ಶನಿವಾರಸಂತೆ. ಮೇ ೪: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಜಿಲ್ಲೆಯ ಗಡಿಭಾಗ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
ನಂತರ ಬೆಸೂರು, ನಿಲುವಾಗಿಲು, ಆಗಳಿ, ಚಿಕ್ಕಭಂಡಾರ, ಕಟ್ಟೆಪುರ, ನೀರುಗುಂದ, ಜನಾರ್ಧನಹಳ್ಳಿ, ಕೂಡ್ಲೂರು ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಮತ ಯಾಚಿಸಿದರು,
ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಬಳೂರು, ನೀರುಗುಂದ, ಶಿವರಳ್ಳಿ, ಶಿರಹ, ಊರುಗುತ್ತಿ, ಕ್ಯಾತೆ, ಕೊಡ್ಲಿಪೇಟೆ ಪಂಚಾಯಿತಿ ವ್ಯಾಪ್ತಿಯ ಕೆಳಕೊಡ್ಲಿ, ಹಂಪಾಪುರ, ಶಾಂತಪುರ, ದೊಡ್ಡಕೊಡ್ಲಿ, ಕಲ್ಲಾರೆ, ಕೆರಗನಹಳ್ಳಿ ಗ್ರಾಮಗಳಲ್ಲು ಪ್ರಚಾರ ಮಾಡಿದರು. ಗ್ರಾಮಗಳಲ್ಲಿ ಮತ ಯಾಚಿಸಿದ ಬಳಿಕ ಮಂಥರ್ ಗೌಡ ಮಾತನಾಡಿ, “ಜನ ಸೇವೆಗಾಗಿ ಚುನಾಣೆಯಲ್ಲಿ ಸ್ಪರ್ಧಿಸಿದ್ದೇನೆ. ಮಡಿಕೇರಿ ಕ್ಷೇತ್ರದಲ್ಲಿ ಬದಲಾವಣೆಗಾಗಿ ತನ್ನನ್ನು ಬೆಂಬಲಿಸುವAತೆ ಕೋರಿದರು. ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಎಚ್.ಎಸ್.ಚಂದ್ರಮೌಳಿ, ಮುಖಂಡರಾದ ಕೆ.ಎಂ .ಲೋಕೇಶ್, ಎಚ್.ಆರ್. ಸುರೇಶ್, ಜೆ.ಆರ್. ಫಾಲಾಕ್ಷ, ತಾಕೇರಿ ಸತೀಶ, ಯಾಕೂಬ್, ವಕೀಲ ಬಿ.ಈ. ಜಯೇಂದ್ರ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಸದಸ್ಯ ಡಾ,ಉದಯಕುಮಾರ್, ಗಂಗಾಧರ್, ಕಾರ್ಯದರ್ಶಿ ಜೆ.ಎಲ್.ಜನಾರ್ಧನ್, ಮುಖಂಡರಾದ ಕೆ.ಆರ್.ಚಂದ್ರಶೇಖರ್, ಔರಂಗ್ ಜೇಬ್, ಮಲ್ಲೇಶ್, ಸುಲೈಮಾನ್, ದೌಲತ್ ಹುಸೇನ್, ವೇದಕುಮಾರ್, ವಾಹಬ್, ತೇಜಕುಮಾರ್, ಮೇದಪ್ಪ, ದೊಡ್ಮನೆ ಗಿರೀಶ, ಬಿ.ಕೆ.ದಿನೇಶ್, ಪ್ರಕಾಶ್, ಅಶೋಕ್, ವೆಂಕಟೇಶ್, ಗಣೇಶ್, ರಫೀಕ್, ಮಂಜು, ಪ್ರೇಮಕುಮಾರ್, ನಿಸಾರ್ ಮತ್ತಿತರರು ಹಾಜರಿದ್ದರು.