ಮಡಿಕೇರಿ, ಮೇ ೫: ಮಡಿಕೇರಿಯ ಮಲ್ಲಿಕಾರ್ಜುನ ನಗರದಲ್ಲಿ ನೆಲೆನಿಂತಿರುವ ಶ್ರೀ ಕೋದಂಡರಾಮ ದೇವಾಲಯವು ಸಾಮಾಜಿಕ ಕ್ರಾಂತಿಗೆ ಸಾಕ್ಷಿಯಾಗಿದೆ ಎಂದು ಪುತ್ತೂರಿನ ಜ್ಯೋತಿಷ್ಕರು ಈ ಗೋಪಾಲಕೃಷ್ಣ ಭಟ್ಟ ಅವರು ಅಭಿಪ್ರಾಯಿಸಿದರು. ದೇವಾಲಯದ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಪ್ರಯುಕ್ತ ದೇವಾಲಯ ಆವರಣದ ಮುಂಭಾಗ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಅವರು, ದೇವರಲ್ಲಿ ಅಸ್ಪೃಶ್ಯತೆ ಎಂಬುದು ಇಲ್ಲ. ಮಾನವ ನಿರ್ಮಿತ ಮೇಲು-ಕೀಳು ಜಾತಿ ಎಂಬ ಪರಿಕಲ್ಪನೆಯನ್ನು ಅಲ್ಲಗಳೆದು ಇಂದು ಕೋದಂಡರಾಮ ದೇವಾಲಯ ತಲೆ ಎತ್ತಿದೆ. ಕಾವೇರಿ ಉಗಮಸ್ಥಾನ, ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯರಂತಹ ಚೇತನರ ಊರಿನಲ್ಲಿ ಇಂದು ಶ್ರೀ ರಾಮನ ಪ್ರತಿಷ್ಠಾಪನೆ ಆಗಿದೆ. ದೇವಾಲಯಗಳ ನಿರ್ಮಾಣದಿಂದಲೇ ಊರಿನ ಅಭಿವೃದ್ಧಿ ಸಾಧ್ಯ ಎಂದರು.
ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಅವರು ಮಾತನಾಡಿ, ಪ್ರಸ್ತುತ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಕ್ಷಣಾರ್ಧದಲ್ಲಿ ಇಡೀ ವಿಶ್ವವೆ ನಮ್ಮ ಎದುರು ಕಾಣಬಹುದು. ಇದರಿಂದ ಕೇವಲ ಬಾಹ್ಯದ ಅನ್ವೇಷಣೆ ಸಾಧ್ಯ ಹೊರತು ಅಂತರAಗದ ಶೋಧ ಅಸಾಧ್ಯ. ದೇಗುಲಗಳು ಅಂತರAಗ ಶೋಧನೆಗೆ ಕೈ ಗನ್ನಡಿಯಾಗಿವೆ. ವಿಕೃತ ಆಲೋಚನೆ ಕಳೆದುಕೊಳ್ಳಲು ದೇವಾಲಯಕ್ಕೆ ಆಗಮಿಸಿ ಅಧ್ಯಾತ್ಮದಲ್ಲಿ ತೊಡಗಿಸುವಂತೆ ಕರೆ ನೀಡಿದರು.
ಬೆಂಗಳೂರು ಅಲಸೂರು ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಬೋಧಸ್ವರೂಪಾನಂದ ಮಹಾರಾಜ್ ಅವರು ಮಾತನಾಡಿ, ಶ್ರೀ ರಾಮನು ಮರ್ಯಾದಾ ಪುರುಷನಾಗಿದ್ದು, ಅವನ ಒಂದೊAದು ಗುಣವಾದರೂ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ದೇವಾಲಯ ಅಭೂತಪೂರ್ವವಾಗಿ ನಿರ್ಮಾಣ ಗೊಂಡಿದೆ ಎಂಬುದಾಗಿಯೂ ಈ ಸಂದರ್ಭ ಪ್ರಶಂಸೆ ವ್ಯಕ್ತಪಡಿಸಿದರು.
ಮಡಿಕೇರಿ ವಿಜಯ ವಿನಾಯಕ ದೇವಾಲಯದ ಪ್ರಧಾನ ಅರ್ಚಕರು ಹಾಗೂ ಶ್ರೀ ಕೋದಂಡರಾಮ ಕ್ಷೇತ್ರ ತಂತ್ರಿಗಳು ವೇದಮೂರ್ತಿ ಶ್ರೀ ಕೃಷ್ಣ ಉಪಾಧ್ಯ ಅವರು ಮಾತನಾಡಿ, ವಾನರ ಸೇನೆಯಂತೆ ನೂರಾರು ಮಂದಿ ಪರಿಶ್ರಮಿಸಿದ ಕಾರಣ ದೇವಾಲಯವು ಈ ಹಂತ ತಲುಪಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಡಿಕೇರಿ ಶ್ರೀ ರಾಜರಾಜೇಶ್ವರಿ ದೇವಾಲಯದ ಧರ್ಮದರ್ಶಿ ಗೋವಿಂದ ಸ್ವಾಮಿ ಅವರುಗಳು ಮಾತನಾಡಿ, ರಾಮ ಮಂದಿರ ಉತ್ತಮವಾಗಿ ನಿರ್ಮಾಣಗೊಂಡಿದೆ ಎಂದರು. ದೇವರು ಒಂದು ಅಗೋಚರ ಶಕ್ತಿಯಾಗಿದ್ದು, ದೇವರನ್ನು ಮನಸ್ಸಿನಲ್ಲಿ ನೆನೆದರೆ ಚಂಚಲ ದೂರವಾಗುತ್ತದೆ ಎಂದು ಹೇಳಿದರು.
ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಿ.ರಾಜೇಂದ್ರ ಅವರು ಮಾತನಾಡಿ, ದೇವರ ಕೆಲಸದಲ್ಲಿ ಎಲ್ಲರೂ ಸೇವಕರಾಗಿ ಕಾರ್ಯನಿರ್ವಹಿಸಬೇಕೇ ಹೊರತು, ಪ್ರತಿಫಲಾಪೇಕ್ಷೆ ಬಯಸಬಾರದು. ನಾನು ಎಂಬ ಅಹಂಕಾರ ತೆಗೆದುಹಾಕಿದರೆ ಮುಕ್ತಿ ದೊರಕಲು ಸಾಧ್ಯವಾಗುತ್ತದೆ. ಮುಂಬರುವ ದಿನಗಳಲ್ಲಿ ದೇವಾಲಯವನ್ನು ಭಕ್ತಾದಿಗಳು ಮುನ್ನಡೆಸಿಕೊಂಡು ಹೋಗಬೇಕೆಂದರು.
ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಸ್.ಎಸ್ ಸಂಪತ್ ಕುಮಾರ್ ಅವರು ಮಾತನಾಡಿ, ಬ್ರಹ್ಮಕಲಶೋತ್ಸವ ಸಂಬAಧ ನಡೆದ ವಿವಿಧ ಕಾರ್ಯಕ್ರಮಗಳಾದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾನ, ಭಜನೆ ಹಾಗೂ ಇತ್ಯಾದಿಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿದ ಉಪಸಮಿತಿಗಳ ಕಾರ್ಯವನ್ನು ಶ್ಲಾಘಿಸಿದರು.
ಕೋದಂಡರಾಮ ಟ್ರಸ್ಟ್ ಅಧ್ಯಕ್ಷ ಹೆಚ್.ಮಂಜುನಾಥ್ ಅವರು ಮಾತನಾಡಿ, ಈ ಹಿಂದೆ ಕೇವಲ ಭಾವಚಿತ್ರವೊಂದನ್ನು ಇಟ್ಟು ರಾಮನ ಪೂಜೆ ಮಾಡಲಾಗುತ್ತಿತ್ತು. ನಂತರದಲ್ಲಿ ದೇವಾಲಯ ಪ್ರತಿಷ್ಠಾಪನೆಗೊಂಡು ಇದೀಗ ಮೇಲ್ಭಾಗಕ್ಕೆ ದೇವಾಲಯವು ಏರಿದ್ದು, ಸರ್ವರ ಪರಿಶ್ರಮ ಇದರಲ್ಲಿ ಅಡಗಿದೆ ಎಂದರು.
ವೇದಿಕೆಯಲ್ಲಿ ಕಾಫಿ ಬೆಳೆಗಾರ ಹಾಗೂ ದಾನಿ ಮಂಡಿರ ದೇವಿ ಪೂಣಚ್ಚ, ಬಿಲ್ಡರ್ ಕಿಶೋರ್ ಬಾಬು, ಮಡಿಕೇರಿ ಶಿವ ಜ್ಯುವೆರ‍್ಸ್ ಮಾಲೀಕ ಕೆ.ಮಧುಕರ್, ಪ್ರತಿಷ್ಠಾ ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಸುಬ್ಬರಾವ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಹೆಚ್.ಎನ್ ನಂಜುAಡ, ಕೋದಂಡರಾಮ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹೆಚ್.ವಿ ಸುಧಾಕರ್, ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಖಜಾಂಚಿ ಎಸ್.ಕುಶಾಲ, ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಹೆಚ್.ಎನ್ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಆರ್.ವಿಶ್ವನಾಥ್ ಹಾಗೂ ಪ್ರತಿಷ್ಠಾ ಬ್ರಹ್ಮಕಲಶ ಸ್ವಾಗತ ಸಮಿತಿಯ ಅಧ್ಯಕ್ಷ ವಿನೋದ್ ಕುಮಾರ್ ಅವರು ಉಪಸ್ಥಿತರಿದ್ದರು. ಪ್ರಜ್ಞಾ ಜಿ.ಆರ್. ಪ್ರಾರ್ಥನೆ ನೆರವೇರಿಸಿದರು. ಪ್ರಜ್ವಲ್ ಜಿ.ಆರ್. ಅವರು ಸ್ವಾಗತಿಸಿದರು. ಸುಮಿತ್ರಾ ಹಾಗೂ ಕೇಶವ ಗೌಡ ನಿರೂಪಿಸಿದರು.
ಜ್ಯೋತಿ ಯುವಕ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವೀರಾಜಪೇಟೆ ನಾಟ್ಯಾಂಜಲಿ ತಂಡ, ಮಡಿಕೇರಿ ನಾಟ್ಯಕಲಾತಂಡ, ಮಡಿಕೇರಿ ಕಿಂಗ್ಸ್ ಆಫ್ ಕೂರ್ಗ್ ತಂಡ, ಗುರುಕುಲ ಕಲಾ ಮಂಡಳಿ, ಸಿಂಚನ ಮತ್ತು ತಂಡದವರಿAದ ನೃತ್ಯ ಪ್ರದರ್ಶನಗಳು ನೆರೆದಿದ್ದವರ ಮನರಂಜಿಸಿದವು. ಮಡಿಕೇರಿಯ ವಿಕ್ರಂ ಶೆಟ್ಟಿ ಅವರಿಂದ ಜಾದೂ ಪ್ರದರ್ಶನ ನಡೆಯಿತು.