ಶನಿವಾರಸಂತೆ, ಮೇ ೭: ಕೊಡ್ಲಿಪೇಟೆಯಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹೇಮಂತ್ ಕುಮಾರ್ ಚುನಾವಣಾ ಪ್ರಚಾರ ನಡೆಸಿ ಮತ ಯಾಚಿಸಿದರು.
ಈ ಸಂದರ್ಭ ಅವರು ಮಾತನಾಡಿ, ೨೫ ವರ್ಷಗಳಿಂದ ಬಿಜೆಪಿಗೆ ನಿಷ್ಠೆಯಿಂದ ದುಡಿದಿದ್ದೇನೆ. ಆದರೆ, ಈ ಬಾರಿಯ ಚುನಾವಣೆಯಲ್ಲೂ ಹೊಸ ಮುಖಗಳಿಗೆ ಅವಕಾಶ ನೀಡದ ಕಾರಣ, ಬಿಜೆಪಿಗೆ ಬಂಡಾಯವಾಗಿ ಸ್ಪರ್ಧಿಸಿದ್ದೇನೆ. ಈ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯಲು ಪಣ ತೊಟ್ಟಿದ್ದೇನೆ ಎಂದರು. ಪ್ರಮುಖರಾದ ಪ್ರದೀಪ್, ಯಾಕೂಬ್, ಸುಬ್ರಹ್ಮಣ್ಯ, ಅಜಯ್, ಸಂತೋಷ್, ವಿರೂಪಾಕ್ಷ ಮೊದಲಾದವರು ಪಾಲ್ಗೊಂಡಿದ್ದರು.