ಮಡಿಕೇರಿ, ಮೇ ೫: ಮಾಸ್ಟರ್ಸ್ ಅಥ್ಲೆಟಿಕ್ಸ್ ತಲಚೇರಿ ವತಿಯಿಂದ ತಲಚೇರಿಯಲ್ಲಿ ನಡೆದ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ೬೦+ ವಿಭಾಗದಲ್ಲಿ ಜಿಲ್ಲೆಯವರಾದ ನಾಂಗಾಲದ ಚೇಮಿರ ಸೀತಮ್ಮ ಸುಬ್ಬಯ್ಯ ಅವರು ಸಾಧನೆ ಮಾಡಿದ್ದಾರೆ.

ಶಾಟ್‌ಫುಟ್‌ನಲ್ಲಿ ಪ್ರಥಮ ಹಾಗೂ ಡಿಸ್ಕಸ್ ಥ್ರೋನಲ್ಲಿ ಪ್ರಥಮ ಸ್ಥಾನದೊಂದಿಗೆ ನಗದು ಹಾಗೂ ಪದಕವನ್ನು ಇವರು ಪಡೆದುಕೊಂಡಿದ್ದಾರೆ. ಈ ಹಿಂದೆಯೂ ಮಾಸ್ಟರ್ಸ್ ಕ್ರೀಡೆಯಲ್ಲಿ ಇವರು ಹಲವು ಪದಕಗಳಿಸಿದ್ದಾರೆ.