ಮಡಿಕೇರಿ, ಮೇ ೬: ೨೦೨೩ರ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಅಂಚೆ ಮತದಾನದ ಮೂಲಕ ಮತದಾನ ಮಾಡಲು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜನೆಗೊಂಡ ಖಾಸಗಿ ವಾಹನ ಚಾಲಕರುಗಳಿಗೆ, ಚುನಾವಣಾ ಆಯೋಗವು ಅವಕಾಶ ಕಲ್ಪಿಸಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ೪೬ ಚಾಲಕರು ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ೪೪ ಚಾಲಕರು ಸೇರಿದಂತೆ ಒಟ್ಟು ೯೦ ಚಾಲಕರು ನಮೂನೆ ೧೨ನ್ನು ಸಲ್ಲಿಸುವ ಮೂಲಕ ಅಂಚೆ ಮತದಾನಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಧುರ ತಿಳಿಸಿದ್ದಾರೆ.