ವಿಶ್ವದ ಬಹುತೇಕ ರಾಷ್ಟçಗಳು ಮತ್ತು ಸಂಘ-ಸAಸ್ಥೆ ಪ್ರತಿ ವರ್ಷ ತಪ್ಪದೆ ಆಚರಿಸುವ ದಿನವೇ ಕಾರ್ಮಿಕರ ದಿನಾಚರಣೆ. ಪ್ರತಿಯೊಂದು ದೇಶದಲ್ಲಿನ ಏಳಿಗೆಗೆ ಆ ದೇಶದ ಕಾರ್ಮಿಕರೇ ಕಾರಣವಾಗಿರುತ್ತಾರೆ. ಹಣ ಮತ್ತು ಇನ್ಯಾವುದೆ ವಸ್ತುವಿನ ಬದಲು ಕೆಲಸವನ್ನು ಮಾಡುವುದೇ ಕಾರ್ಮಿಕತನವಾಗಿರುತ್ತದೆ. ಪ್ರತಿ ದೇಶದಲ್ಲಿಯೂ ಶೇ. ಅರವತ್ತರಿಂದ ಎಪ್ಪತ್ತರಷ್ಟು ಕಾರ್ಮಿಕರೇ ಇರುತ್ತಾರೆ. ಕಾರ್ಮಿಕರಿಲ್ಲದೆ ಒಂದು ಸಮೃದ್ಧ ದೇಶವನ್ನು ನಿರ್ಮಿಸುವುದು ಅಸಾಧ್ಯವಾಗಿದೆ.
ಹದಿನೆಂಟು ಮತ್ತು ಹತ್ತೊಂಭತ್ತನೆ ಶತಮಾನದಲ್ಲಿ ಎರಡು ವರ್ಗಗಳು ಸೃಷ್ಟಿಯಾಗುತ್ತದೆ. ಒಂದು ದುಡಿಯುವವರು, ಇನ್ನೊಂದು ಆಳುವವರು. ದುಡಿಯುವವರು ಕಾರ್ಮಿಕರು, ಕಾರ್ಮಿಕರಿಗೆ ದಿನದಲ್ಲಿ ೧೨ ರಿಂದ ೧೫ ಗಂಟೆಗಳ ಕಾಲ ಕೆಲಸವಿರುತಿತ್ತು. ೧೮೯೬ರ ಮೇ ೧ ಚಿಕಾಗೋ ಇದರ ವಿರುದ್ಧ ಪ್ರತಿಭಟನೆ ಮಾಡಲಾಗುತ್ತದೆ.
ಆ ಪ್ರತಿಭಟನೆಯಲ್ಲಿ ಹಲವಾರು ಕಾರ್ಮಿಕರು ಪಾಲ್ಗೊಂಡಿರುತ್ತಾರೆ. ಅದಕ್ಕಾಗಿ ಮೇ ೧ ಕಾರ್ಮಿಕ ದಿನವೆಂದು ಆಚರಿಸಲಾಗುತ್ತದೆ. ಅಂದಿನಿAದ ಕಾರ್ಮಿಕರಿಗೆ ದಿನದಲ್ಲಿ ಕೇವಲ ಎಂಟು ಗಂಟೆಗಳ ಕಾಲ ಕೆಲಸ ಎಂದು ಘೋಷಿಸಿದರು. ಕಾರ್ಮಿಕರಿಗೆ ನಮ್ಮ ದೇಶದಲ್ಲಿ ಹಲವು ಸೌಕರ್ಯ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತದೆ.
ಕಾರ್ಮಿಕರು ಒಂದು ದೇಶದ ನಿಜವಾದ ಆರ್ಥಿಕತೆಯ ಪ್ರತೀಕವಾಗಿರುತ್ತಾರೆ ಹಾಗೂ ಒಂದು ದೇಶದ ಏಳಿಗೆಗೆ ಅವರ ಪಾತ್ರ ಅವಿಸ್ಮರಣೀಯವಾಗಿದ್ದು ನಾವು ಕಾರ್ಮಿಕರನ್ನು ಸದಾ ಗೌರವಿಸೋಣ.
-ಯೋಗೇಶ ಎಸ್.ಎಸ್., ಆಲೂರು ಸಿದ್ದಾಪುರ.ಕಾರ್ಮಿಕ ವರ್ಗದ ಸಾಧನೆಗಳನ್ನು ಆಚರಿಸಲು ಪ್ರತಿವರ್ಷ ಮೇ ೧ ರಂದು ಕಾರ್ಮಿಕರ ದಿನ ಅಥವಾ ಅಂತರರಾಷ್ಟಿçÃಯ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ಮೇ ದಿನ ಎಂದೂ ಕರೆಯಲ್ಪಡುವ ದಿನವನ್ನು ಅನೇಕ ದೇಶಗಳಲ್ಲಿ ಸಾರ್ವಜನಿಕ ರಜಾದಿನವಾಗಿಯೂ ಘೋಷಿಸಲಾಗಿದೆ. ಭಾರತದಲ್ಲಿ ೧೮೨೩ರಂದು ಇದನ್ನು ಮೊದಲಿಗೆ ಆಚರಿಸಲಾಗಿತ್ತು. ಕಾರ್ಮಿಕ ವರ್ಗಕ್ಕೆ ಮೀಸಲಾದ ವಿಶೇಷ ದಿನ.
ಕಾರ್ಮಿಕರ ದಿನಾಚರಣೆಯ ಮಹತ್ವ: ಮೇ ಒಂದು ಸಮಾಜಕ್ಕೆ ಕೊಡುಗೆ ಮತ್ತು ತ್ಯಾಗವನ್ನು ತಿಳಿಸಿಕೊಡುವ ದಿನವಾಗಿದೆ. ಹಾಗೆಯೇ ಕಾರ್ಮಿಕರ ಕಾನೂನುಗಳು ಕಾರ್ಮಿಕರ ಹಕ್ಕುಗಳ ಉಲ್ಲಂಘನೆ ಕೆಲಸದ ಅವಧಿ ಮೊದಲಾದವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಸಲಾಗುತ್ತದೆ. ನಮ್ಮ ದೇಶಕ್ಕೆ ರೈತ ಆಹಾರ ಧಾನ್ಯಗಳನ್ನು ಉತ್ಪಾದಿಸುವ ಮೂಲಕ ಎಲ್ಲ ವರ್ಗದವರಿಗೂ ಸೇವೆ ಸಲ್ಲಿಸುತ್ತಿದ್ದಾನೆ. ಗಡಿಯಲ್ಲಿ ನಮ್ಮ ಸೈನಿಕರಿಗೆ ಆಹಾರ ಧಾನ್ಯ ಕೊಡುವವನು ರೈತ. ಹೀಗೆ ರೈತ ದೇಶಕ್ಕೆ ಬೆನ್ನೆಲುಬಾಗಿದ್ದಾನೆ. ಅವರ ಕೊಡುಗೆ ಆಪಾರ. ಕಾರ್ಮಿಕರು ಅವರ ಜೀವನವನ್ನು ಲೆಕ್ಕಿಸದೆ ದೇಶದ ಸ್ವಚ್ಚತೆ ಸೇರಿದಂತೆ ಜನರ ಆರೋಗ್ಯಕ್ಕಾಗಿ ಪರಿಶ್ರಮವನ್ನು ಪಡುತ್ತಿದ್ದಾರೆ. ಒಂದು ಹಳ್ಳು ಅಥವಾ ನಗರವನ್ನು ಸ್ವಚ್ಚಗೊಳಿಸಬೇಕು ಎಂಬುದು ಬಹಳ ಮುಖ್ಯವಾಗಿದೆ. ನಮ್ಮ ದೇಶ ಆರ್ಥಿಕವಾಗಿ ಮುಂದೆ ಬರಲು ಕೈಗಾರಿಕೆಗಳ ಪಾತ್ರ ಅಪಾರ. ಕಾರ್ಖಾನೆ ನಿರ್ಮಾಣಾ ಮಾಡಲು ಕಾರ್ಮಿಕರಿಂದಲೇ ಸಾಧ್ಯವಾಗುವುದು. ಒಂದು ಕಟ್ಟಡ ನಿರ್ಮಾಣ ಮಾಡಬೇಕು ಎಂದರೆ ಅದಕ್ಕೂ ಕಾರ್ಮಿಕರ ಶ್ರಮ ಅವಶ್ಯಕ. ಕಟ್ಟಡ ನಿರ್ಮಾಣ ಮಾಡುವುದರಿಂದ ಉದ್ಯೋಗ ಸೃಷ್ಟಿಯಾಗಿ ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ಈ ಮೂಲಕವೂ ಕಾರ್ಮಿಕರು ದೇಶದ ಅಥವಾ ಸಮಾಜದ ಅಭಿವೃದ್ಧಿಗೆ ಕಾರಣರಾಗುತ್ತಾರೆ.
ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ. ದಕ್ಷತೆಯಿಂದ ಕೂಡಿದ ಕಾರ್ಮಿಕರ ವರ್ಗದಿಂದ ಮಾತ್ರ ಆ ದೇಶ ಆರ್ಥಿಕ ಪ್ರಗತಿಯನ್ನು ಕಾರ್ಮಿಕ ಒಕ್ಕೂಟಗಳಲ್ಲಿ ಐಕ್ಯತೆಯನ್ನು ಕಾಪಾಡಿಕೊಂಡು ಹೋರಾಟ ಮಾಡಲು ಸದಾ ಶ್ರಮಿಸುತ್ತಿರಬೇಕು. ಸಂಘಟಿತರೊAದಿಗೆ ಅಸಂಘಟಿತ ಕಾರ್ಮಿಕರು ಸೇರಿ ಐಕ್ಯತೆಯಿಂದ ಒಕ್ಕೂಟ ರಚಿಸಿ ಆ ಮೂಲಕ ತಮ್ಮ ಬದುಕನ್ನು ಹಸನಾಗಿ ಮಾಡಿಕೊಳ್ಳು ವಂತಾಗಲಿ. -ಕ್ಷಿತಿ ರಮೇಶ್, ಕುಶಾಲನಗರ
ಕಾಯಕವೇ ಕೈಲಾಸ
ನಮ್ಮ ದೇಶದ ಸಮಾಜದ ಪ್ರಮುಖ ಆಸ್ತಿ ಕಾರ್ಮಿಕರೆಂದರೆ ತಪ್ಪಗಲಾರದು. ಕಾರ್ಮಿಕರಿಲ್ಲದೆ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಪ್ರತಿಯೊಂದು ಕ್ಷೇತ್ರಗಳಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಅವರ ಕಠಿಣ ಪರಿಶ್ರಮದ ಫಲವಾಗಿ ನಮ್ಮ ಸಮಾಜ ಹೀಗೆ ನಿಂತಿದೆ. ದೇಶದ ಅಥವಾ ನಮ್ಮ ಸಮಾಜದ ಆರ್ಥಿP ಅಭಿವೃದ್ಧಿಯು ಕಾರ್ಮಿಕರ ಮೇಲೆ ಅವಲಂಬಿತವಾಗಿದೆ. ಕಾರ್ಮಿಕರಿಲ್ಲವೆಂದರೆ ದೇಶದ ಏಳಿಗೆಯ ಕಷ್ಟ ಸಾಧ್ಯವಾಗುತ್ತದೆ. ಕಾರ್ಮಿಕರು ತಮ್ಮ ಕೆಲಸದ ಒತ್ತಡ ಎಷ್ಟೇ ಇರಲಿ ಅದನ್ನು ಸಹಿಸಿಕೊಂಡು ನಗುಮುಖದಿಂದ ಕೆಲಸ ಕಾರ್ಯಗಳನ್ನು ಮುಗಿಸುವವರೆ ಹೆಚ್ಚು. ಆ ನಗುಮುಖದ ಹಿಂದೆ ಕಷ್ಟಕಾರ್ಪಣ್ಯಗಳ ಸುರಿಮಳೆಯೇ ಇರುತ್ತದೆ. ಅದನ್ನು ಮರೆತು (ನುಂಗಿ) ತಮ್ಮ ಕಾಯಕವನ್ನು ಶೃದ್ಧಾಭಕ್ತಿಯಿಂದ ಮಾಡುವರು. ಮೇ ೧ ರಂದು ದೇಶ-ವಿದೇಶಗಳಲ್ಲಿ ಕಾರ್ಮಿಕರ ದಿನವನ್ನು ಆಚರಿಸುತ್ತಾರೆ. ಈ ದಿನ ಕಾರ್ಮಿಕರ ಮೆರವಣಿಗೆ, ಪ್ರದರ್ಶನ ಸಭೆ ಮುಂತಾದವುಗಳು ನಡೆಯುತ್ತದೆ. ಈ ದಿನವನ್ನು ಸರ್ಕಾರವು ಸಾರ್ವಜನಿಕ ರಜಾ ದಿನವೆಂದು ಘೋಷಣೆ ಮಾಡಿದೆ. ಸರ್ಕಾರವು ಕಾರ್ಮಿಕರಿಗೆ ಹಾಗೂ ಅವರ ಮಕ್ಕಳಿಗೋಸ್ಕರ ಹಲವು ಸೌಕರ್ಯಗಳನ್ನು ಒದಗಿಸಿಕೊಡಲಿದೆ. ಮೊದಲು ಕ್ರಿ. ಶ. ೧೮೦೦ರ ಸಮಯದಲ್ಲಿ ಅಮೇರಿಕಾ ದಲ್ಲಿ ಕೈಗಾರಿಕಾಕ್ರಾಂತಿ ಆರಂಭವಾಯಿತು. ಬಂಡವಾಳ ಶಾಹಿಗಳು ಅನಿರ್ದಿಷ್ಟ ಅವಧಿಯ ತನಕ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರು. ಇದನ್ನು ವಿರೋಧಿಸಿ ಕಾರ್ಮಿಕರು ತಮ್ಮ ಕೆಲಸದ ಅವಧಿಯನ್ನು ೮ ಗಂಟೆಗಳ ಕಾಲ ಮಾಡುವಂತೆ ಬೇಡಿಕೆ ಇಟ್ಟು ಹೋರಾಟ ಮಾಡಿದರು. ಇದರ ಪರಿಣಾಮ ಪೊಲೀಸರ ಗುಂಡೇಟಿಗೆ ಸಿಲುಕಿ ಕೆಲವರು ಮಡಿದರು. ಈ ಹೋರಾಟದ ನೆನಪಿಗಾಗಿ ಮೇ ೧ರಂದು ಕಾರ್ಮಿಕರ ದಿನಚರಣೆಯನ್ನು ಅಂತರರಾಷ್ಟಿçÃಯ ಮಟ್ಟದಲ್ಲಿ ಆಚರಿಸಲಾಗುತ್ತಿದೆ.
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮೆ ೧ ರಂದು (೧೯೨೩) ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ ಎಂಬ ಪಾರ್ಟಿ ಸ್ಥಾಪನೆಗೊಂಡು ಚೆನೈನಲ್ಲಿ ಕೆಂಪು ಬಾವುಟ ಹಾರಿಸುವ ಮೂಲಕ ಕಾರ್ಮಿಕರ ದಿನವನ್ನು ಆಚರಿಸಲಾಯಿತು.
ಒಟ್ಟಿನಲ್ಲಿ ಹೇಳುವುದಾದರೆ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಪ್ರತಿಯೊಬ್ಬ ಕಾರ್ಮಿಕರ ಶ್ರಮ ಅತ್ಯಗತ್ಯ. ಅವರು ತಮ್ಮ ದೈಹಿಕ, ಮಾನಸಿಕ, ಭೌತಿಕ ಶ್ರಮವನ್ನು ಉಪಯೋಗಿಸಿಕೊಂಡು ದುಡಿದು ಸಮಾಜವನ್ನು ಅಭಿವೃದ್ಧಿ ಪಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಕಠಿಣ ಪರಿಶ್ರಮದ ಫಲವೇ ನಮ್ಮ ಸಮಾಜದ ಅಭಿವೃದ್ಧಿ.
-ಶಾಲಿನಿ ದೇವಂಗೋಡಿ, ಕುಶಾಲನಗರ.