ನಾಪೋಕ್ಲು, ಮೇ ೫: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕ್ರಿಕೆಟ್ ಟೂರ್ನಿಯ ಶುಕ್ರವಾರದ ಪಂದ್ಯಗಳಲ್ಲಿ ೧೨ ತಂಡಗಳು ಮುನ್ನಡೆ ಸಾಧಿಸಿದವು.

ಮೇವಡ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅರಮಣಮಾಡ ತಂಡವು ಒಂದು ವಿಕೆಟ್ ನಷ್ಟಕ್ಕೆ ೬೩ ರನ್‌ಗಳಿಸಿ ಗೆಲುವು ಸಾಧಿಸಿತು. ಮೇವಡ ತಂಡ ಆರು ವಿಕೆಟ್ ನಷ್ಟಕ್ಕೆ ೬೧ ರನ್‌ಗಳಿಸಿತು. ಮುಂದಿನ ಪಂದ್ಯದಲ್ಲಿ ಬೊಟ್ಟಂಗಡ ಕುಲ್ಲಚಂಡ ವಿರುದ್ಧ ಗೆಲುವು ಸಾಧಿಸಿತು. ಬೊಟ್ಟಂಗಡ ೬೫ ರನ್‌ಗಳಿಸಿತು. ಕುಲ್ಲಚಂಡ ಎಂಟು ವಿಕೆಟ್ ನಷ್ಟಕ್ಕೆ ೩೭ ರನ್‌ಗಳಿಸಿತು. ಬೊಳ್ಳಚೆಟ್ಟಿರ ವಿರುದ್ಧ ಚಟ್ಟಂಗಡ ಗೆಲುವು ಸಾಧಿಸಿತು. ಮುಕ್ಕಾಟಿರ (ಬೇತ್ರಿ) ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ ೫೫ ರನ್‌ಗಳಿಸಿತು. ಅಪ್ಪುಡ ತಂಡವು ಆರು ವಿಕೆಟ್ ನಷ್ಟಕ್ಕೆ ೩೭ ರನ್ ಗಳಿಸಿತು. ಅಪ್ಪುಮಣಿಯಂಡ ಪಾಸುರ ತಂಡದ ವಿರುದ್ಧ ಸೋತಿತು. ಅಪ್ಪುಮಣಿಯಂಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೪೪ ರನ್ ಗಳಿಸಿದರೆ, ಪಾಸುರ ಯಾವುದೇ ವಿಕೆಟ್ ನಷ್ಟವಿಲ್ಲದೆ ೪೫ ರನ್ ಗಳಿಸಿತು. ಅಚ್ಚಪಂಡ ತಂಡ ಕೊಂಗAಡ ತಂಡದ ವಿರುದ್ಧ ಗೆಲುವು ಸಾಧಿಸಿತು. ಅಚ್ಚಪಂಡ ತಂಡ ಐದು ವಿಕೆಟ್ ನಷ್ಟಕ್ಕೆ ೩೪ ರನ್ ಗಳಿಸಿದರೆ ಕಾಂಡAಡ ತಂಡ ೮ ವಿಕೆಟ್ ನಷ್ಟಕ್ಕೆ ೩೩ ರನ್‌ಗಳಿಸಿ ಸೋತಿತು.

ಪಾಸುರ ಚಿಂಡಮಾಡ ತಂಡದ ವಿರುದ್ಧ, ಕಾಣತ್ತಂಡ ಅಯಮಾಡ ವಿರುದ್ಧ, ಅರಮಣಮಾಡ ಕಾಳಮಂಡ ವಿರುದ್ಧ, ಮಂಡಿರ ಕಾಂಡAಡ ವಿರುದ್ಧ, ಮಂದನೆರವAಡ ಕೆಲೇಟಿರ ವಿರುದ್ಧ ಗೆಲುವು ಸಾಧಿಸಿ ಮುಂದಿನ ಹಂತ ಪ್ರವೇಶಿಸಿದವು.