟೇಲ್ ಉದ್ಯಮದಲ್ಲಿ ಸಾರ್ವಜನಿಕ ಸಂಪರ್ಕ ವ್ಯವಸ್ತಾಪಕರಾಗಿ ಕೆಲಸ ಮಾಡುತ್ತಾ ಸಮಾಜದ ಪರಿಚಯ ಮಾಡಿಕೊಂಡು ಹಣಕ್ಕಾಗಿ ಮತವನ್ನು ಮಾರಿಕೊಳ್ಳುವದನ್ನು ತಡೆಯಬೇಕೆಂಬ ಉದ್ದೇಶದಿಂದ ರಾಜಕೀಯದತ್ತ ಒಲವು ತೋರಿ, ಸಮಾಜದಲ್ಲಿ ಬದಲಾವಣೆ ಬಯಸಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಅಭ್ಯರ್ಥಿ ಹೆಸರು: ಸಜು ವಿ.ಎ.

ವಿದ್ಯಾಭ್ಯಾಸ: ಬಿ ಕಾಂ ಪದವೀಧರ

ವೃತ್ತಿ: ಟಿಂಬರ್ ಕಾರ್ಮಿಕ

ಚೇರಳ ಶ್ರೀಮಂಗಲ

ಚೆಟ್ಟಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚೇರಳ ಶ್ರೀಮಂಗಲ ಗ್ರಾಮದ ನಿವಾಸಿಯಾಗಿರುವ ವಿ.ಎ.ಸಜು ಬಿ.ಕಾಂ ಪದವೀಧರರಾಗಿದ್ದು, ಬಾಡಿಗೆ ಮನೆಯಲ್ಲಿ ವಾಸವಿದ್ದುಕೊಂಡು ಟಿಂಬರ್ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಯಾವದೇ ರಾಜಕೀಯ ಹಿನ್ನೆಲೆ ಇಲ್ಲದೆ ವೈಯಕ್ತಿಕವಾಗಿ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಜನಸೇವೆಗೆ ಇಳಿದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಸಲುವಾಗಿ ಕರ್ನಾಟಕ ರಾಷ್ಟಿçÃಯ ಸಮಿತಿ ಪಕ್ಷ ಸೇರಿಕೊಂಡು ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಉದ್ದೇಶ ಹೊಂದಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳ ನಡೆಯ ಬಗ್ಗೆ ಅರಿವಿದ್ದು, ಜನರಿಗೆ ಒಳಿತನ್ನು ಬಯಸುವದು ಹಾಗೂ ಕರ್ನಾಟಕ ರಾಜ್ಯ ಮತ್ತು ದೇಶವನ್ನು ಭ್ರಷ್ಟಾಚಾರ ಮುಕ್ತವಾಗಿ ಮಾಡುವ ನಿಟ್ಟಿನಲ್ಲಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ಕೆ ಆರ್ ಎಸ್ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಅಭ್ಯರ್ಥಿ ಹೆಸರು: ಡಾ. ಎಸ್.ವೈ.ಎಂ.ಮಸೂದ್ ಫೌಜ್ದಾರ್

ವಿದ್ಯಾರ್ಹತೆ: ಬಿ.ಇ. (ಮ್ಯೆಕಾನಿಕಲ್) ಎಂ.ಎ. (ಪೊಲಿಟಿಕಲ್ ಸೈನ್ಸ್) ಬಿ.ಬಿ.ಎ, ಡಿಪ್ಲೋಮ ಜರ್ನಲಿಸಂ, ಡಿಪ್ಲೋಮ ಇನ್ ಕಂಪ್ಯೂಟರ್ ಪ್ರೋಗ್ರಂಮಿAಗ್

ವೃತ್ತಿ: ಸಮಾಜಸೇವೆ

ಜೆಹೆಚ್‌ಬಿಸಿಎಸ್ ಲೇಜೌಟ್, ಜೆ.ಪಿ.ನಗರ, ಬೆಂಗಳೂರು

ಬೆAಗಳೂರು ಜೆ.ಪಿ. ನಗರದ ನಿವಾಸಿಯಾಗಿರುವ ಇವರು ಭಾರತÀ ಸರ್ಕಾರದ ರಾಷ್ಟಿçÃಯ ಅಲ್ಪಸಂಖ್ಯಾತ ವಿಭಾಗದ ಉಸ್ತುವಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತಿದ್ದಾರೆ. ವಿಶ್ವ ಶ್ಯಯದಾದ್ ಕೌನ್ಸಿಲ್ ಆಫ್ ಇಂಡಿಯಾ ಚಾಪ್ಟರ್, ಚೇರ್ಮೆನ್, ಆಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ೪೦ ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ರಾಷ್ಟಿçÃಯ ಕಾಂಗ್ರೆಸ್ ಪಕ್ಷದ ಗ್ರಾಮಾಂತರ, ರಾಜ್ಯ ಮತ್ತು ರಾಷ್ಟ್ರೀಯ ಸಮಿತಿಗಳಲ್ಲಿ ವಿವಿಧ ಪದವಿಗಳನ್ನು ಅಲಂಕರಿಸಿದ್ದಾರೆ. ಅಲ್ಪಸಂಖ್ಯಾತ ನಿಗಮ ಮತ್ತು ಮಂಡಳಿಗಳಲ್ಲಿ ಅಲ್ಪಸಂಖ್ಯಾತರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಯಶಸ್ಸನ್ನು ಕಂಡಿದ್ದಾರೆ. ಜಾತಿ ಧರ್ಮಗಳ ಬೇಧವಿಲ್ಲದೆ ಸಾಮಾಜಿಕ ಕಳಕಳಿಯೊಂದಿಗೆ ವಿವಿಧ ಕ್ಷೇತ್ರದಲ್ಲಿ ಸಹಾಯಹಸ್ತ ನೀಡಿದ್ದಾರೆ, ರಾಜ್ಯದ ವಿವಿಧ ಭಾಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡಲು ಸಹಕಾರ ಮಾಡಿದ್ದಾರೆ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಾ ಕಣದಲ್ಲಿದ್ದು, ಕ್ಷೇತ್ರದಲ್ಲಿ ಉತ್ತಮ ಅರೋಗ್ಯ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯ ಒದಗಿಸುವದು ಇವರ ಉದ್ದೇಶವಾಗಿದೆ.