ವರದಿ : ಚಂದ್ರಮೋಹನ್

ಕುಶಾಲನಗರ, ಮೇ ೫ : ಕೊಡಗು ಜಿಲ್ಲೆಯ ಕುಶಾಲನಗರ ಸಮೀಪ ಅಳುವಾರದಲ್ಲಿ ನಿರ್ಮಾಣ ಗೊಂಡಿರುವ ಕೊಡಗು ವಿಶ್ವವಿದ್ಯಾಲಯ ಕಳೆದ ಕೆಲವು ಸಮಯದಿಂದ ಅನುದಾನದ ಕೊರತೆ ಎದುರಿಸುತ್ತಿದ್ದು, ಸಂಕಷ್ಟದ ಸುಳಿಗೆ ಸಿಲುಕಿರುವ ಬಗ್ಗೆ ಮಾಹಿತಿಗಳು ಹೊರ ಬಿದ್ದಿವೆ.

ಕಳೆದ ಕೆಲವು ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ ಸ್ವತಂತ್ರ ವಿಶ್ವವಿದ್ಯಾಲಯ ವಾಗಿದ್ದು ಇದೀಗ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದು ವಿದ್ಯಾರ್ಥಿಗಳಿಗೆ ಕನಿಷ್ಟ ಸೌಲಭ್ಯ ಒದಗಿಸುವಲ್ಲಿ ಉನ್ನತ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ನಾಲ್ಕು ತಿಂಗಳಿAದ ಯಾವುದೇ ಅನುದಾನ ಒದಗಿಸುತ್ತಿಲ್ಲ. ಇನ್ನೊಂದೆಡೆ ನೂತನ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಕೂಡ ನೀಡದಿರುವುದೇ ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ. ಎರಡು ವಾರಗಳಿಂದ ತರಗತಿಗಳು ಆರಂಭವಾಗಿದ್ದು, ಕೇಂದ್ರದ ೧೫ ವಿಭಾಗಗಳ ಅಂದಾಜು ೪೫೦ಕ್ಕೂ ಅಧಿಕ ವಿದ್ಯಾರ್ಥಿಗಳು ನೂರಕ್ಕೂ ಅಧಿಕ ಬೋಧಕ ಬೋಧಕೇತರ ಸಿಬ್ಬಂದಿಗಳು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ.

ಸೋಮವಾರಪೇಟೆ ಕಡೆಯಿಂದ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ಬಸ್ಸಿನ ಕೊರತೆ ನಡುವೆ ತರಗತಿಗಳಿಗೆ ಹಾಜರಾಗಬೇಕಾದ ದುಸ್ಥಿತಿ ಒದಗಿದೆ. ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಖಾಸಗಿ ಬಸ್ಸುಗಳನ್ನು ಅವಲಂಬಿಸಬೇಕಾಗಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎನ್ನುವ ಅಳಲು ವಿದ್ಯಾರ್ಥಿಗಳದ್ದು. ಕೇಂದ್ರದ ವಾಹನಗಳಿಗೆ ಡೀಸೆಲ್ ಪೂರೈಕೆ ಮಾಡಲು ಕೂಡ ಹಣದ ಕೊರತೆ ಉಂಟಾಗಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿಗಳು ಲಭ್ಯವಾಗಿದೆ.

ಈ ನಡುವೆ ಬೋಧಕ ಬೋಧಕೇತರ ಸಿಬ್ಬಂದಿಗಳಿಗೆ ವೇತನವು ಕೂಡ ವಿಳಂಬವಾಗುತ್ತಿದೆ. ಅತಿಥಿ ಉಪನ್ಯಾಸಕರುಗಳಿಗೆ ವೇತನವನ್ನು ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ವಿದ್ಯಾರ್ಥಿಗಳಿಂದ ಸಂಗ್ರಹವಾಗುವ ಫೀಸ್ ಮತ್ತಿತರ ಆಂತರಿಕ ಅನುದಾನದಿಂದ ಕೇಂದ್ರದ ಕನಿಷ್ಟ ವ್ಯವಸ್ಥೆ ನಡೆಯುತ್ತಿದೆ. ವಿಶ್ವವಿದ್ಯಾಲಯದಲ್ಲಿ ನಡೆಯಬೇಕಾದ ಅವಶ್ಯಕ ಕಾರ್ಯಾಗಾರಗಳು ಕೂಡ ಸ್ಥಗಿತಗೊಂಡಿವೆ.

ನೂತನವಾಗಿ ನೇಮಕಗೊಂಡಿರುವ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಓಡಾಟಕ್ಕೆ ವಾಹನ ಸೌಕರ್ಯ ಕಲ್ಪಿಸಿಲ್ಲ. ಉನ್ನತ ಹುದ್ದೆಯ ಗಣ್ಯರಿಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಕೇಂದ್ರದಲ್ಲಿ ಇಲ್ಲದಿರುವುದು ನಿಜಕ್ಕೂ ಉನ್ನತ ಶಿಕ್ಷಣ ಕೇಂದ್ರದ ಸ್ಥಿತಿ ಶೋಚನೀಯ.

ಚುನಾವಣೆ ನಡುವೆ ಅನುದಾನದ ಕೊರತೆಯಿಂದ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಿಗೂ ವ್ಯಾಸಂಗಕ್ಕೆ ಕುತ್ತು ಉಂಟಾಗಿದೆ ಎನ್ನುವುದು ತಿಳಿದು ಬಂದಿದೆ. ಜಿಲ್ಲೆ ಹಾಗೂ ನೆರೆ ಜಿಲ್ಲೆ, ಗಡಿಭಾಗಗಳಿಂದ ಬರುವ ವಿದ್ಯಾರ್ಥಿ ಗಳಿಗೆ ಸಮರ್ಪಕ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಕೂಡ ತರಗತಿಗೆ ಹಾಜರಾಗಲು ಅನಾನುಕೂಲಕ್ಕೆ ಒಳಗಾಗಿದ್ದಾರೆ. ಕೇಂದ್ರದಿAದ ಸೋಮವಾರಪೇಟೆಗೆ ತೆರಳುತ್ತಿದ್ದ ವಾಹನವು ದೈನಂದಿನ ನಿರ್ವಹಣೆ ಕೊರತೆ ಎದುರಿಸುತ್ತಿದೆ. ಸಂಬAಧಿಸಿದ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಿಸಿ ನೂತನವಾಗಿ ಘೋಷಣೆ ಯಾಗಿರುವ ಕೊಡಗು ವಿಶ್ವವಿದ್ಯಾಲ ಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕಾಗಿದೆ ಎಂದು ನಾಗರಿಕರು ಅಭಿಪ್ರಾಯ ಪಟ್ಟಿದ್ದಾರೆ.