ಮಡಿಕೇರಿ, ಮೇ ೩: ಇಲ್ಲಿನ ಮಲ್ಲಿಕಾರ್ಜುನ ನಗರದಲ್ಲಿರುವ ಶ್ರೀ ಕೋದಂಡರಾಮ ದೇವಾಲಯದ ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲ ಶೋತ್ಸವ ಅಂಗವಾಗಿ ವಿವಿಧ ಪೂಜಾದಿ, ಹೋಮ ಹವನ ಗಳೊಂದಿಗೆ ಪ್ರಧಾನ ಕಲಶ ಸಹಿತ ಉತ್ಸವಮೂರ್ತಿ ಮೆರವಣಿಗೆ ಮಂಜಿನನಗರಿ ಮಡಿಕೇರಿಯಲ್ಲಿ ವಿಜೃಂಭಣೆಯಿAದ ನೆರವೇರಿತು.
ಬೆಳಿಗ್ಗೆ ನಗರದ ಗಾಂಧಿ ಮೈದಾನದಿಂದ ಹೊರಟ ಮೆರವಣಿಗೆಯ ಮುಂಚೂಣಿಯಲ್ಲಿ ವೀರತ್ವದ ಹೆಗ್ಗುರುತಾಗಿರುವ ಹುಲಿ ವೇಷಧಾರಿಗಳ ಕುಣಿತ, ಪೂಜಾ ಕುಣಿತ, ವೀರಗಾಸೆ ನೃತ್ಯಗಳು ರಾಜಮಾರ್ಗದುದ್ದಕ್ಕೂ ಕಣ್ಮನ ಸೆಳೆದವು. ಇವರೊಂದಿಗೆ ಕಲಶ ಹೊತ್ತ ಮಹಿಳೆಯರು, ದೇವಾಲಯ ಪ್ರತಿಷ್ಠಾಪನೆಯ ಪ್ರಧಾನ ಕಲಶ ಸಹಿತ ರಾಮ-ಲಕ್ಷö್ಮಣ-ಸೀತೆ-ಆಂಜನೇಯರ ಉತ್ಸವ ಮೂರ್ತಿಗಳಿದ್ದ ಮಂಟಪದೊAದಿಗೆ ಸಾಗುತ್ತಾ ಮೆರವಣಿಗೆಗೆ ವಿಶೇಷ ಆಕರ್ಷಣೆ ತುಂಬಿದರು. ಭಜನೆಯಲ್ಲಿ ನಿರತರಾಗಿದ್ದ ಮಹಿಳೆಯರು, ಮಕ್ಕಳು ಹಾದಿಯುದ್ದಕ್ಕೂ ಭಜನೆಯ ಮೂಲಕ ರಾಮನಾಮ ಜಪ ಹಾಡುತ್ತಾ ಸಾಗಿದರು.
ಭಟ್ಕಳದ ಚಂಡೆ ಮೇಳದೊಂದಿಗೆ ಬೃಹದಾಕಾರದ ಆಂಜನೇಯನ ವೇಷ ತೊಟ್ಟಿದ್ದ ವೇಷಧಾರಿ ಮೆರವಣಿಗೆ ಯುದ್ದಕ್ಕೂ ಎಲ್ಲರ ಆಕರ್ಷಣೆಯ ಕೇಂದ್ರಬಿAದುವಾಗಿದ್ದರು. ಹುಲಿ ವೇಷಧಾರಿಗಳಲ್ಲಿ ಈರ್ವರು ಬಾಲಕಿಯರು ಬಿಸಿಲಿನ ಝಳಕ್ಕೆ ಮೈಯೊಡ್ಡಿ ನರ್ತಿಸುತ್ತಿದ್ದುದು ಅಚ್ಚರಿ ಮೂಡಿಸಿತ್ತು. ಉತ್ಸವ ಮೂರ್ತಿ ಗಳೊಂದಿಗೆ ನಾದಸ್ವರದ ಗಾನವೂ ತೇಲಿ ಬರುತ್ತಿತ್ತು.
(ಮೊದಲ ಪುಟದಿಂದ) ಗಾಂಧಿ ಮೈದಾನದಿಂದ ಹೊರಟು, ಜ.ತಿಮ್ಮಯ್ಯ ವೃತ್ತಕ್ಕಾಗಿ ಹಾದು, ನಂತರ ಮುಖ್ಯ ರಸ್ತೆಯಲ್ಲಿ ಸಾಗಿ ಹಳೆ ಖಾಸಗಿ ಬಸ್ ನಿಲ್ದಾಣ - ಇಂದಿರಾಗಾAಧಿ ವೃತ್ತಕ್ಕಾಗಿ ಮಲ್ಲಿಕಾರ್ಜುನ ನಗರದಲ್ಲಿರುವ ದೇವಾಲಯದಲ್ಲಿ ಮೆರವಣಿಗೆ ಸಮಾಪನಗೊಂಡಿತು. ಮೆರವಣಿಗೆಯುದ್ದಕ್ಕೂ ದಣಿದವರಿಗೆ ದೇವಾಲಯ ಸಮಿತಿಯವರು ನೀರು, ಮಜ್ಜಿಗೆ ವಿತರಣೆ ಮಾಡುತ್ತಿದ್ದರು.
ಪೂಜಾದಿ ಕಾರ್ಯ
ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಅಂಗವಾಗಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಗುರುಗಣಪತಿ ಪೂಜೆ, ಸಂಕಲ್ಪ ಗಣಪತಿ ಹೋಮ, ವೇದ ಪಾರಾಯಣ, ಸುಂದರಕಾAಡ ಪಾರಾಯಣ, ರಾಮಾಯಣ ಪಾರಾಯಣ, ನವಗ್ರಹ ಹೋಮ, ಬಿಂಬ ಶುದ್ಧಿ, ಬಿಂಬಾಧಿವಾಸ ಪ್ರಕ್ರಿಯೆ, ಶಾಂತಿ ಹೋಮ, ದೇವರ ಬಿಂಬಿ ಶಯ್ಯಾಧಿವಾಸ ಪ್ರಕ್ರಿಯೆಗಳು, ಬ್ರಹ್ಮಕಲಶ ಮಂಡಲ ರಚನೆ, ೧೦೮ ಕಲಶ ಸಹಿತ ಬ್ರಹ್ಮ ಕಲಶಾಧಿವಾಸ, ಶಿಖರಾಧಿವಾಸ, ಬ್ರಹ್ಮಕಲಶ ಸ್ಥಾಪನೆ, ಮಹಾಪೂಜೆ, ಅಷ್ಟಾವಧಾನ ಸೇವೆ, ದೀಪಾರಾಧನೆ ನೆರವೇರಿದವು. ಮಧ್ಯಾಹ್ನ ಶ್ರೀ ವಿಜಯ ವಿನಾಯಕ ದೇವಾಲಯದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯ ಹಾಗೂ ಮೈಸೂರಿನ ಕೆ. ಶ್ರೀನಿವಾಸ ಉಪಾಧ್ಯ ಅವರುಗಳ ನೇತೃತ್ವದಲ್ಲಿ ಪೂಜಾದಿ ಕಾರ್ಯಗಳು ನೆರವೇರಿದವು. ಮಧ್ಯಾಹ್ನ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಶ್ರೀ ಕೋದಂಡರಾಮ ಜೀರ್ಣೋದ್ಧಾರ ಸಮಿತಿ, ಕೋದಂಡರಾಮ ದೇವಾಲಯ ಟ್ರಸ್ಟ್, ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ, ಶ್ರೀ ರಾಮ ಸೇವಾ ಸಮಿತಿ, ಜ್ಯೋತಿ ಯುವಕ ಸಂಘ, ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಉಪಸಮಿತಿ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇಂದಿನ ಕಾರ್ಯಕ್ರಮ
ತಾ. ೪ ರಂದು (ಇಂದು) ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ವಿಶೇಷ ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ಪ್ರತಿಷ್ಠಾ ಹೋಮ, ಬೆಳಿಗ್ಗೆ ೭.೪೫ರ ವೃಷಭ ಲಗ್ನದಲ್ಲಿ ಶ್ರೀ ದೇವರ ಪ್ರತಿಷ್ಠೆ, ತತ್ವಕಲಾ ಹೋಮ, ಪೂರ್ಣಾಹುತಿ, ೧೦.೦೫ಕ್ಕೆ ಮಿಥುನ ಲಗ್ನದಲ್ಲಿ ಬ್ರಹ್ಮ ಕುಂಭಾಭಿಷೇಕ, ವ್ಯಾಸ ಪೂಜೆ, ಅಲಂಕಾರ ಪೂಜೆ, ನೈವೇದ್ಯ ಮಹಾಪೂಜೆ, ಕ್ಷೇತ್ರದ ಮುಂದಿನ ನಿತ್ಯ ನೈಮಿತ್ತಿಕಾದಿಗಳ ಬಗ್ಗೆ ಪ್ರತಿಜ್ಞಾವಿಧಿ, ಪ್ರಸನ್ನ ಪೂಜೆ, ಆಚಾರ್ಯ ಪೂಜೆ, ಮಂಗಳ ಮಂತ್ರಾಕ್ಷತೆ, ರಾಷ್ಟಾç ಶೀರ್ವಾದ ನಡೆಯಲಿದೆ. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ದೇವಾಲಯದ ಮುಂಭಾಗದ ಸ್ಥಳದಲ್ಲಿ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯ ಕ್ರಮಗಳು ಸಂಜೆ ೫ ಗಂಟೆಯ ಬಳಿಕ ನಡೆಯಲಿವೆ.
ಪುತ್ತೂರಿನ ಜ್ಯೋತಿಷಿಗಳಾದ ಈ. ಗೋಪಾಲಕೃಷ್ಣ ಭಟ್ಟ ಅವರು ಸಭಾ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮಿ, ಬೆಂಗಳೂರಿನ ಅಲಸೂರು ಶ್ರೀರಾಮ ಕೃಷ್ಣ ಮಠದ ಬೋಧಸ್ವರೂಪಾನಂದ ಮಹಾರಾಜ್, ಕ್ಷೇತ್ರ ತಂತ್ರಿಗಳಾದ ವೇದಮೂರ್ತಿ ಕೃಷ್ಣ ಉಪಾಧ್ಯ, ಮಡಿಕೇರಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಗೋವಿಂದ ಸ್ವಾಮಿ ಅವರುಗಳು ಆಶೀರ್ವಚನ ನೀಡಲಿದ್ದಾರೆ. ಕಾಫಿ ಬೆಳೆಗಾರರು ಹಾಗೂ ದಾನಿಗಳಾದ ಮಂಡಿರ ದೇವಿ ಪೂಣಚ್ಚ, ಡಾ. ಶ್ಯಾಂ ಅಪ್ಪಣ್ಣ, ಬಿಲ್ಡರ್ ಕಿಶೋರ್ ಬಾಬು, ಮಡಿಕೇರಿ ಶಿವ ಜ್ಯುವೆರ‍್ಸ್ನ ಮಧುಕರ್ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಿ. ರಾಜೇಂದ್ರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಎಸ್.ಎಸ್. ಸಂಪತ್‌ಕುಮಾರ್, ಪ್ರತಿಷ್ಠಾ ಸಮಿತಿ ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಸುಬ್ಬರಾವ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾಯದರ್ಶಿ ಹೆಚ್.ಎನ್. ನಂಜುAಡ, ಕೋದಂಡರಾಮ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹೆಚ್.ವಿ. ಸುಧಾಕರ್, ಬ್ರಹ್ಮಕಲಶೋತ್ಸವ ಸಮಿತಿ ಖಜಾಂಚಿ ಎಸ್. ಕುಶಲ, ರಾಮ ಸೇವಾ ಸಮಿತಿ ಅಧ್ಯಕ್ಷ ಹೆಚ್.ಎನ್ ತಿಮ್ಮಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಆರ್. ವಿಶ್ವನಾಥ್ ಉಪಸ್ಥಿತರಿರಲಿದ್ದಾರೆ.