ಸುAಟಿಕೊಪ್ಪ, ಮೇ ೩: ಸುಂಟಿಕೊಪ್ಪ ಡಿ.ಶಿವಪ್ಪ ಸ್ಮಾರಕ ೨೫ನೇ ವರ್ಷದ ಗೋಲ್ಡ್ ಕಪ್ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯು ಬ್ಲೂಬಾಯ್ಸ್ ಯೂತ್ ಕ್ಲಬ್ ಆಶ್ರಯದಲ್ಲಿ ಮೇ ೧೯ ರಿಂದ ೨೮ ರವರೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಆಲಿಕುಟ್ಟಿ ತಿಳಿಸಿದ್ದಾರೆ.

ಕಳೆದ ೨೪ ವರ್ಷಗಳಿಂದ ಡಿ. ಶಿವಪ್ಪ ಸ್ಮಾರಕ ಗೋಲ್ಡ್ ಕಫ್ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಬೆಳ್ಳಿ ಮಹೋತ್ಸವವನ್ನು ಈ ಬಾರಿ ಆಚರಿಸಿಕೊಳ್ಳುತ್ತಿದ್ದು, ಫುಟ್ಬಾಲ್ ಪ್ರಖ್ಯಾತಿ ಪಡೆದಿರುವ ಅತೀ ಹೆಚ್ಚು ಫುಟ್ಬಾಲ್ ಪ್ರೇಮಿಗಳನ್ನು ಹೊಂದಿರುವ ಸುಂಟಿಕೊಪ್ಪ ಸುತ್ತಮುತ್ತಲಿನ ಗ್ರಾಮಗಳ ಹಬ್ಬವೆಂದೇ ಗುರುತಿಸಿಕೊಂಡಿರುವ ಫುಟ್ಬಾಲ್ ಪಂದ್ಯಾವಳಿಯು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ. ೧೯ ರಿಂದ ೨೮ ರವರೆಗೆ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆಲಿಕುಟ್ಟಿ ತಿಳಿಸಿದ್ದಾರೆ.

ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಗಳು ನೊಂದಾಯಿಸಿಕೊಳ್ಳಲು ಅಧ್ಯಕ್ಷ ಆಲಿಕುಟ್ಟಿ ೯೪೪೮೯೨೨೪೧೪, ಬ್ಲೂಬಾಯ್ಸ್ ಯೂತ್ ಕ್ಲಬ್ ಹಿರಿಯ ಸದಸ್ಯರು ಹಾಗೂ ಸಂಘದ ಸಲಹೆಗಾರರಾದ ಟಿ.ಯು. ಪ್ರಸನ್ನ ೯೯೭೨೮೪೭೬೫೬ ಇವರನ್ನು ಸಂಪರ್ಕಿಸುವAತೆ ಕೋರಿದ್ದಾರೆ.