ಚೆಯ್ಯಂಡಾಣೆ, ಮೇ ೫ : ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ೬ನೇ ವರ್ಷದ ಫುಟ್ಬಾಲ್ ಪಂದ್ಯಾಟ ಮರಗೋಡು ಪ್ರಾಥಮಿಕ ಶಾಲಾ ಮೈದಾನದಲ್ಲಿ ಆರಂಭವಾಗಿದೆ. ಇಂದಿನ ಪಂದ್ಯಾಟದಲ್ಲಿ ಬೊಳ್ತಜಿರ ತಂಡವನ್ನು ಪೆನಾಲ್ಟಿ ಶೂಟ್ಔಟ್ನಲ್ಲಿ ಬಿಳಿಯಂಡ್ರ ತಂಡ ಸೋಲಿಸಿತು.
ಚೆಟ್ಟಿಮಾಡ ತಂಡ ಮಂಞAಡ್ರ ತಂಡವನ್ನು, ಕೊಳಂಬೆ ತಂಡ ನಂಗಾರು ತಂಡವನ್ನು, ಪೊಕ್ಕುಳಂಡ್ರ ತಂಡ ಪಾಣತ್ತಲೆ ಕಪ್ನ ಚಾಂಪಿಯನ್ ಬೊಳ್ಳುರು ತಂಡವನ್ನು, ಬೆಳಿಯಂಡ್ರ ತಂಡ ಉಳುವಾರನ ತಂಡವನ್ನು, ಕೊಳಂಬೆ ತಂಡ ಕೋಳಿಮಾಡು ತಂಡವನ್ನು ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಪಂದ್ಯಾಟದಲ್ಲಿ ಬಿಳಿಯಂಡ್ರ, ಚೆಟ್ಟಿಮಾಡ, ಕೊಳಂಬೆ ಕುಟುಂಬ ತಂಡಗಳು ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿತು.