ವೀರಾಜಪೇಟೆ, ಮೇ ೩: ರಾಜ್ಯ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಪರ ವೀರಾಜಪೇಟೆ ತೆಲುಗರ ಬೀದಿಯ ಮಾರಿಯಮ್ಮ ಗುಡಿಯಿಂದ ಗಡಿಯಾರ ಕಂಬಕ್ಕಾಗಿ ಖಾಸಗಿ ಬಸ್ ನಿಲ್ದಾಣದವರೆಗೆ ರೋಡ್ ಶೋ ನಡೆಸಿದರು.
ಬಳಿಕ ನಗರದ ಖಾಸಗಿ ಬಸ್ಸು ನಿಲ್ದಾಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸದಾನಂದಗೌಡ, ಕೊಡಗಿನ ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ ವೀರಾಜಪೇಟೆ ವಿಧಾನ ಸಭಾಕ್ಷೇತ್ರದಲ್ಲಿ ಕೇರಳದ ಕೆಲವರು ಷಡ್ಯಂತ್ರÀ ನಡೆಸುತ್ತಿದ್ದು, ಕಾಂಗ್ರೆಸ್ ಪರ ಮತ ಹಾಕುವಂತೆ ಪ್ರಚಾರ ನಡೆಸುತ್ತಿದ್ದಾರೆ. ಈ ಷಡ್ಯಂತ್ರವನ್ನು ಅರಿತು ಈ ಕ್ಷೇತ್ರದ ಜನ ಮತದಾನದಲ್ಲಿ ಈ ಬಾರಿ ಜಾಗೃತೆ ವಹಿಸಬೇಕಿದೆ. ಕೊಡಗಿನ ಎರಡು ಶಾಸಕರಿಂದ ಸಾಕಷ್ಟು ಅಭಿವೃದ್ಧಿಯಾಗಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಶ್ರಮಿಸಿದ್ದು ಕ್ರೀಡೆಗೂ ಅನುದಾನ ದೊರೆತ್ತಿದ್ದು ಈ ಬಾರಿ ಕೊಡವ ಹಾಕಿ ಹಬ್ಬಕ್ಕೆ ಒಂದು ಕೋಟಿ ಅನುದಾನ ನೀಡಿದೆ. ಆದರೆ ಕಾಂಗ್ರೆಸ್ ಮಡಿಕೇರಿಯಲ್ಲಿ ಸ್ಥಳಿಯ ಅಭ್ಯರ್ಥಿ ಬದಲಿಗೆ ಹೊರ ಜಿಲ್ಲೆಯ ಅಭ್ಯರ್ಥಿಗೆ ಮಣೆ ಹಾಕಿದೆ. ವೀರಾಜಪೇಟೆಗೆ ಅಪರಿಚಿತ ವ್ಯಕ್ತಿಯನ್ನು ತಂದು ಕಣಕ್ಕೆ ಇಳಿಸಿದೆ ಎಂದು ದೂರಿದರು.
ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಮಾತನಾಡಿ ಕೊರೊನಾ ಕಾಲದಲ್ಲಿ, ಪ್ರಕೃತಿ ವಿಕೋಪ ಸಂದರ್ಭ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಾಕಷ್ಟು ಪ್ರಮಾಣದಲ್ಲಿ ಅನುದಾನಗಳು, ಸಾಮಾನ್ಯ ರೈತಾಪಿ ವರ್ಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ೧೩೮ ಕೋಟಿ ಮಳೆಹಾನಿ ಪರಿಹಾರ ಕೊಡಲಾಗಿದೆ. ಅಭಿವೃದ್ಧಿ, ಕರ್ನಾಟಕದಲ್ಲಿ ಆಗಿದೆ. ಅದಕ್ಕೆ ಪೂರಕ ಸಹಕಾರ ಕೇಂದ್ರದಿAದಲೂ ಸಿಕ್ಕಿದೆ. ಆಶ್ವಾಸನೆ ಆಧಾರದಲ್ಲಿ ಚುನಾವಣೆ ನಡೆಯಬಾರದು. ನಡೆದ ಹಾದಿಯ ಆಧಾರದಲ್ಲಿ ಚುನಾವಣೆ ನಡೆಯಬೇಕು. ಯಾರು ಅರ್ಹರು ಅವರಿಗೆ ಅವಕಾಶ ಕೊಡಿ. ವಿದ್ಯಾಭ್ಯಾಸ, ಉದ್ಯೋಗ, ಆರೋಗ್ಯಕ್ಕೂ ಒತ್ತು ನೀಡಲಾಗಿದೆ. ನೀರಾವರಿಗೂ ಅನುದಾನ ನೀಡಲಾಗಿದೆ. ಬಿಜೆಪಿ ಸರಕಾರ ಎಲ್ಲವನ್ನೂ ನೀಡಿದೆ. ಮುಂದೆಯೂ ನುಡಿದಂತೆ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರೊAದಿಗೆ ತೆರೆದ ವಾಹನದಲ್ಲಿ ತೆರಳಿದ ಸದಾನಂದ ಗೌಡ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಶಿಸ್ತು ಸಮಿತಿ ಸದಸ್ಯೆ ರೀನಾ ಪ್ರಕಾಶ್, ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಹಿರಿಯ ಪ್ರಮುಖರು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಜರಿದ್ದರು.