ಮಡಿಕೇರಿ, ಮೇ ೫: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಪರ ನಗರದ ವಿವಿಧೆಡೆ ಚುನಾವಣಾ ಪ್ರಚಾರ ನಡೆಯಿತು.

ಎಐಸಿಸಿ ಕೊಡಗು ವೀಕ್ಷಕರಾದ ಹಸೀನ ಬಾನು, ಮಡಿಕೇರಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಎಂ.ಎನ್. ರೌವೂಫ್, ಬೂತ್ ಅಧ್ಯಕ್ಷ ಶಾ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಬೂತ್ ಬಿಎಲ್‌ಎ ಹಾಗೂ ಸೇವಾದಳದ ಪ್ರಮುಖರಾದ ಹಬೀಬ್ ಮತ್ತಿತರರು ಹಾಜರಿದ್ದರು.