ಚೆಯ್ಯಂಡಾಣೆ, ಮೇ ೩: ಸುನ್ನಿ ವಿದ್ಯಾರ್ಥಿ ಸಂಘಟನೆ ಎಸ್‌ಕೆಎಸ್‌ಎಸ್‌ಎಫ್ ಇದರ ಎಡಪಾಲ ಶಾಖೆಯ ಅಧೀನದಲ್ಲಿ ಕೊಡಗು ಜಿಲ್ಲೆಯ ಹಾಗೂ ರಾಜ್ಯದ ಹಲವಾರು ಜಿಲ್ಲೆಗಳ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಡಪಾಲ ಗ್ರಾಮದ ಸುನ್ನಿ ವಿದ್ಯಾರ್ಥಿಗಳನ್ನು ಒಂದೇ ಸೂರಿನಡಿ ಸಂಘಟನಾತ್ಮಕವಾಗಿ ಏಕೀಕರಿಸಿ ವ್ಯಾಸಂಗಕ್ಕೆ ಬೇಕಾದ ಎಲ್ಲ ಸೌಲಭ್ಯ ನಿರ್ವಹಿಸುವ ಮತ್ತು ಗ್ರಾಮದ ಮಕ್ಕಳನ್ನು ಶೈಕ್ಷಣಿಕ ಕ್ಷೇತ್ರದತ್ತ ಹೆಚ್ಚು ಆಕರ್ಷಿಸುವ ವೇದಿಕೆಯಾದ ಎಸ್‌ಕೆ ಎಸ್‌ಎಸ್‌ಎಫ್ ಕ್ಯಾಂಪಸ್ ವಿಂಗ್ ಇದರ ನೂತನ ಶಾಖೆಯ ಅಧಿಕೃತ ಘೋಷಣೆಯನ್ನು ಏಪ್ರಿಲ್ ೨೬ ರಂದು ಕೊಡಗು ಜಿಲ್ಲಾ ನಾಇಬ್ ಖಾಝಿ ಕೇಂದ್ರ ಸಮಸ್ತ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ಲಾ ಪೈಝಿರವರು ಎಡಪಾಲದ ಅವರ ನಿವಾಸದಲ್ಲಿ ಅಧಿಕೃತವಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಎಡಪಾಲ ಶಾಖೆಯ ಪ್ರಧಾನ ಕಾರ್ಯದರ್ಶಿ ಹಾರಿಸ್ ಬಾಖವಿ, ಕಾರ್ಯದರ್ಶಿ ಜಲೀಲ್ ಕುರಿಕ್ಕಡೆ, ಜಿಲ್ಲಾ ಕೌನ್ಸಿಲ್ ಪ್ರತಿನಿಧಿ ಸಹೀದ್ ಫೈಝಿ, ಕ್ಯಾಂಪಸ್ ವಿಂಗ್ ಉಸ್ತುವಾರಿಗಳಾದ ಶಬೀರ್ ಫೈಝಿ ಅಲ್ ಮಅಬರಿ, ಸಿನಾನ್ ಶರಫಿ ಹಾಗೂ ಸಮಿತಿ ಪದಾಧಿಕಾರಿಗಳಾದ ಅಸ್ಲಂ, ಶಫೀಕ್, ತಾಜುದ್ದೀನ್, ಶಂಸೀರ್, ಶಹೀರ್, ಮನಾಫ್ ಮತಿತ್ತರರು ಉಪಸ್ಥಿತರಿದ್ದರು.