ಮಡಿಕೇರಿ, ಮೇ ೫ : ಮಡಿಕೇರಿ ಕ್ಷೇತ್ರದ ಸಮೃದ್ಧ ಭವಿಷ್ಯಕ್ಕಾಗಿ ಸುಸ್ಥಿರ ಯೋಜನೆಯ ಪರಿಕಲ್ಪನೆಯೊಂದಿಗೆ ಗ್ರೇಟರ್ ಮಡಿಕೇರಿ ಟೂರಿಸಂ ಕಾರಿಡಾರ್ ರಚನೆಯ ಬಿಜೆಪಿ ಮಡಿಕೇರಿ ಕ್ಷೇತ್ರದ ಚುನಾವಣಾ ಪ್ರಣಾಳಿಕೆಯನ್ನು ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಬಿಡುಗಡೆ ಗೊಳಿಸಿದರು,
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಕ್ಷೇತ್ರದ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅಪ್ಪಚ್ಚು ರಂಜನ್, ಮಡಿಕೇರಿ ಕ್ಷೇತ್ರದ ೨೪ ಗ್ರಾಮಗಳ ನ್ನೊಳಗೊಂಡ ಗ್ರೇಟರ್ ಮಡಿಕೇರಿ ಟೂರಿಸಂ ಕಾರಿಡಾರ್ನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುತ್ತದೆ. ಮಡಿಕೇರಿ ಕ್ಷೇತ್ರದಾದ್ಯಂತ ಇರುವ ಪ್ರವಾಸಿ ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡ ಟೂರಿಸಂ ಕಾರಿಡಾರ್ ಇದಾಗಿರಲಿದೆ ಎಂದರು.
ಮಡಿಕೇರಿ, ಕೆ.ನಿಡುಗಣೆ ಭಾಗಮಂಡಲ, ತಲಕಾವೇರಿ, ಗಾಳಿಬೀಡು, ಗರ್ವಾಲೆ, ಕಿರಗಂದೂರು, ಬೆಟ್ಟದಳ್ಳಿ, ಶಾಂತಳ್ಳಿ, ಹಾನಗಲ್ಲು, ಚೌಡ್ಲು , ಸೋಮವಾರಪೇಟೆ, ದೊಡ್ಡಮಳ್ತೆ , ಗೌಡಳ್ಳಿ, ಶನಿವಾರಸಂತೆ, ನಿಡ್ತ, ತೊರೆನೂರು, ಹೆಬ್ಬಾಲೆ, ಕೂಡು ಮಂಗಳೂರು, ಕುಶಾಲನಗರ, ಗುಡ್ಡೆಹೊಸೂರು, ನಂಜರಾಯಪಟ್ಟಣ, ನಾಕೂರು ಶಿರಂಗಾಲ, ಕಂಬಿಬಾಣೆ ಸೇರಿದಂತೆ ಮಡಿಕೇರಿ ಕ್ಷೇತ್ರದ ೨೪ ಗ್ರಾಮಗಳಲ್ಲಿನ ಪ್ರವಾಸೋದ್ಯಮ ತಾಣಗಳನ್ನು ಗ್ರೇಟರ್ ಮಡಿಕೇರಿ ಟೂರಿಸಂ ಕಾರಿಡಾರ್ ಮೂಲಕ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ರಂಜನ್ ತಿಳಿಸಿದರು.
ಆಗಲಿರುವ ಬದಲಾವಣೆಗಳು
ಗ್ರೇಟರ್ ಮಡಿಕೇರಿ ಟೂರಿಸಂ ಕಾರಿಡಾರ್ ಯೋಜನೆಯಿಂದ
ಪ್ರವಾಸಿ ತಾಣಗಳಲ್ಲಿ ಮತ್ತು ಸುತ್ತ - ಮುತ್ತಲಿನ ಪ್ರದೇಶಗಳಲ್ಲಿ ಹೋಂ ಸ್ಟೇ, ಹೊಟೇಲ್, ರೆಸ್ಟೋರೆಂಟ್, ಕ್ಯಾಂಟೀನ್ ಮೊದಲಾದವು ಪ್ರಾರಂಭವಾಗಿ, ಸ್ಥಳೀಯ ಜನತೆಗೆ ಸ್ವಯಂ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ
ಆಯಾ ಪಂಚಾಯ್ತಿಗಳ ಆದಾಯ ಹೆಚ್ಚಳವಾಗಲಿದೆ.
ಈ ಎಲ್ಲಾ ಪ್ರವಾಸಿ ತಾಣಗಳಲ್ಲಿ ಬಂಡವಾಳದ ಹರಿವು ಹೆಚ್ಚಾಗಿ ಸ್ಥಳೀಯವಾಗಿ ಎಲ್ಲಾ ವರ್ಗದ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ಸ್ಥಳೀಯ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಹೆಚ್ಚಿನ ಅನುಕೂಲತೆಗಳಾಗಲಿವೆ. ಗೂಡಂಗಡಿ, ತಳ್ಳುಗಾಡಿ ಮೊದಲಾದ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ.
ಪಾರ್ಕಿಂಗ್, ಶೌಚಾಲಯ, ಕುಡಿಯುವ ನೀರು, ಬಸ್ ನಿಲ್ದಾಣ ಮೊದಲಾದವುಗಳ ನಿರ್ಮಾಣದಿಂದ ಮೂಲಭೂತ ಸೌಕರ್ಯಗಳು ಹೆಚ್ಚಾಗಲಿವೆ ಹಾಗೂ ಈ ವ್ಯಾಪ್ತಿಯಲ್ಲಿ ಮೊಬೈಲ್ ಟವರ್ಗಳ ಸ್ಥಾಪನೆಯಿಂದ ಎಲ್ಲಾ ಗ್ರಾಮಗಳಿಗೂ ಅನುಕೂಲವಾಗಲಿದೆ. ಸ್ಥಳೀಯ ಭೂಮಿಯ ಮಾರುಕಟ್ಟೆ ಮೌಲ್ಯ ವೃದ್ಧಿಯಾಗಲಿದೆ. ಸ್ಥಳೀಯವಾಗಿ ಬೆಳೆಯಲ್ಪಡುವ ಕಾಫಿ, ಸಾಂಬಾರ್ ಪದಾರ್ಥಗಳು, ಜೇನು ಮೊದಲಾದವುಗಳಿಗೆ ಬೇಡಿಕೆ ಹೆಚ್ಚಾಗಿ ಬೆಳೆಗಾರರಿಗೆ, ರೈತರಿಗೆ ಅನುಕೂಲತೆ ಆಗಲಿದೆ ಎಂದು ರಂಜನ್ ಮಾಹಿತಿ ನೀಡಿದರು.
ಪ್ರಣಾಳಿಕೆಯಲ್ಲಿನ ಇತರ ಅಂಶಗಳು
ಅAತರ್ ಜಿಲ್ಲಾ ಪ್ರಯಾಣಿಕರ, ಪ್ರವಾಸಿಗರ ಅನುಕೂಲಕ್ಕಾಗಿ ಚನ್ನರಾಯಪಟ್ಟಣ - ಮಾಕುಟ್ಟ ಹೆದ್ದಾರಿ ರಸ್ತೆಯ ಅಭಿವೃದ್ಧಿ (ಕೊಡ್ಲಿಪೇಟೆ - ಶನಿವಾರಸಂತೆ -ಸೋಮವಾರಪೇಟೆ - ಮಡಿಕೇರಿ ಮಾರ್ಗ), ಕುಶಾಲನಗರದಿಂದ ಸೋಮವಾರಪೇಟೆಯ ಮೂಲಕ ಶಾಂತಳ್ಳಿ ಮಾರ್ಗವಾಗಿ ದಕ್ಷಿಣ ಭಾರತದ ಪವಿತ್ರ (ಮೊದಲ ಪುಟದಿಂದ) ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ, ಕುಶಾಲನಗರದಲ್ಲಿ ಮಿನಿ ಏರ್ ಪೋರ್ಟ್ ನಿರ್ಮಾಣ. ಸೋಮವಾರಪೇಟೆಯಲ್ಲಿ ಕೆ.ಎಸ್.ಆರ್.ಟಿ.ಸಿ ಡಿಪೋ ಹಾಗೂ ಕುಶಾಲನಗರ ಮತ್ತು ಶನಿವಾರಸಂತೆಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಸ್ಥಾಪನೆ.
ಶಾಂತಳ್ಳಿಯಲ್ಲಿ ‘ತೋಟಗಾರಿಕಾ ಸಂಶೋಧನಾ ಕೇಂದ್ರ' ಮತ್ತು ಶನಿವಾರ ಸಂತೆಯಲ್ಲಿ ‘ಹಸಿಮೆಣಸು ಮತ್ತು ಹೂವು ಸಂಸ್ಕರಣಾ ಘಟಕ' ಸ್ಥಾಪನೆಗೆ ಆದ್ಯತೆ, ಕೊಡ್ಲಿಪೇಟೆಯಲ್ಲಿ ಕುಕ್ಕುಟೋದ್ಯಮ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಕ್ರಮ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ, ಗೋವುಗಳ ಪಾಲನೆ ಮತ್ತು ಸಂರಕ್ಷಣೆಗಾಗಿ ‘ಗೋಶಾಲೆ'ಗಳ ನಿರ್ಮಾಣ, ಬಯಲು ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಗಾಗಿ ಕೆರೆಗಳ ಪುನರುಜ್ಜೀವನ ಹಾಗೂ ಮಳೆ ನೀರು ಸಂಗ್ರಹ ಯೋಜನೆಗಳಿಗೆ ಅನುದಾನ, ಸಿಎನ್ ಡಿ ಲ್ಯಾಂಡ್ ಮತ್ತು ಕೃಷಿ ಚಟುವಟಿಕೆ ನಡೆಸುತ್ತಿರುವ ಭೂಪ್ರದೇಶ ಸಕ್ರಮಗೊಳಿಸಲು ತ್ವರಿತ ಕ್ರಮ.
ನಗರ ಹಾಗೂ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಕಾನೂನು ಪದವಿ ಕಲಿಕೆಯ ಆಸಕ್ತಿಗೆ ಪೂರಕವಾಗಿ ಮಡಿಕೇರಿಯಲ್ಲಿ ಸರ್ಕಾರಿ ಕಾನೂನು ಪದವಿ ಕಾಲೇಜು ಪ್ರಾರಂಭಕ್ಕೆ ಆದ್ಯತೆ , ಕ್ಷೇತ್ರದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲೆಂದು ವಸತಿ ಸೌಕರ್ಯವಿರುವ ಬಿಎಸ್ ಮತ್ತು ಎಂಪಿಇಡಿ ಕಾಲೇಜುಗಳ ಸ್ಥಾಪನೆ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಆಯ್ದ ಪದವಿ ಕಾಲೇಜುಗಳಲ್ಲಿ ಜ್ಞಾನ ಕಾವೇರಿ ವಿಶ್ವವಿದ್ಯಾಲಯದಲ್ಲಿ ಬೇಡಿಕೆಯಲ್ಲಿರುವ ಹೊಸ ಕೋರ್ಸ್ಗಳ ಸೇರ್ಪಡೆಗೆ ಕ್ರಮ. ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ, ಕ್ಷೇತ್ರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ.
ಕ್ಷೇತ್ರದ ಕಾರ್ಮಿಕರ ಹಿತಕ್ಕಾಗಿ ಕೂಡಿಗೆಯಲ್ಲಿ ಇಎಸ್ಐ ಆಸ್ಪತ್ರೆ ಸ್ಥಾಪನೆ. ಆಡಳಿತ ಕುಶಾಲನಗರ ವ್ಯಾಪ್ತಿಯ ಆಡಳಿತ ವ್ಯವಸ್ಥೆಯನ್ನು ಸುಗಮ ಮತ್ತು ಕೇಂದ್ರೀಕೃತಗೊಳಿಸಲು ಸುಸಜ್ಜಿತ ಆಡಳಿತ ಭವನ ನಿರ್ಮಾಣಕ್ಕೆ ಕ್ರಮ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಪರಿವರ್ತನೆ, ಜಿಲ್ಲೆಯ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿ ಮಾಡಿ, ಕ್ಷೇತ್ರಾದ್ಯಂತ ಜನಪರ ಆಡಳಿತವನ್ನು ಚುರುಕುಗೊಳಿಸುವುದು, ಸುಂಟಿಕೊಪ್ಪದ ಮಾರುಕಟ್ಟೆಯ ಉನ್ನತೀಕರಣ. ದೇಶವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಮಲ್ಲಳ್ಳಿ ಜಲಪಾತದಲ್ಲಿ ಕೇಬಲ್ ಕಾರ್ ಸ್ಥಾಪನೆ ಮತ್ತು ಮುಳ್ಳೂರು ಜೈನ ಬಸದಿ ಅಭಿವೃದ್ಧಿ.
ಶನಿವಾರಸಂತೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಜನ್ಮಸ್ಥಳದಲ್ಲಿ, ಮಡಿಕೇರಿಯಲ್ಲಿನ ಜನರಲ್ ತಿಮ್ಮಯ್ಯ ಅವರ ಮ್ಯೂಸಿಯಂ ಮಾದರಿಯ ಮ್ಯೂಸಿಯಂ ಸ್ಥಾಪನೆ, ಕುಶಾಲನಗರದ ತಾವರೆಕೆರೆ ಮತ್ತು ಐತಿಹಾಸಿಕ ಹೊನ್ನಮ್ಮನ ಕೆರೆಯ ಸುಸ್ಥಿರ ಅಭಿವೃದ್ಧಿ ಹಾಗೂ ದೋಣಿ ವಿಹಾರ ವ್ಯವಸ್ಥೆ.
ಲೈನ್ಮನೆಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರೂ ಸೇರಿದಂತೆ ಎಲ್ಲಾ ವಸತಿರಹಿತರಿಗೆ ವಸತಿ ಸೌಲಭ್ಯ ವ್ಯವಸ್ಥೆ. ಕ್ಷೇತ್ರದ ಯುವ ಜನತೆಯ ಉದ್ಯೋಗ ಸಾಮರ್ಥ್ಯ ವೃದ್ಧಿಗಾಗಿ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆ, ಪ್ರತಿ ವರ್ಷ ಉದ್ಯೋಗ ಮೇಳ ಆಯೋಜನೆ.
ಹಂಪಿ ಮತ್ತು ಜೋಗ ಜಲಪಾತ ಉತ್ಸವದ ಮಾದರಿಯಲ್ಲೇ ಕೊಡಗಿನ ನೆಲ, ಜಲ, ಭಾಷಾ ವೈವಿಧ್ಯ, ಸಂಸ್ಕೃತಿಯ ಜೊತೆಗೆ ಸಾಂಪ್ರದಾಯಿಕ ಮತ್ತು ಜಾನಪದ ವೈಶಿಷ್ಟö್ಯಗಳ ‘ಕೊಡಗು ಉತ್ಸವ'ಕ್ಕೆ ಚಾಲನೆ. ಸೋಮವಾರಪೇಟೆ ತಾಲೂಕಿನಲ್ಲಿ ಕ್ರೀಡಾ ವಸತಿ ಶಾಲೆ, ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಮತ್ತು ಈಜು ಕೊಳ ಹಾಗೂ ಸ್ಕೇಟಿಂಗ್ ಅಂಗಳ ಸ್ಥಾಪನೆ ಮಾಡಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.
ಪ್ರಣಾಳಿಕೆ ಬಿಡುಗಡೆ ಸಂದರ್ಭ ಬಿಜೆಪಿ ಪ್ರಮುಖರಾದ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ.ಬಿ.ಸಿ.ನವೀನ್ ಕುಮಾರ್, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ವಕ್ತಾರ ಮಹೇಶ್ ಜೈನಿ, ಮನುಮಂಜುನಾಥ್ ಹಾಜರಿದ್ದರು.
ಕೊನೇ ಚುನಾವಣೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್, ಇದು ನನ್ನ ಕೊನೇ ಚುನಾವಣೆ ಎಂದರಲ್ಲದೇ ಮುಂದಿನ ಸಲ ಯುವಕರಿಗೆ ಸ್ಪರ್ಧಿಸಲು ಅವಕಾಶ ನೀಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಾಗುತ್ತದೆ ಎಂದರು. ಕಾಂಗ್ರೆಸ್ ತೊರೆದಿರುವ ಜೀವಿಜಯ ತನಗೆ ಬೆಂಬಲ ನೀಡುವ ವಿಶ್ವಾಸವಿದೆ. ಕಾಂಗ್ರೆಸ್ ಉಪಾಧ್ಯಕ್ಷ ಅನಂತ ಕುಮಾರ್ ಬಿಜೆಪಿಗೆ ತನ್ನ ಅಪಾರ ಬೆಂಬಲಿಗರೊAದಿಗೆ ಸೇರಲಿರುವುದು ಮತ್ತಷ್ಟು ಬಲ ನೀಡಲಿದೆ ಎಂದು ರಂಜನ್ ನುಡಿದರು. ದೇಶಭಕ್ತ ಸಂಘಟನೆಯಾದ ಭಜರಂಗದಳವನ್ನು ನಿಷೇಧಿಸುವುದಾಗಿ ಘೋಷಿಸುವ ಮೂಲಕ ಕಾಂಗ್ರೆಸ್ ತನ್ನ ಗುಂಡಿಯನ್ನು ತಾನೆ ತೋಡಿಕೊಂಡಿದೆ ಎಂದರು.
ಕಾAಗ್ರೆಸ್ ಮುಖಂಡರಾದ ಅನಂತ ಕುಮಾರ್ ಶನಿವಾರಸಂತೆಯಲ್ಲಿ ಶನಿವಾರ ಬಿಜೆಪಿ ಸೇರಲಿದ್ದು, ಸಚಿವ ಸಿ.ಟಿ. ರವಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಈ ಸಂದರ್ಭ ಪಾಲ್ಗೊಳ್ಳಲಿದ್ದಾರೆ. ಕೊಡ್ಲಿಪೇಟೆಯಿಂದ ಶನಿವಾರಸಂತೆಯವರೆಗೆ ಬೈಕ್ ಜಾಥಾ ಆಯೋಜಿತವಾಗಿದೆ ಎಂದು ರವಿಕಾಳಪ್ಪ ಮಾಹಿತಿ ನೀಡಿದರು.ಕಾರ್ಯಪ್ಪನವರ ಜನ್ಮಸ್ಥಳದಲ್ಲಿ, ಮಡಿಕೇರಿಯಲ್ಲಿನ ಜನರಲ್ ತಿಮ್ಮಯ್ಯ ಅವರ ಮ್ಯೂಸಿಯಂ ಮಾದರಿಯ ಮ್ಯೂಸಿಯಂ ಸ್ಥಾಪನೆ, ಕುಶಾಲನಗರದ ತಾವರೆಕೆರೆ ಮತ್ತು ಐತಿಹಾಸಿಕ ಹೊನ್ನಮ್ಮನ ಕೆರೆಯ ಸುಸ್ಥಿರ ಅಭಿವೃದ್ಧಿ ಹಾಗೂ ದೋಣಿ ವಿಹಾರ ವ್ಯವಸ್ಥೆ.
ಲೈನ್ಮನೆಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರೂ ಸೇರಿದಂತೆ ಎಲ್ಲಾ ವಸತಿರಹಿತರಿಗೆ ವಸತಿ ಸೌಲಭ್ಯ ವ್ಯವಸ್ಥೆ. ಕ್ಷೇತ್ರದ ಯುವ ಜನತೆಯ ಉದ್ಯೋಗ ಸಾಮರ್ಥ್ಯ ವೃದ್ಧಿಗಾಗಿ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆ, ಪ್ರತಿ ವರ್ಷ ಉದ್ಯೋಗ ಮೇಳ ಆಯೋಜನೆ.
ಹಂಪಿ ಮತ್ತು ಜೋಗ ಜಲಪಾತ ಉತ್ಸವದ ಮಾದರಿಯಲ್ಲೇ ಕೊಡಗಿನ ನೆಲ, ಜಲ, ಭಾಷಾ ವೈವಿಧ್ಯ, ಸಂಸ್ಕೃತಿಯ ಜೊತೆಗೆ ಸಾಂಪ್ರದಾಯಿಕ ಮತ್ತು ಜಾನಪದ ವೈಶಿಷ್ಟö್ಯಗಳ ‘ಕೊಡಗು ಉತ್ಸವ'ಕ್ಕೆ ಚಾಲನೆ. ಸೋಮವಾರಪೇಟೆ ತಾಲೂಕಿನಲ್ಲಿ ಕ್ರೀಡಾ ವಸತಿ ಶಾಲೆ, ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಮತ್ತು ಈಜು ಕೊಳ ಹಾಗೂ ಸ್ಕೇಟಿಂಗ್ ಅಂಗಳ ಸ್ಥಾಪನೆ ಮಾಡಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.
ಪ್ರಣಾಳಿಕೆ ಬಿಡುಗಡೆ ಸಂದರ್ಭ ಬಿಜೆಪಿ ಪ್ರಮುಖರಾದ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ.ಬಿ.ಸಿ.ನವೀನ್ ಕುಮಾರ್, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ವಕ್ತಾರ ಮಹೇಶ್ ಜೈನಿ, ಮನುಮಂಜುನಾಥ್ ಹಾಜರಿದ್ದರು.
ಕೊನೇ ಚುನಾವಣೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್, ಇದು ನನ್ನ ಕೊನೇ ಚುನಾವಣೆ ಎಂದರಲ್ಲದೇ ಮುಂದಿನ ಸಲ ಯುವಕರಿಗೆ ಸ್ಪರ್ಧಿಸಲು ಅವಕಾಶ ನೀಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಾಗುತ್ತದೆ ಎಂದರು. ಕಾಂಗ್ರೆಸ್ ತೊರೆದಿರುವ ಜೀವಿಜಯ ತನಗೆ ಬೆಂಬಲ ನೀಡುವ ವಿಶ್ವಾಸವಿದೆ. ಕಾಂಗ್ರೆಸ್ ಉಪಾಧ್ಯಕ್ಷ ಅನಂತ ಕುಮಾರ್ ಬಿಜೆಪಿಗೆ ತನ್ನ ಅಪಾರ ಬೆಂಬಲಿಗರೊAದಿಗೆ ಸೇರಲಿರುವುದು ಮತ್ತಷ್ಟು ಬಲ ನೀಡಲಿದೆ ಎಂದು ರಂಜನ್ ನುಡಿದರು. ದೇಶಭಕ್ತ ಸಂಘಟನೆಯಾದ ಭಜರಂಗದಳವನ್ನು ನಿಷೇಧಿಸುವುದಾಗಿ ಘೋಷಿಸುವ ಮೂಲಕ ಕಾಂಗ್ರೆಸ್ ತನ್ನ ಗುಂಡಿಯನ್ನು ತಾನೆ ತೋಡಿಕೊಂಡಿದೆ ಎಂದರು.
ಕಾAಗ್ರೆಸ್ ಮುಖಂಡರಾದ ಅನಂತ ಕುಮಾರ್ ಶನಿವಾರಸಂತೆಯಲ್ಲಿ ಶನಿವಾರ ಬಿಜೆಪಿ ಸೇರಲಿದ್ದು, ಸಚಿವ ಸಿ.ಟಿ. ರವಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಈ ಸಂದರ್ಭ ಪಾಲ್ಗೊಳ್ಳಲಿದ್ದಾರೆ. ಕೊಡ್ಲಿಪೇಟೆಯಿಂದ ಶನಿವಾರಸಂತೆಯವರೆಗೆ ಬೈಕ್ ಜಾಥಾ ಆಯೋಜಿತವಾಗಿದೆ ಎಂದು ರವಿಕಾಳಪ್ಪ ಮಾಹಿತಿ ನೀಡಿದರು.