ಮಡಿಕೇರಿ ವಿಧಾನಸಭಾ ಕ್ಷೇತ್ರ

ಅಭ್ಯರ್ಥಿ ಹೆಸರು: ಹರೀಶ್.ಜಿ.ಆಚಾರ್ಯ

ವಿದ್ಯಾರ್ಹತೆ: ಟಿವಿ ಇಂಜಿನಿಯರಿAಗ್

ವೃತ್ತಿ: ಸಮಾಜ ಸೇವೆ

ಗೌಳಿಬೀದಿ, ಮಡಿಕೇರಿ

ಮಡಿಕೇರಿಯ ಗೌಳಿಬೀದಿಯಲ್ಲಿ ನೆಲೆಸಿರುವ ಹರೀಶ್ ಜಿ.ಆಚಾರ್ಯ ಟಿವಿ ಇಂಜಿನಿಯರ್ ಪದವೀಧರ. ಬಾಲ್ಯದಿಂದಲೇ ಜನಸಂಘದ ಅಟಲ್ ಬಿಹಾರಿ ವಾಜಪೇಯಿ ಅವರ ಭಕ್ತನಾಗಿದ್ದು, ಆರ್‌ಎಸ್‌ಎಸ್‌ಗೆ ಸೇರಿಕೊಂಡು ಕೆಲವು ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿದ್ದರು. ನಂತರ ಬೆಂಗಳೂರಿನಲ್ಲಿ ಟಿವಿ ಇಂಜಿನಿಯರಿAಗ್ ಮುಗಿಸಿ ಚಲನಚಿತ್ರರಂಗದಲ್ಲಿ ಕಾರ್ಮಿಕನಾಗಿ ದುಡಿದು, ನಿರ್ಮಾಪಕ, ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆ ಬಳಿಕ ಶಿವಸೇನೆ, ಮತ್ತು ಹಿಂದೂ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ, ವಿಶ್ವಕರ್ಮ ಸಮುದಾಯ ಜಾಗೃತಾ ಸೇವಾ ಟ್ರಸ್ಟ್ನ ರಾಜ್ಯಾಧ್ಯಕ್ಷರಾಗಿ, ಪೀಪಲ್ಸ್ ಮೂವ್‌ಮೆಂಟ್ ಫಾರ್ ಹ್ಯೂಮನ್ ರೈಟ್ಸ್ನ ಜಿಲ್ಲಾಧ್ಯಕ್ಷರಾಗಿ, ವೀರನಾಡು ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾಗಿ ಹಾಗೂ ಶ್ರೀ ಕೃಷ್ಣ ಗೋಶಾಲೆಯ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಣ ಬಲ ಇಲ್ಲದೇ ಇರುವ ಅರ್ಹರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ, ಸಮಾಜದಲ್ಲಿ ಬದಲಾವಣೆಯನ್ನು ತರಬೇಕು, ಭ್ರಷ್ಟಾಚಾರ ತಡೆಯಬೇಕು, ಜನ ಸಾಮಾನ್ಯರಿಗೆ ಮೂಲಭೂತ ಸೌಲಭ್ಯಗಳು ದೊರಕಬೇಕೆಂಬದು ಇವರ ಉದ್ದೇಶವಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಈ ಬಾರಿ ಸ್ಪರ್ಧಿಸುತ್ತಿದ್ದಾರೆ. ಅಭ್ಯರ್ಥಿ ಹೆಸರು: ಸಜೀರ್ ಮಜೀದ್ ನೆಲಾಟ್

ವಿದ್ಯಾರ್ಹತೆ: ೧೦ನೇ ತರಗತಿ

ವೃತ್ತಿ: ಮೊಬೈಲ್ ಸರ್ವೀಸ್

ಇಬ್ನಿವಳವಾಡಿ ಗ್ರಾಮ.

ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಬ್ನಿವಳವಾಡಿ ಗ್ರಾಮ ನಿವಾಸಿಯಾಗಿರುವ ಸಜೀರ್ ೧೦ನೇ ತರಗತಿ ವ್ಯಾಸಂಗ ಮಾಡಿದ್ದು, ಭ್ರಷ್ಟಾಚಾರ ನಿಯಂತ್ರಣ ತಂಡದ ಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿದ್ದಾರೆ. ಕಳೆದ ನಗರಸಬಾ ಚುನಾವಣೆ ಬಳಿಕ ಕರ್ನಾಟಕ ರಾಷ್ಟಿçÃಯ ಸಮಿತಿ(ಕೆಆರ್‌ಎಸ್) ಪಕ್ಷದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭ್ರಷ್ಟಾಚಾರ, ಸಮಾಜದಲ್ಲಾಗುತ್ತಿರುವ ಅನ್ಯಾಯಗಳನ್ನು ಸರಿಪಡಿಸುವದು, ಚುನಾವಣೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವದು, ಸರಕಾರದ ಸೌಲಭ್ಯಗಳನ್ನು ಜನರಿಗೆ ತಲಪಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಕೆಆರ್‌ಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವದಕ್ಕಿಂತಲೂ ಜನರಲ್ಲಿ ಅರಿವು ಮೂಡಿಸುವದು ಇವರ ಉದ್ದೇಶವಾಗಿದೆ.

ಅಭ್ಯರ್ಥಿ ಹೆಸರು: ಖಲೀಲ್ ಎಂ.

ವಿದ್ಯಾರ್ಹತೆ: ೭ನೇ ತರಗತಿ

ವೃತ್ತಿ: ಟೈಲರ್

ಸಂಪಿಗೆಕಟ್ಟೆ, ಮಡಿಕೇರಿ

ಮಡಿಕೇರಿಯ ಸಂಪಿಗೆಕಟ್ಟೆ ನಿವಾಸಿಯಾಗಿರುವ ಖಲೀಲ್ ಏಳನೇ ತರಗತಿವರೆಗೆ ವ್ಯಾಸಂಗ ಮಾಡಿದ್ದು, ಮೂಲತಃ ದರ್ಜಿ(ಟೈಲರ್) ವೃತ್ತಿಗಾರಿಕೆಯವರಾಗಿದ್ದಾರೆ. ಸಮಾಜ-ಜನಸೇವೆಯ ತುಡಿತ ಇರುವ ಇವರು ಸ್ಪರ್ಧೆ ಮಾಡದ ಕ್ಷೇತ್ರಗಳಿಲ್ಲ. ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್, ಪುರಸಭೆ, ನಗರಸಭೆ, ವಿಧಾನಸಭೆ ಹಾಗೂ ಲೋಕಸಭೆಗಳಿಗೆ ಸ್ಪರ್ಧಿಸಿದ್ದು, ಒಂದು ಅವಧಿಗೆ ಪುರಸಭಾ ನಾಮನಿರ್ದೇಶಿತ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಿದ ಇವರು; ನಂತರದಲ್ಲಿ ದಳ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಒಟ್ಟು ಹದಿನೇಳು ಬಾರಿ ಸ್ಪರ್ಧೆ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಇದೀಗ ‘ನಾನೊಬ್ಬ ನಿಮ್ಮ ಸೇವಕ’ ಎಂಬ ಘೋಷವಾಕ್ಯದೊಂದಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನಸೇವೆಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಮ್ಮೆ ಸ್ಪರ್ಧೆಗೆ ಇಳಿದಿದ್ದಾರೆ.